Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಕ್ಯಾಂಪಸ್ ಸೆಲ್ಪಿ

Saturday, 12.08.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಸ್ನೇಹದ ಅಂಟು

‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು…’ ಅಂತ ಆರಂಭವಾಗುತ್ತೆ ವರಕವಿ ಬೇಂದ್ರೆಯವರ ಖ್ಯಾತ ಕವಿತೆ ‘ಸಖಿಗೀತ’. ಅದೇ ರೀತಿ, ‘ಚೂಯಿಂಗ್ ಗಮ್ಂತೆ ಅಂಟಿಕೊಂಡ ಗೆಳತಿಯರು ನಾವು’ ಎಂಬ ಸಂದೇಶ ಸಾರುತ್ತಿದ್ದಾರೆ ವಿಜಯ ಕಾಲೇಜಿನ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿಯರಾದ ಓಂಶಕ್ತಿ, ಹರ್ಷಿತಾ, ಪವಿತ್ರಾ, ಶಿಲ್ಪಾ.

ನಾನೇ ಬಾಸು!

ಕಾಲೇಜಿಗೆ ಹೋಗುವಾಗ ಅಥವಾ ಕಾಲೇಜಿಂದ ಮನೆದಾರಿ ಹಿಡಿದಾಗ ಬಸ್ಸು ತಡವಾದರೆ ಏನು ಮಾಡ್ಬೇಕು? ಈ ಸವಾಲಿಗೆ ಜವಾಬಿನಂತಿದೆ ವಿಜಯನಗರ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರ ಬಳಗ ತೆಗೆದಿರುವ ಈ ಸೆಲ್ಪಿ. ಚಿತ್ರ ಕಳಿಸಿರುವ ಕವಿತಾ, ‘ನನ್ನ ಫ್ರೆಂಡ್ಸ್ ಗ್ರೂಪ್​ಗೆ ನಾನೇ ಬಾಸ್ ಗೊತ್ತಾ‘ ಅನ್ನುತ್ತಿದ್ದಾರಾ?!

ಫೈನ್ ಫ್ರೇಮ್

ಸ್ನೇಹಿತರು ಸಮಯ ಸಿಕ್ಕಾಗಲೆಲ್ಲ ಸೆಲ್ಪಿ ತೆಗೆಯುತ್ತಲೇ ಇರುತ್ತಾರೆ. ಆದರೆ ಅವುಗಳಲ್ಲಿ ನೆನಪಲ್ಲುಳಿಯೋದು ಕೆಲವೇ ಕೆಲವು. ವ್ಯವಸ್ಥಿತ ಚೌಕಟ್ಟಿನ ದೃಷ್ಟಿಯಿಂದ ಗಮನ ಸೆಳೆಯುವ ಈ ಚಿತ್ರ ತೆಗೆದವರು ವಾಸವಿ ಪದವಿ ಕಾಲೇಜಿನ 5ನೇ ಸೆಮ್ ಬಿಎ ವಿದ್ಯಾರ್ಥಿ ಅಭಿಷೇಕ್ ದೊರೆಸ್ವಾಮಿ.

Leave a Reply

Your email address will not be published. Required fields are marked *

Back To Top