Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಕೋಲಾರ ಜಿಲ್ಲೆಯಲ್ಲೂ ರಕ್ತಕ್ಕೆ ಅಭಾವ

Thursday, 14.06.2018, 3:00 AM       No Comments

ಪಿ.ಎಸ್. ಹರೀಶ್ ಕೋಲಾರ

ರಾಷ್ಟ್ರೀಯ ಮಾನದಂಡದ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ವಾರ್ಷಿಕ ಶೇ.1ರಷ್ಟು ರಕ್ತದ ಬೇಡಿಕೆಯಿದ್ದು, ಸ್ವಯಂ ಪ್ರೇರಿತ ರಕ್ತದಾನಕ್ಕೆ ಯುವಜನರ ನಿರಾಸಕ್ತಿ, ಗಣನೀಯ ಪ್ರಮಾಣದಲ್ಲಿ ರಕ್ತದಾನ ಶಿಬಿರ ನಡೆಯದಿರುವ ಕಾರಣದಿಂದ 2,000ದಿಂದ 3,000 ಯೂನಿಟ್​ನಷ್ಟು ರಕ್ತದ ಕೊರತೆ ಇದೆ.

ಅಪಘಾತ, ತುರ್ತು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ದಾನಿಗಳಿಂದ ಇಲ್ಲವೇ ರಕ್ತನಿಧಿ ಕೇಂದ್ರಗಳಿಂದ ರಕ್ತ ಪಡೆಯುವುದು ಅನಿವಾರ್ಯ. ಆದರೆ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ರಕ್ತನಿಧಿ ಕೇಂದ್ರಗಳಲ್ಲೇ ರಕ್ತಕ್ಕೆ ಅಭಾವ ಉಂಟಾಗಿದೆ. ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರದಲ್ಲಿ ರಕ್ತ ಸಂಗ್ರಹ ಘಟಕಗಳಿವೆ. ಜಿಲ್ಲಾಸ್ಪತ್ರೆ, ಕೆಜಿಎಫ್ ಆಸ್ಪತ್ರೆ, ಕೆಜಿಎಫ್ ಬೆಮೆಲ್ ನಗರದಲ್ಲಿ ರಕ್ತನಿಧಿ ಕೇಂದ್ರಗಳಿದ್ದು, ಆರ್.ಎಲ್. ಜಾಲಪ್ಪ ಆಸ್ಪತ್ರೆ, ಕೆಜಿಎಫ್ ಸಂಭ್ರಮ್ ಆಸ್ಪತ್ರೆಯಲ್ಲೂ ಬ್ಲಡ್ ಬ್ಯಾಂಕ್ ಇದೆ.

ಶಿಬಿರಗಳು: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರಕ್ತದಾನ ಶಿಬಿರ ನಡೆಯದಿರುವುದು, ಯುವ ಸಮುದಾಯ ಸ್ವಯಂ ಪ್ರೇರಿತ ರಕ್ತದಾನಕ್ಕೆ ಮುಂದಾಗದಿರುವುದರಿಂದ ಅವಶ್ಯಕತೆ ನೀಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 2013-14ರಿಂದ 2017-18ನೇ ಸಾಲಿನವರೆಗೆ ಒಟ್ಟು 371 ರಕ್ತದಾನ ಶಿಬಿರ ಆಯೋಜಿಸಿ 11,340 ಯೂನಿಟ್, ಬ್ಲಡ್ ಬ್ಯಾಂಕ್​ನಲ್ಲಿ 35,125 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಎಸ್ಸೆನ್ನಾರ್ ಆಸ್ಪತ್ರೆ ರಕ್ತನಿಧಿ ಕೇಂದ್ರದಿಂದ ಕಳೆದ ವರ್ಷ 45 ಶಿಬಿರ ನಡೆಸಿ 1856 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ.

ಕ್ರಿಯಾಯೋಜನೆ: ಜಿಲ್ಲೆಯ ರಕ್ತದ ಅವಶ್ಯಕತೆ ನೀಗಿಸಲು 2018-19ನೇ ಸಾಲಿಗೆ ಮೈಕ್ರೋ ಪ್ಲಾನ್ ರೂಪಿಸಿದ್ದು, ಸರ್ಕಾರಿ, ಖಾಸಗಿ ಪದವಿ ಕಾಲೇಜು, ಇಂಜಿನಿಯರಿಂಗ್ ಇನ್ನಿತರೆ ಕಾಲೇಜುಗಳನ್ನು ರಕ್ತಬ್ಯಾಂಕ್​ಗೆ ಸಂಪರ್ಕ ಕಲ್ಪಿಸಿ ವರ್ಷಕ್ಕೆರಡು ಬಾರಿ ಶಿಬಿರವನ್ನು ಕಡ್ಡಾಯವಾಗಿ ಆಯೋಜಿಸುವಂತೆ ಜಿಲ್ಲಾಧಿಕಾರಿಗಳಿಂದ ಆದೇಶಿಸಲಾಗಿದ್ದು, ಸಂಬಂಧಪಟ್ಟ ಕಾಲೇಜುಗಳಿಗೆ ತೆರಳಿ ನಿಗದಿತ ತಿಂಗಳಲ್ಲಿ ಶಿಬಿರ ಆಯೋಜಿಸುವ ಹೊಣೆ ರಕ್ತನಿಧಿ ಕೇಂದ್ರಗಳದ್ದು.

ರೆಡ್ ರಿಬ್ಬನ್ ಕ್ಲಬ್: ಜಿಲ್ಲೆಯ 40 ಸರ್ಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ಆರಂಭಿಸಲಾಗಿದ್ದು, ಆಸಕ್ತರನ್ನು ತಂಡದ ನಾಯಕನನ್ನಾಗಿ ಮಾಡಿ ಕ್ಲಬ್ ಮೂಲಕ ರಕ್ತದಾನ ಶಿಬಿರ ಕೈಗೊಂಡು ರಕ್ತ ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಜಿಲ್ಲಾ ಎಚ್​ಐವಿ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಂ. ಜಗದೀಶ್.

ಇಂದು ರಕ್ತದಾನಿ ದಿನ; ಜೂ.14 ವಿಶ್ವ ರಕ್ತದಾನಿಗಳ ದಿನ. ಜಿಲ್ಲೆಯಲ್ಲಿ ಸಾಂಕೇತಿಕವಾಗಿ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಮಾಲೂರಿನ ಕೆಎಲ್​ಇ ಪ್ರೌಢಶಾಲೆಯಲ್ಲಿ ಪಾಲಕರು ರಕ್ತದಾನ ಮಾಡಲಿದ್ದಾರೆ. ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲೂ ವೈದ್ಯ, ಸಿಬ್ಬಂದಿ ಶಿಬಿರ ಹಮ್ಮಿಕೊಂಡಿದ್ದಾರೆ. ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆಯಿಂದ ಜೂ. 21ರಂದು ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.

ಯಾರೇ ರಕ್ತದಾನ ಶಿಬಿರ ನಡೆಸಿದರೂ ಶೇ.25 ಯೂನಿಟ್ ರಕ್ತವನ್ನು ಸ್ಥಳೀಯ ಸರ್ಕಾರಿ ರಕ್ತನಿಧಿ ಕೇಂದ್ರಕ್ಕೆ ನೀಡಬೇಕೆಂಬ ನಿಯಮ ಪಾಲನೆ ಆಗದಿರುವುದರಿಂದ ಬೇಡಿಕೆ ಪೂರೈಸಲು ಕಷ್ಟವಾಗುತ್ತಿದೆ.

| ಡಾ. ಬಾಬು ಮಹೇಂದ್ರ ಪ್ರಸಾದ್, ರಕ್ತ ನಿಧಿ ಅಧಿಕಾರಿ, ಕೋಲಾರ

Leave a Reply

Your email address will not be published. Required fields are marked *

Back To Top