Wednesday, 20th June 2018  

Vijayavani

ನನ್ನನ್ನ ಸಿಕ್ಕಿ ಹಾಕಿಸಲು ಡೈರಿ ಷಡ್ಯಂತ್ರ ನಡೆದಿದೆ - ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ - ನಾನೂ ಡೈರಿ ರಿಲೀಸ್ ಮಾಡ್ತೀನಿ ಅಂದ್ರು ಡಿಕೆಶಿ        ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು ಉಲ್ಲೇಖ        ಗಂಗಾಧರ ಚಡಚಣ ಹತ್ಯೆ ಪ್ರಕರಣ - ಭೈರಗೊಂಡ ಸಾಹುಕಾರನ ಮನೆ ಮೇಲೆ ಸಿಐಡಿ ದಾಳಿ - ಪಿಎಸ್​ಐ ಹಳ್ಳೂರು, ಪೇದೆ ಸಿದ್ಧಾರೂಢ ನಿವಾಸದಲ್ಲೂ ಸರ್ಚಿಂಗ್        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತರ ಕುಟುಂಬಕ್ಕೆ ಸಚಿವೆ ಸಾಂತ್ವನ - ಕುಟುಂಬಸ್ಥರಿಗೆ ನೋವು ಆಲಿಸಿದ ನಿರ್ಮಲಾ        ನಿತ್ಯವೂ ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ಮಾಜಿ ಸಿಎಂ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ       
Breaking News

ಕೇಸರಿ ಪಡೆ ಸೇರಿದ ಪರಿಣೀತಿ!

Friday, 12.01.2018, 3:03 AM       No Comments

ಅಕ್ಷಯ್ ಕುಮಾರ್ ‘ಕೇಸರಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಅಧಿಕೃತವಾಗುತ್ತಿದ್ದಂತೆ, ಸಿನಿರಸಿಕರ ಕುತೂಹಲ ಕೆರಳಿತ್ತು. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಫಸ್ಟ್ ಪೋಸ್ಟರ್​ನಲ್ಲಿ ಅಕ್ಷಯ್ ಸಿಖ್ ಯೋಧನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಅಕ್ಕಿ ಲುಕ್ ಈ ಸಿನಿಮಾದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡುವ ಕೆಲಸ ಮಾಡಿತ್ತು. ಈ ಎಲ್ಲ ಕುತೂಹಲಗಳ ನಡುವೆ, ಈಗ ಹೀರೋಯಿನ್ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅಕ್ಷಯ್ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದು ವದಂತಿ ಎಂದು ಭಾವಿಸಬೇಡಿ.

ಚಿತ್ರದ ನಿರ್ವಪಕ ಕರಣ್ ಜೋಹರ್ ಖುದ್ದು ಈ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಹುನಿರೀಕ್ಷಿತ ‘ಕೇಸರಿ’ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲ ಕಡೆಯಿಂದ ಬರುತ್ತಿತ್ತು. ಈಗ ಅದಕ್ಕೆ ಉತ್ತರ ಹೊತ್ತು ತಂದಿದ್ದೇವೆ. ಅಕ್ಷಯ್ಗೆ ಜತೆಯಾಗಿ ಪರಿಣೀತಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ‘ಪ್ಯಾಡ್​ವುನ್’ ಚಿತ್ರ ಬಿಡುಗಡೆಗೂ ಮುನ್ನವೇ ಅಕ್ಷಯ್ಕುಮಾರ್ ‘ಕೇಸರಿ’ ಚಿತ್ರೀಕರಣ ಆರಂಭಿಸಿದ್ದರು. ಈ ಚಿತ್ರಕ್ಕೆ ಕರಣ್ ಜೋಹರ್ ಮತ್ತು ಅಕ್ಷಯ್ ಒಟ್ಟಾಗಿ ಬಂಡವಾಳ ಹೂಡುತ್ತಿ್ತ್ದಾರೆ. ಇದೇ ಮೊದಲ ಬಾರಿಗೆ ಅವರು ಅಕ್ಷಯ್ ಜತೆ ಕೈ ಜೋಡಿಸಿರುವುದು ವಿಶೇಷ. ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರ 2019ರ ಹೋಳಿ ಹಬ್ಬದಂದು ತೆರೆಕಾಣಲಿದೆ.

Leave a Reply

Your email address will not be published. Required fields are marked *

Back To Top