Saturday, 17th March 2018  

Vijayavani

ರಾಜ್ಯದಲ್ಲಿ ಮತ್ತೆ ರಾಹುಲ್​ ಟೆಂಪಲ್​ರನ್​ - ಉಡುಪಿಗೆ ವಿಸಿಟ್ಟು​​​.. ಕೃಷ್ಣಮಠಕ್ಕೆ ಡೌಟು - ಕಾಂಗ್ರೆಸ್​​ನಲ್ಲಿ ಹೈಕಮಾಂಡ್​ ಆದ್ರಾ ಸಿಎಂ..        ಧರ್ಮ ಸಂಕಷ್ಟಕ್ಕೆ ಹೈಕಮಾಂಡ್​ ಎಂಟ್ರಿ - ಚುನಾವಣೆಗಾಗಿ ವಿಷ್ಯ ಸೈಡ್​ಗಿಡೋಕೆ ತಾಕೀತು - ಅತ್ತ ದಿಲ್ಲೀಲಿ ಮೊಯ್ಲಿಗೆ ವರಿಷ್ಠರ ಎಚ್ಚರಿಕೆ        ಕಾಂಗ್ರೆಸ್ ಕೋಟೆಯಲ್ಲಿ ಕೇಸರಿ ಮಾಸ್ಟರ್​ಪ್ಲಾನ್​ - ನಾಲ್ಕೂ ದಿಕ್ಕಿನಲ್ಲಿ ಚಾಣಕ್ಯನ ತಂಡ - ಸಿಎಂ ತವರಲ್ಲಿ ರಾಜೇಂದ್ರ ಅಗರ್​ವಾಲ್​​ ತಂತ್ರಗಾರಿಕೆ        ಮಾರ್ಚ್​ 21ಕ್ಕೆ ಎಲೆಕ್ಷನ್​ಗೆ ಮುಹೂರ್ತ ಸಾಧ್ಯತೆ - ಇವಿಎಂ ಬೇಡ ಅಂತ ಕೈ ನಿರ್ಣಯ - ಬ್ಯಾಲೆಟ್ ಪೇಪರ್​​ಗೆ ಎಚ್​​​ಡಿಡಿ ಅಭಿಮತ        ಭಾರತದ ಬ್ಯಾಂಕ್​​ಗಳಿಂದಲೇ ನಡೆದಿದೆ ಪ್ರಮಾದ - ಸಾಲ ವಾಪಸ್​​ ಕಟ್ಟೋದಾಗಿ ಮಲ್ಯ ವಾದ - ಮದ್ಯದ ದೊರೆ ದೇಶಕ್ಕೆ ಬರೋದೇ ಅನುಮಾನ        ನಾಡಿನೆಲ್ಲೆಡೆ ನಾಳೆ ಯುಗಾದಿ ಸಂಭ್ರಮ - ಶ್ರೀಶೈಲದಲ್ಲಿ ಜನಜಾಗೃತಿ ಸಮಾವೇಶ - ಪ್ರಧಾನಿ ಮೋದಿಯಿಂದ ಹಬ್ಬದ ಶುಭಾಶಯ       
Breaking News

ಕೋಲಾರದಲ್ಲೂ ಮರಣಮೃದಂಗ

Wednesday, 23.08.2017, 3:03 AM       No Comments

ಕೋಲಾರ: ಗೋರಖ್​ಪುರ ಮಕ್ಕಳ ಸಾವಿನ ದುರಂತ ಮಾಸುವ ಮೊದಲೇ ನಗರದ ಜಿಲ್ಲಾ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಲ್ಲಿ 35 ನವಜಾತ ಶಿಶುಗಳು ಮರಣ ಹೊಂದಿದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಶಿಶುಗಳ ಸಾವಿಗೆ ಅಪೌಷ್ಟಿಕತೆ, ನಿಶ್ಯಕ್ತಿ, ತೂಕದಲ್ಲಿನ ವ್ಯತ್ಯಾಸ ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಮೂರು ತಿಂಗಳಲ್ಲಿ 410 ಮಕ್ಕಳು ದಾಖಲಾಗಿದ್ದು, 305 ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 13 ಮಕ್ಕಳು ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. 28 ಮಕ್ಕಳನ್ನು ವೈದ್ಯರ ಸಲಹೆ ಮೇರೆಗೆ ಸ್ಥಳೀಯ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.29 ಮಕ್ಕಳು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಕ್ಕಳ ಸಾವಿನ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಸರ್ಜನ್ ಡಾ.ಶಿವಕುಮಾರ್, ಜಿಲ್ಲಾ ಆಸ್ಪತೆಯಲ್ಲಿ ಕಳೆದ ಒಂದು ವರ್ಷದಲ್ಲಿ ಹೆರಿಗೆ ಪ್ರಮಾಣ ಹೆಚ್ಚಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಯವರು ಅಪಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಜನಿಸಿದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಲ್ಬಣಿಸಿದ್ದ ಕಾರಣ ಪಾಲಕರು ತಮ್ಮ ಮಕ್ಕಳನ್ನು ನಮ್ಮ ಆಸ್ಪತ್ರೆಗೆ ದಾಖಲಿಸಿದ್ದರು. ಈ ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಪರಿಸ್ಥಿತಿ ಕೈಮೀರಿ ಮಕ್ಕಳು ಸತ್ತಿವೆ. ಇದಕ್ಕೂ ನಮ್ಮ ಆಸ್ಪತ್ರೆಯಲ್ಲಿ ನೀಡಿರುವ ಚಿಕಿತ್ಸೆಗೆ ಸಂಬಂಧವಿಲ್ಲ. ಈ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಲ್ಲಿ ಒಂದೆರಡು ಮಾತ್ರ ತಾಯಿಯಲ್ಲಿನ ದೋಷದಿಂದ ಸತ್ತಿವೆ. ಪಾಲಕರಿಗೆ ಶಿಶುವಿನ ಆರೋಗ್ಯ ಸಮಸ್ಯೆ ತಿಳಿಸಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಕೆಲ ಮಕ್ಕಳಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ನಮ್ಮ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ರಕ್ಷಣೆಗಾಗಿ ಪ್ರಶಸ್ತಿಯೂ ಸಿಕ್ಕಿದೆ. ಹೀಗಿರುವಾಗ ವೈದ್ಯರ ನಿರ್ಲಕ್ಷ್ಯ ಪ್ರಶ್ನೆ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಲೋಪವಿಲ್ಲ: ಈ ಪ್ರಕರಣ ಕುರಿತು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಈ ಪ್ರಕರಣಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಯಾವುದೇ ಲೋಪವಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗಲಿ, ಮೂಲಸೌಲಭ್ಯಗಳ ಸಮಸ್ಯೆಯಾಗಲಿ ಇಲ್ಲ ಎಂದು ಹೇಳಿದೆ.

 

ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ರಕ್ಷಣೆ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದೇವೆ. ಹುಟ್ಟಿದ ಮಕ್ಕಳಲ್ಲಿ ತೂಕ ಕಡಿಮೆ ಇರುವುದು ಕಂಡು ಬಂದಲ್ಲಿ ತಕ್ಷಣ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿ ಸತ್ತಿರುವ ಮಕ್ಕಳಿಗೆ ವೈದ್ಯರು ಕಾರಣರಲ್ಲ.

| ಡಾ.ಬಾಲಸುಂದರ ಮಕ್ಕಳ ತಜ್ಞ

ಮೂರು ಪ್ರಕರಣಗಳಲ್ಲಿ ಮಕ್ಕಳ ದೈಹಿಕ ಪರಿಸ್ಥಿತಿಯಿಂದ ಸಾವು ಸಂಭವಿಸಿರೋ ಸಾಧ್ಯತೆ ಇದೆ. ಸೂಕ್ತ ತನಿಖೆಯಿಲ್ಲದೆ ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಹೇಳುವುದು ಸರಿಯಲ್ಲ. ಈ ಬಗ್ಗೆ ಸಿಎಂಗೆ ವರದಿ ನೀಡಲಾಗುವುದು.

| ರಮೇಶ್ ಕುಮಾರ್ ಆರೋಗ್ಯ ಸಚಿವ

ವರದಿಗೆ ಸಿಎಂ ಸೂಚನೆ

ಬೆಂಗಳೂರು: ಆರೋಗ್ಯ ಸಚಿವರ ತವರು ಕೋಲಾರ ಜಿಲ್ಲೆಯಲ್ಲಿ ಸಂಭವಿಸಿ ರುವ ಮಕ್ಕಳ ಸಾವಿನ ಪ್ರಕರಣ ಕುರಿತು ಸಮಗ್ರ ವರದಿ ನೀಡುವಂತೆ ಸಿಎಂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಮಕ್ಕಳ ಸಾವಿಗೆ ಕಾರಣಗಳನ್ನು ಪತ್ತೆ ಮಾಡಿ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ.

 

Leave a Reply

Your email address will not be published. Required fields are marked *

Back To Top