Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ಕೊಡಗಿನ ಡಾ. ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾ ಕೌನ್ಸಿಲರ್

Saturday, 18.02.2017, 8:37 AM       No Comments

ಮಡಿಕೇರಿ: ಕೊಡವ ಜನಾಂಗಕ್ಕೆ ಸೇರಿದ ಡಾ.ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಸಿಡ್ನಿಯ ಲಿವರ್​ಪೂಲ್ ಸಿಟಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಈಕೆ, ಮಡಿಕೇರಿ ತಾಲೂಕು ವ್ಯಾಪ್ತಿಯ ಕೊಳಕೇರಿ ಗ್ರಾಮದ ಕಲಿಯಂಡ ಜಯ ಮಾದಪ್ಪ- ಭಾನುಮತಿ ಅವರ ಪುತ್ರಿ. ತಂದೆ- ತಾಯಿ ಮತ್ತು ಸಹೋದರ ತರುಣ್ ತಿಮ್ಮಯ್ಯ ಜತೆಯಲ್ಲಿ ಲಿವರ್​ಪೂಲ್ ಸಿಟಿಯಲ್ಲಿ ನೆಲೆಸಿದ್ದಾರೆ. 24ರ ಹರೆಯದ ಚರಿಷ್ಮಾ ಲೇಬರ್ ಪಾರ್ಟಿ ಸದಸ್ಯೆಯಾಗಿದ್ದು, ಆಸ್ಟ್ರೇಲಿಯಾ ಸಂಸತ್​ಗೆ ಆಯ್ಕೆಯಾಗುವ ಹೆಬ್ಬಯಕೆ ಹೊಂದಿದ್ದಾರೆ. ನಾಲಡಿ ಗ್ರಾಮದಲ್ಲಿರುವ ಕಲಿಯಂಡ ಕುಟುಂಬದ ಐನ್​ವುನೆಯಲ್ಲಿ ಡಾ.ಚರಿಷ್ಮಾ ಅವರನ್ನು ಕುಟುಂಬದ ಪರವಾಗಿ ಸನ್ಮಾನಿಸಲಾಯಿತು. 5 ವರ್ಷಗಳ ಬಳಿಕ ಹುಟ್ಟೂರಿಗೆ ಆಗಮಿಸಿದ್ದ ಅವರನ್ನು ಬಂಧು- ಬಳಗದವರು ಆತ್ಮೀಯವಾಗಿ ಸ್ವಾಗತಿಸಿದರು.

 ರಾಜಕೀಯದಲ್ಲಿ ಆಸಕ್ತಿ ತೋರುವ ಯುವಜನರಿಗೆ ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಕೊಡಗಿನಷ್ಟು ಸಮೃದ್ಧ ಭೂಮಿ ವಿಶ್ವದ ಎಲ್ಲಿಯೂ ಇಲ್ಲ. ಈ ಮಣ್ಣಿನ ಫಲವತ್ತತೆಯಲ್ಲಿ ಏನು ಬೇಕಾದರು ಬೆಳೆಯಬಹುದು. ನನ್ನ ಪಾಲಕರು ನನಗೆ ಕೊಡವಾಮೆ ಕಲಿಸಿದ್ದು, ಅದೇ ರೀತಿಯಲ್ಲಿ ಪ್ರತಿಯೊಬ್ಬರೂ ಮಕ್ಕಳಿಗೆ ಕೊಡವಾಮೆ ಕಲಿಸಬೇಕು.

| ಡಾ.ಕಲಿಯಂಡ ಚರಿಷ್ಮಾ ಕೌನ್ಸಿಲರ್, ಲಿವರ್​ಪೂಲ್ ಸಿಟಿ, ಸಿಡ್ನಿ

 

Leave a Reply

Your email address will not be published. Required fields are marked *

Back To Top