Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Friday, 10.11.2017, 3:01 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ಕಣ್ಣ ಸಲಿಗೆ!

 ‘ಕಣ್ ಕಣ್ಣ ಸಲಿಗೆ.. ಸಲಿಗೆ ಅಲ್ಲ ಸುಲಿಗೆ…’ ಹಾಡಿನ ಸಾಲುಗಳನ್ನು ನೆನಪಿಸುವಂತೆ ತೀಕ್ಷ್ಣ ನೋಟ ಬೀರುತ್ತಿದ್ದಾರೆ ದೊಮ್ಮಸಂದ್ರದ (ಆನೇಕಲ್) ಶ್ರೀ ಸರಸ್ವತಿ ವಿದ್ಯಾನಿಕೇತನ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯನಿಯರು. ಪರಸ್ಪರ ಆತ್ಮೀಯ ಸ್ಪರ್ಶವಿರುವ ಈ ಚಿತ್ರ ಕಳಿಸಿದವರು ಅನಿತಾ.


ಸ್ವಸ್ಥ ವಿಚಾರ

 ಸ್ವಭಾವದಿಂದೊಂದಿಗೆ ಶಿಸ್ತುಬದ್ಧ ಕಲಿಕೆಗೆ ನಿಂತರೆ ಅಸಾಧ್ಯವಾದುದೆಲ್ಲವೂ ಸಾಧ್ಯ ವಾಗುತ್ತದೆ- ಎಂಬ ಅಮೂಲ್ಯ ವಿಚಾರವನ್ನು ತಮ್ಮ ಚಹರೆ ಮೂಲಕವೇ ರವಾನಿಸುತ್ತಿರುವ ಇವರು, ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೆದಿಕ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರು. ಚಿತ್ರ ಕಳಿಸಿದವರು ಎನ್.ಆರ್. ರೂಪಿಣಿ.


‘ವಿನ್’ ಧ್ಯಾನ

 ಪ್ರತಿಭೆ ಮತ್ತು ಅದೃಷ್ಟ-ಇವೆರಡರ ಮಿಸಳಭಾಜಿಯಂತಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಪ್ರತಿ ಸರಣಿಯಲ್ಲೂ ಗೆಲುವಿನ ಪತಾಕೆ ಹಾರಿಸುತ್ತಿದ್ದಾರೆ. ಕೊಹ್ಲಿ ಮಾದರಿಯ ಕನ್ನಡಕ, ಹೇರ್​ಸ್ಟೈಲ್ ಅನುಸರಿಸುವ ಉತ್ಸಾಹದಲ್ಲಿರುವ ರಾಜಾಜಿನಗರದ ಎಎಸ್​ಸಿ ಪದವಿ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ದರ್ಶನ್ ಆಂಡ್ ಫ್ರೆಂಡ್ಸ್ ಸಹ ‘ವಿನ್ ಸಿಂಬಲ್’ ಧ್ಯಾನದಲ್ಲಿದ್ದಾರೆ.

Leave a Reply

Your email address will not be published. Required fields are marked *

Back To Top