Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Tuesday, 14.11.2017, 3:02 AM       No Comments

 

 

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ಕನ್ನಡ್ಕದೊಳ್ಗಿಂದ…

 ಕಾಲೇಜಿನಲ್ಲಿ ಗೆಳತಿಯರು ಜತೆಗಿದ್ದಾಗ ವೈಯಾರ ಮೆರೆದು ಪ್ರೇಮಲೋಕದ ಫೀಲ್ ಅನುಭವಿಸುವುದೂ ಉಂಟು. ಇಲ್ನೋಡಿ… ತನ್ನ ಗೆಳತಿಯರು ಕನ್ನಡಕ ಧರಿಸಿ ‘ಹೀರೋಯಿನ್ ಲುಕ್’ ಕೊಟ್ಟಿದ್ದನ್ನು ಸೆರೆಹಿಡಿದಿದ್ದಾರೆ ನೃಪತುಂಗ ರಸ್ತೆ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಶ್ಯಾಮಲಾ.


ನಾ ನಿನ್ನ ಹಿಂದೆ…

 ‘ನೀ ಓಡು ಮುಂದೆ.. ನಾ ನಿನ್ನ ಹಿಂದೆ…’ ಹಾಡಿನಲ್ಲಿನ ‘ಓಡು’ ಪದಕ್ಕೆ ಬದಲಾಗಿ ‘ಹೋಗು’ ಎಂದು ಸೇರಿಸುವ ಮೂಲಕ ಹೆಣ್ಣುಮಕ್ಕಳನ್ನು ಮುಂಚೂಣಿಗೆ ಬಿಟ್ಟು ಖುಷಿ ಅನುಭವಿಸುತ್ತಿದ್ದಾರೆ ಸೋಲದೇವನಹಳ್ಳಿಯ ಆಚಾರ್ಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂ.ಟೆಕ್. ವಿದ್ಯಾರ್ಥಿಗಳು. ಆಶಿಶ್, ಪವಿತ್ರಾ ಈ ಸೆಲ್ಪಿ ಸೂತ್ರಧಾರರು.


ನಮ್ಮ ಕಾಲ ಮೇಲೆ ನಾವು

ಪಿಲ್ಲರ್​ಗಳ ಮೇಲೆ ಕಾಲೇಜು ಕಟ್ಟಡ ನಿಂತರೆ, ನಾವು ‘ನಮ್ಮ ಕಾಲ ಮೇಲೆ ನಿಂತಿದ್ದೇವೆ’ ಎಂಬ ಸಂದೇಶವನ್ನು ಸಾಮೂಹಿಕವಾಗಿ ಒಗ್ಗಟ್ಟಿನೊಂದಿಗೆ ಸಾರುತ್ತಿದ್ದಾರೆ ಬಾಗಲೂರು ಮುಖ್ಯರಸ್ತೆಯ ದ್ವಾರಕಾನಗರದಲ್ಲಿರುವ ಬೃಂದಾವನ ಕಾಲೇಜ್ ಆಫ್ ಇಂಜಿನಿಯರಿಂಗ್​ನ ಬಿಇ ತೃತೀಯ ವರ್ಷದ ಮೆಕಾನಿಕಲ್ ವಿಭಾಗದ ಸ್ನೇಹಿತರ ಬಳಗ. ಚಿತ್ರ ಕಳಿಸಿದವರು ಪ್ರಶಾಂತ್.

Leave a Reply

Your email address will not be published. Required fields are marked *

Back To Top