Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಕೋಲಾರಕ್ಕೆ ನಾಳೆ ವರುಣ್ ಗಾಂಧಿ ಭೇಟಿ

Wednesday, 04.10.2017, 3:00 AM       No Comments

ಕೋಲಾರ: ನಗರ ಹೊರವಲಯದ ಟಮಕದಲ್ಲಿರುವ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಅ.5ರಂದು ಬೆಳಗ್ಗೆ 11ಕ್ಕೆ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಭಾಗವಹಿಸಲಿದ್ದಾರೆ. ವರುಣ್ ಗಾಂಧಿ ಸೋದರ ಎಐಸಿಸಿ ಉಪಾಧ್ಯಕ್ಷ ರಾಹುಲ್​ಗಾಂಧಿ ಈಗಾಗಲೇ ದೇಶ-ವಿದೇಶಗಳಲ್ಲಿ ಸಂಚರಿಸಿ ಶಾಲೆ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಭಾಷಣ ಹಾಗೂ ಸಂವಾದ ನಡೆಸಿದ್ದು, ಅಣ್ಣನಂತೆ ತಮ್ಮ ವರುಣ್​ಗಾಂಧಿ ಸಹ ಭಾಷಣ ಮತ್ತು ಸಂವಾದದ ಮೂಲಕ ವಿದ್ಯಾರ್ಥಿ ಸಮೂಹ ಆಕರ್ಷಿಸಲು ಹೊರಟಿದ್ದಾರೆ. ಜಿಲ್ಲೆಗೆ ಪ್ರಪ್ರಥಮವಾಗಿ ವರುಣ್ ಗಾಂಧಿ ಬರುತ್ತಿದ್ದು, ಪಕ್ಷದ ಯುವ ನಾಯಕ ಬರುವ ವಿಚಾರ ಗೌಪ್ಯವಾಗಿ ಇಟ್ಟಿರುವುದರಿಂದ ಜಿಲ್ಲೆಯ ಬಿಜೆಪಿ ಮುಖಂಡರಿಗೆ ಯುವ ನಾಯಕನನ್ನು ಸ್ವಾಗತಿಸುವ ಭಾಗ್ಯ ಸಿಗುವುದೇ ನೋಡಬೇಕು.

Leave a Reply

Your email address will not be published. Required fields are marked *

Back To Top