Wednesday, 26th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Wednesday, 03.01.2018, 3:01 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 ಒಂದಾಗಿರುವ ಸ್ನೇಹಾನಂದ

ಮರ ಒಂದೇ ಆದರೂ ಅದರ ರೆಂಬೆಕೊಂಬೆಗಳು ವಿವಿಧ ದಿಕ್ಕುಗಳಲ್ಲಿ ಆಗಸದ ಹೊಸ ಎತ್ತರಗಳತ್ತ ಕೈಚಾಚಲು ಹವಣಿಸುತ್ತವೆ. ಯುವ ಮನಸ್ಸುಗಳೂ ಅಷ್ಟೇ, ತರಗತಿ ಒಂದೇ ಆದರೂ ಪ್ರತಿಯೊಬ್ಬರ ಆಸೆ, ಆಕಾಂಕ್ಷೆ, ಗುರಿಗಳು ಬೇರೆ. ಬೇರೆಗಳೆಲ್ಲ ಒಂದಾಗಿರುವ ಕ್ಷಣದ ಸ್ನೇಹಾನಂದದಲ್ಲಿದ್ದಾರೆ ನಾಗಸಂದ್ರದ ಸೌಂದರ್ಯ ಪಿಯು ಕಾಲೇಜಿನ ಸಹಪಾಠಿಗಳು. ಚಿತ್ರ ಕಳಿಸಿದವರು ಪ್ರಜ್ವಲ್.


 ಪರಿಸರವೂ ಮುಖ್ಯ

ತಮ್ಮ ಮುಖಭಾವ ಗಳನ್ನಷ್ಟೇ ಉಳಿಸಿಕೊಂಡು, ಹಿನ್ನೆಲೆ ಪರಿಸರವನ್ನು ಕತ್ತರಿಸುವುದು ಸೆಲ್ಪಿ ತೆಗೆಯುವವರ ಕೆಟ್ಟ ಗೀಳು. ‘ನಾವು ಅಂಥವರಲ್ಲಪ್ಪ. ನಮ್ಮೊಂದಿಗೆ ನಾವಿರುವ ಪರಿಸರವೂ ಮುಖ್ಯ’ ಎಂಬ ವಿಶಾಲ ದೃಷ್ಟಿಕೋನದಲ್ಲಿ ಚಿತ್ರ ತೆಗೆದಿದ್ದಾರೆ ಬೆಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಸರಿತಾ.


ಸಾಮಾನ್ಯರು ನಾವು…

‘ಶ್ರೀಸಾಮಾನ್ಯನೆ ಭಗವನ್ ಮಾನ್ಯಂ… ಶ್ರೀಸಾಮಾನ್ಯನೆ ಭಗವದ್ ಧನ್ಯಂ… ಸಾಮಾನ್ಯತೆ ಭಗವಂತನ ರೀತಿ… ಸಾಮಾನ್ಯವೆ ದಿಟ ಭಗವದ್ ಪ್ರೀತಿ..’ ಅಂತ ಹಾಡಿ ‘ಸಾಮಾನ್ಯತೆಯ ಪೂಜೆ’ಗೆ ಕರೆ ನೀಡಿದ್ದರು ರಾಷ್ಟ್ರಕವಿ ಕುವೆಂಪು. ಅಂಥ ಶ್ರೇಷ್ಠ ಪೂಜೆಗೆ ದೀಕ್ಷೆ ಪಡೆಯಲು ಅಣಿಯಾದವರಂತೆ ವಿನಮ್ರ ನೋಟ ಬೀರುತ್ತಿದೆ ಬಾಣಸವಾಡಿಯ ಬಿಎಂಎಸ್ ಕಾಲೇಜಿನ ಬಿಇ ಅಂತಿಮ ವರ್ಷದ ಬಳಗ. ಪ್ರಕಾಶ್ ಸಜ್ಜನ್ ಸೆರೆಹಿಡಿದ ಚಿತ್ರವಿದು.

Leave a Reply

Your email address will not be published. Required fields are marked *

Back To Top