Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Monday, 08.01.2018, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ರಿಲ್ಯಾಕ್ಸ್ ಪ್ಲೀಸ್…

ಏರಲು- ಇಳಿಯಲು ಮಾಡಿರುವ ಮೆಟ್ಟಿಲುಗಳನ್ನು ಕುಳಿತುಕೊಳ್ಳಲು ಬಳಸಿಕೊಂಡು ‘ಓ ಮನಸೇ ರಿಲ್ಯಾಕ್ಸ್ ಪ್ಲೀಸ್’ ಎಂಬಂತೆ ನಿಟ್ಟುಸಿರು ಬಿಟ್ಟು ಸೆಲ್ಪಿ ನವೋತ್ಸಾಹ ಪಡೆದಿದ್ದಾರೆ ಬೆಂಗಳೂರು ವಿಶ್ವವಿದ್ಯಾಲಯದ ಗೆಳೆಯರು. ಚಿತ್ರ ರವಾನಿಸಿದವರು ಮಣಿಕಂಠ.


ಮೂಲೆಗುಂಪಾದವರು!

ಎಲ್ಲ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುವುದು ಒಳ್ಳೆಯ ಉದ್ಯೋಗ, ಗೌರವಯುತ ಸ್ಥಾನಮಾನಗಳಿಗಾಗಿ. ಈ ಬಗೆಯ ಪಯಣದಲ್ಲಿ ಮೂಲೆಗುಂಪು ಮಾಡಲು ಯತ್ನಿಸುವವರೂ ಇರುತ್ತಾರೆ. ಅಂಥವರ ತೃಪ್ತಿಗಾಗಿ ಅಕ್ಷರಶಃ ಮೂಲೆಗುಂಪಾದವರಂತೆ ತಮಾಷೆಯ ಪೋಸ್ ಕೊಟ್ಟಿದ್ದಾರೆ ಕೃಷ್ಣರಾಜಪುರದ ಶ್ರೀ ವೆಂಕಟೇಶ್ವರ ಪಿಯು ಕಾಲೇಜಿನ ಗಗನ್​ಗೌಡ ಆಂಡ್ ಗ್ಯಾಂಗ್.


ಸ್ನೇಹ ಏಕರೀತಿ

ಮಾಮೂಲಿ ಟಿ ಶರ್ಟ್, ಸ್ಟೈಲಿಶ್ ಟಿ ಶರ್ಟ್, ಅದರ ಮೇಲೆ ಗುಂಡಿಬಿಚ್ಚಿದ ಅಂಗಿ, ಬೊಂಬಾಟ್ ಜರ್ಕಿನ್​ಗಳು… ಈ ರೀತಿಯಾಗಿ ಮಾಡೆಲಿಂಗ್​ನಲ್ಲಿ ರ‍್ಯಾಂಪ್ ಮೇಲೆ ಪೋಸ್ ಕೊಡುವಂತೆ ಸೆಲ್ಪಿ ತೆಗೆದಿದ್ದಾರೆ ಶೇಶಾದ್ರಿಪುರಂ ಕಾಲೇಜಿನ ವಿಕಾಸ್. ‘ನಾವು ಹೊರಗೆ ಬೇರೆ ಇರಬಹುದು, ನಮ್ಮೊಳಗಿನ ಸ್ನೇಹ ಮಾತ್ರ ಒಂದೇ’ ಎಂಬ ಡೈಲಾಗ್ ಹೊಡೆಯುತ್ತಿವೆ ಇವರ ಕಣ್ಣುಗಳು!

Leave a Reply

Your email address will not be published. Required fields are marked *

Back To Top