Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

Thursday, 04.05.2017, 3:00 AM       No Comments

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ…

ಡಿಫರೆಂಟ್ ಜಡೆ

ಕೋರಮಂಗಲದ ರೆಡ್ಡಿ ಜನಸಂಘ (ಆರ್​ಜೆಎಸ್) ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ದಾಕ್ಷಾಯಿಣಿ ಕಳಿಸಿರುವ ಚಿತ್ರ ಇದು. ಭೌತಶಾಸ್ತ್ರ ಪ್ರಯೋಗಾಲಯದ ಎದುರು ಮಾಡಿರುವ ಈ ‘ಸೆಲ್ಪಿ ಪ್ರಯೋಗ’ದಲ್ಲಿ ಮೂವರು ಜಡೆ ಮುಂದಕ್ಕೆ ಬಿಟ್ಟುಕೊಂಡಿದ್ದರೆ, ಕಡೆಯವರು ತಮ್ಮ ಡಿಫರೆಂಟ್ ಮನಸ್ಥಿತಿಗೆ ತಾವೇ ನಗುತ್ತಿರುವಂತಿದೆ!


ಎಂವಿ ಮಾದರಿ

‘ಇಂಜಿನಿಯರಿಂಗ್’ ಎಂದಾಕ್ಷಣ ಸರ್ ಎಂ. ವಿಶ್ವೇಶ್ವರಯ್ಯ ಮಾಡಿದ ಅಗಾಧ ಸಾಧನೆಗಳ ಚಿತ್ರಣ ಮನದಲ್ಲಿ ಮೂಡುತ್ತದೆ. ಯಲಹಂಕದ ಈಸ್ಟ್ ವೆಸ್ಟ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ಮೋಹನ್ ಹಾಗೂ ಫ್ರೆಂಡ್ಸ್ ‘ನಾವೂ ದೊಡ್ಡ ಸಾಧನೆ ಮಾಡ್ತೀವಿ’ ಎಂಬ ಉಮೇದಿಯಲ್ಲಿ ಸರ್ ಎಂವಿ ಪ್ರತಿಮೆ ಎದುರು ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ.


ಬೈತಲೆಗೆ ಬೈ?!

ತಲೆಗೂದಲನ್ನು ಲಕ್ಷಣವಾಗಿ ಬಾಚಿಕೊಂಡು, ನಡುಮಧ್ಯೆ ಸುಂದರ ಬೈತಲೆ ತೆಗೆದು, ಹಣೆ ಮೇಲೆ ಕುಂಕುಮವಿಟ್ಟು… ಹೀಗೆಲ್ಲ ಬಣ್ಣಿಸತೊಡಗಿದರೆ, ಅದು ಸೀರೆಯುಟ್ಟ ನಾರಿಯೇ ಆಗಿರುತ್ತಾಳೆ. ಮಹಾರಾಣಿ ಆರ್ಟ್ಸ್, ಕಾಮರ್ಸ್ ಮತ್ತು ಮ್ಯಾನೇಜ್​ವೆುಂಟ್ ಕಾಲೇಜಿನ ಎಂಎ ಪ್ರಥಮ ವರ್ಷದ ಗೆಳತಿಯರಲ್ಲಿ ಹೆಚ್ಚಿನವರು ಬೈತಲೆ ಗೋಜಿಗೆ ಹೋಗದೆ ಎಥ್ನಿಕ್ ಡೇ ಶಿಷ್ಟಾಚಾರ ಪೂರೈಸಿದ್ದಾರೆ. ಫೋಟೊ ಕಳಿಸಿದವರು ಸುಷ್ಮಾ.

Leave a Reply

Your email address will not be published. Required fields are marked *

Back To Top