Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

ಕೊಂಡಜ್ಜಿ, ರಮೇಶ್ ಮೇಲ್ಮನೆಗೆ ಸಿ.ಎಂ. ಲಿಂಗಪ್ಪಗೆ ನಿರಾಸೆ

Thursday, 18.05.2017, 3:00 AM       No Comments

ಬೆಂಗಳೂರು: ವಿಧಾನ ಪರಿಷತ್​ನ ನಾಮನಿರ್ದೇಶನ ಪಟ್ಟಿಗೆ ಪಿ.ಆರ್. ರಮೇಶ್ ಮತ್ತು ಮೋಹನ್ ಕೊಂಡಜ್ಜಿ ಅವರನ್ನು ರಾಜ್ಯಪಾಲ ವಿ.ಆರ್.ವಾಲಾ ಅಂಗೀಕರಿಸಿದ್ದು, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಹೆಸರನ್ನು ತಿರಸ್ಕರಿಸಿದ್ದಾರೆ.

ಪರಿಷತ್​ಗೆ ನಾಮ ನಿರ್ದೇಶನ ಮಾಡಲು ಪಿ.ಆರ್. ರಮೇಶ್, ಮೋಹನ್ ಕೊಂಡಜ್ಜಿ ಹಾಗೂ ಸಿ.ಎಂ.ಲಿಂಗಪ್ಪ ಹೆಸರನ್ನು ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ರವಾನಿಸಿದ್ದರು. ಇದಾದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ವಿವರಣೆಯನ್ನೂ ನೀಡಿ ಬಂದಿದ್ದರು. ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ರಮೇಶ್, ಚಲನಚಿತ್ರ ಕ್ಷೇತ್ರದಲ್ಲಿ ಮೋಹನ್ ಕೊಂಡಜ್ಜಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಲಿಂಗಪ್ಪ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ ಲಿಂಗಪ್ಪ ಅವರು ಶಿಕ್ಷಣ ತಜ್ಞರು ಎನ್ನುವುದಕ್ಕೆ ಯಾವುದೇ ಮಾಹಿತಿಯಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಗಳನ್ನು ಮಾತ್ರ ಇರಿಸಿಕೊಂಡಿದ್ದಾರೆ. ಹಾಗೆಯೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ಎಂಬ ಕಾರಣಕ್ಕೆ ಅವರ ಹೆಸರು ತಿರಸ್ಕರಿಸಲಾಗಿದೆ. ಲಿಂಗಪ್ಪ ಹೆಸರಿಗೆ ಬೇರೊಬ್ಬರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡುವ ಅನಿವಾರ್ಯತೆಯಿದೆ. ಈ ಹಿಂದಿನ ಸರ್ಕಾರದ ಅವಧಿಗಳಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಬಂಡೆಪ್ಪ ಕಾಶಂಪೂರ್ ಹೆಸರನ್ನೂ ಇದೇ ಕಾರಣಗಳಿಗೆ ರಾಜ್ಯಪಾಲರು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply

Your email address will not be published. Required fields are marked *

4 × five =

Back To Top