Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಕೊಹ್ಲಿ ಶರವೇಗದ ಡ್ರೖೆವಿಂಗ್!

Friday, 19.05.2017, 3:00 AM       No Comments

ಗ್ರೇಟರ್​ನೋಯ್ಡಾ: ಕೆಟ್ಟ ಐಪಿಎಲ್ ನಿರ್ವಹಣೆಯಿಂದ ಹೊರಬರುವ ಗುರಿಯಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಗುರುವಾರ ಆಡಿ ಕಾರ್​ಅನ್ನು ಗಂಟೆಗೆ 280 ಕಿಲೋಮೀಟರ್ ವೇಗದಲ್ಲಿ ಡ್ರೖೆವಿಂಗ್ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡ್​ಗೆ ಪ್ರಯಾಣಿಸಲು ಇನ್ನೊಂದು ವಾರ ಬಾಕಿ ಇದ್ದು, ಗುರುವಾರ ವಿರಾಟ್ ತಮ್ಮ ಆಡಿ ಆರ್8 ಸ್ಪೋರ್ಟ್ಸ್ ಕಾರ್​ಅನ್ನು ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್​ನಲ್ಲಿ ಶರವೇಗದಲ್ಲಿ ಓಡಿಸಿದರು. ‘ಇದಕ್ಕೂ ಮುನ್ನ ಗಂಟೆಗೆ 290 ಕಿಲೋ ಮೀಟರ್ ವೇಗದಲ್ಲಿ ಕಾರ್ ಓಡಿಸಿದ್ದೆ. ವೃತ್ತಿಪರ ಚಾಲಕರಂತೆ ಹಿಂದಿನ ದಾಖಲೆಯನ್ನು ಮುರಿಯಲು ಈ ಬಾರಿ ಸಾಧ್ಯವಾಗಲಿಲ್ಲ’ ಎಂದು ಡ್ರೖೆವಿಂಗ್​ನ ಬಳಿಕ ಹೇಳಿದರು. ಅದಲ್ಲದೆ, ಕ್ರಿಕೆಟ್​ನ ಕುರಿತಾದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಕೊಹ್ಲಿ ನಿರಾಕರಿಸಿದರು.

ಸರ್ಕ್ಯೂಟ್​ನಲ್ಲಿ ವೇಗದ ಚಾಲನೆ ಮಾಡಿರುವ ಕೊಹ್ಲಿ, ರಸ್ತೆಯಲ್ಲಿ ವೇಗವಾಗಿ ಕಾರುಗಳನ್ನು ಓಡಿಸುವ ಸಾಹಸ ಮಾಡಬೇಡಿ ಎಂದು ಹೇಳಿದರು. ಮದ್ಯಪಾನ ಮಾಡಿ ವಾಹನ ಚಲಿಸುವ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

-ಏಜೆನ್ಸೀಸ್

Leave a Reply

Your email address will not be published. Required fields are marked *

Back To Top