Monday, 11th December 2017  

Vijayavani

1. ಸಿಗರೇಟ್​ ಕೊಟ್ರೆ ಮಾತ್ರ ಕಾರ್​ ಹತ್ತಿನಿ – ಇಲ್ಲಾಅಂದ್ರೆ ಡೋರ್ ಹಾಕೋದಕ್ಕೂ ಬಿಡಲ್ಲ – ಪೊಲೀಸರ ಎದ್ರು ಬೆಳಗೆರೆ ಹೈ ಡ್ರಾಮ್​ 2. ನಿನ್ನೆ ಮೌಖಿಕ, ಇಂದು ಲಿಖಿತ ಹೇಳಿಕೆ – ಸಿಸಿಬಿಯಿಂದ ರವಿ 2ನೇ ಪತ್ನಿ ಯಶೋಮತಿ ವಿಚಾರಣೆ – ಅತ್ತ ಸುನೀಲ್​ರಿಂದ ರಕ್ಷಣೆಗೆ ಮನವಿ 3. ಕನ್ನಡ ಜನರ ಓಟು ಪಡೆದು ಶಾಸಕರ ಮರಾಠಿ ಪ್ರೇಮ – ಸಂಜಯ್ ಪಾಟೀಲ್​ರಿಂದ ಕನ್ನಡ ವಿರೋಧಿ ಹೇಳಿಕೆ – ಶಾಸಕರ ನಡೆಗೆ ಜನರು ಕಿಡಿ 4. ಲಿಂಗಾಯತ ಸಮಾವೇಶದಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ – ತಗ್ಲಾಕೊಂಡವನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ – ಒದ್ದು ಪೊಲೀಸರಿಗೆ ಒಪ್ಪಿಸಿದ ಜನ 5. ಗೋಲ್ಡ್​ ಆಗ್ತಿದಾರೆ ಅಕ್ಷಯ್ ಕುಮಾರ್ – ಧೋತಿಯಲ್ಲಿ ಕಿಲಾಡಿ ಚೇರ್​ ಸ್ಟಂಟ್ – ಸೋಶೀಯಲ್ ಮೀಡಿಯಾದಲ್ಲಿ ದೃಶ್ಯ ವೈರಲ್
Breaking News :

ಕೇಂದ್ರ ಸಂಪುಟದಲ್ಲಿ ಜೆಡಿಯುಗೆ 2 ಸ್ಥಾನ

Sunday, 13.08.2017, 3:00 AM       No Comments

ನವದೆಹಲಿ/ಪಟನಾ: ಬಿಹಾರದಲ್ಲಿ ಉಂಟಾದ ರಾಜಕೀಯ ಪಲ್ಲಟದಲ್ಲಿ ಆರ್​ಜೆಡಿ ಸಖ್ಯ ತೊರೆದು ಬಿಜೆಪಿ ಜತೆಗೂಡಿದ ನಿತೀಶ್ ಕುಮಾರ್ ಹೊಸ ಸರ್ಕಾರ ರಚಿಸಿದ್ದರು. ಅವರ ಈ ಉಪಕಾರಕ್ಕೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ, ಜೆಡಿಯು ಪಕ್ಷಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಕೊಡಲು ನಿರ್ಧರಿಸಿದೆ. ಆ ಪಕ್ಷದ ಇಬ್ಬರು ಸಂಸದರು ಸಂಪುಟ ಸೇರಲಿದ್ದು, ಒಬ್ಬರು ಸಂಪುಟ ದರ್ಜೆಯ ಸಚಿವರಾಗಲಿದ್ದಾರೆ ಎಂದು ಹೇಳಲಾಗಿದೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್​ಡಿಎ ಮೈತ್ರಿಕೂಟದ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಶುಕ್ರವಾರ ನವದೆಹಲಿಗೆ ತೆರಳಿದ್ದ ನಿತೀಶ್ ಕುಮಾರ್, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಅಮಿತ್ ಷಾ ಅವರು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಸೇರ್ಪಡೆಗೊಳ್ಳುವಂತೆ ನಿತೀಶ್ ಕುಮಾರ್ ಅವರನ್ನು ಆಹ್ವಾನಿಸಿದರು ಎನ್ನಲಾಗಿದೆ. ಇದಕ್ಕೆ ತಾತ್ವಿಕವಾಗಿ ಸಮ್ಮತಿಸಿರುವ ನಿತೀಶ್ ಕುಮಾರ್, ಪಟನಾದಲ್ಲಿ ಆ.19ಕ್ಕೆ ನಿಗದಿಯಾಗಿರುವ ಜೆಡಿಯುನ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಮಾಹಿತಿ ನೀಡಿದ ಜೆಡಿಯುನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ, ನಿತೀಶ್ ಅವರೇ ಈ ಪ್ರಸ್ತಾವನೆಯನ್ನು ಮಂಡಿಸಲಿದ್ದು, ಸಭೆ ಒಕ್ಕೂರಲಿನಿಂದ ಅಂಗೀಕರಿಸಲಿದೆ‘ ಎಂದು ಹೇಳಿದ್ದಾರೆ.

ಶರದ್ ಬದಲು ಸಿಂಗ್: ಜೆಡಿಯು ಮುಖಂಡ ಶರದ್ ಯಾದವ್ ಅವರನ್ನು ರಾಜ್ಯಸಭೆಯಲ್ಲಿನ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅವರ ಸ್ಥಾನದಲ್ಲಿ ನಿತೀಶ್ ಅವರ ಪರಮಾಪ್ತ ಆರ್.ಸಿ.ಪಿ. ಸಿಂಗ್ ಅವರನ್ನು ನೇಮಿಸಲಾಗಿದೆ. ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಶನಿವಾರ ಭೇಟಿಯಾಗಿದ್ದ ಜೆಡಿಯು ಸಂಸತ್ ಸದ್ಯಸರು, ರಾಜ್ಯಸಭೆಯಲ್ಲಿ ಪಕ್ಷದ ನಾಯಕನ ಬದಲಾವಣೆ ಕುರಿತು ನೀಡಿದ ಲಿಖಿತ ಮಾಹಿತಿಯನ್ನು ಸಭಾಪತಿ ಅಂಗೀಕರಿಸಿದರು.

ಅನ್ಸಾರಿ ವಜಾ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಅಯೋಜಿಸಿದ್ದ ಪ್ರತಿಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯಸಭೆ ಸದಸ್ಯ ಅಲಿ ಅನ್ವರ್ ಅನ್ಸಾರಿ ಅವರನ್ನು ಜೆಡಿಯು ಪಕ್ಷದಿಂದ ವಜಾಗೊಳಿಸಲಾಗಿದೆ. –ಏಜೆನ್ಸೀಸ್

***

ಹರಿಹಾಯ್ದ ಶರದ್ ಯಾದವ್

ರಾಜ್ಯಸಭೆಯ ಜೆಡಿಯು ಪಕ್ಷದ ನಾಯಕ ಸ್ಥಾನದಿಂದ ತಮ್ಮನ್ನು ಕೆಳಗಿಸಿದ ನಿತೀಶ್ ಕುಮಾರ್ ವಿರುದ್ಧ ಶರದ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರದ ಮಾಧೇಪುರ ಜಿಲ್ಲೆಯಲ್ಲಿ ನಡೆದ ಸಂವಾದ್ ಯಾತ್ರದಲ್ಲಿ ಅವರು, ‘ಇಂದಿರಾ ಗಾಂಧಿ ಬೆದರಿಕೆಗೆ ಬಗ್ಗದವನು, ಬೇರೆಯವರ ಬೆದರಿಕೆಗೇ ಮಣಿಯಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ. ‘ಬಿಹಾರದಲ್ಲಿ ಜೆಡಿಯುನ 2 ಬಣಗಳಿವೆ. ಒಂದು ಸರ್ಕಾರಿ ಪಕ್ಷ ಆದರೆ, ಇನ್ನೊಂದು ಜನತೆಯ ಪಕ್ಷ. ಸರ್ಕಾರಿ ಬಣಕ್ಕೆ ಹತ್ತಿರಾಗಿರುವ ನಾಯಕರದ್ದು ವೈಯಕ್ತಿಕ ಹಿತಾಸಕ್ತಿ ಆದರೆ, ಜನತೆಗೆ ಹತ್ತಿರಾಗಿರುವ ಪಕ್ಷದ ಮುಖಂಡರು ಮತ್ತು ಕಾರ್ಯರ್ತರು ನನ್ನ ಜತೆ ಇದ್ದಾರೆ‘ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top