Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ಕೆಪಿಎಲ್ ಅಂತಿಮ ಚರಣಕ್ಕೆ ಹುಬ್ಬಳ್ಳಿ ರೆಡಿ

Thursday, 14.09.2017, 3:04 AM       No Comments

| ಸಂತೋಷ ವೈದ್ಯ

ಹುಬ್ಬಳ್ಳಿ: ಬೆಂಗಳೂರು ಹಾಗೂ ಮೈಸೂರು ಚರಣವನ್ನು ಪೂರ್ಣಗೊಳಿಸಿರುವ 6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಅಂತಿಮ ಚರಣಕ್ಕೆ ಹುಬ್ಬಳ್ಳಿ ರಾಜನಗರ ಕೆಎಸ್​ಸಿಎ ಮೈದಾನ ಸಜ್ಜಾಗಿದ್ದು, ಗುರುವಾರದಿಂದ ನಿರ್ಣಾಯಕ ಹಂತದ ಪಂದ್ಯಗಳು ನಡೆಯಲಿವೆ.

2014ರ ಚಾಂಪಿಯನ್ ಮೈಸೂರು ವಾರಿಯರ್ಸ್ ಹಾಗೂ ಕಳೆದೆರಡು ಬಾರಿಯ ರನ್ನರ್​ಅಪ್ ಹುಬ್ಬಳ್ಳಿ ಟೈಗರ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಲಿದ್ದು, ಕ್ರಿಕೆಟ್ ಅಭಿಮಾನಿಗಳು ಭರ್ಜರಿ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಲೀಗ್ ಹಂತದ 7 ಪಂದ್ಯಗಳು, 2 ಸೆಮಿಫೈನಲ್ಸ್ ಹಾಗೂ ಫೈನಲ್ ಇಲ್ಲಿ ನಡೆಯಲಿವೆ. ಕೆಪಿಎಲ್ ಪಂದ್ಯಗಳನ್ನು ಆಯೋಜಿಸುವ ಸಲುವಾಗಿಯೇ ರಾಜನಗರ ಮೈದಾನಕ್ಕೆ ಹೊಸ ರೂಪ ನೀಡಲಾಗಿದೆ. ಈ ಬಾರಿ ಪೆವಿಲಿಯನ್ ಕಟ್ಟಡ ತಲೆ ಎತ್ತಿದೆ. ಅಲ್ಲಿಯೇ ವೀಕ್ಷಕ ವಿವರಣೆ, ಮಾಧ್ಯಮ ಗ್ಯಾಲರಿ ಸ್ಥಾಪಿಸಲಾಗಿದೆ. 9 ಸಾವಿರ ಜನ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ನೆಲಮಹಡಿಯಲ್ಲಿ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ನಾಲ್ಕೈದು ದಿನಗಳಂತೆ ಬುಧವಾರವೂ ಸಂಜೆ ವೇಳೆ ನಗರದಲ್ಲಿ ಮಳೆ ಸುರಿದಿದ್ದು, ಟೂರ್ನಿಗೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ದಟ್ಟವಾಗಿದೆ.

ಕಾಮೆಂಟರಿಗೆ ಮೈಕೆಲ್ ಹಸ್ಸೆ, ವೆಟ್ಟೋರಿ ಸೇರ್ಪಡೆ

ಸ್ಟಾರ್ ಸ್ಪೋರ್ಟ್ಸ್​ನಲ್ಲಿ ನೇರಪ್ರಸಾರ ಕಾಣುತ್ತಿರುವ ಟೂರ್ನಿಯ ವೀಕ್ಷಕ ವಿವರಣೆ ತಂಡದಲ್ಲಿ ಆಸ್ಟೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಜತೆ ಹುಬ್ಬಳ್ಳಿ ಚರಣಕ್ಕೆ ನ್ಯೂಜಿಲೆಂಡ್ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಹಾಗೂ ಆಸ್ಟೇಲಿಯಾದ ಮೈಕೆಲ್ ಹಸ್ಸೆ ಸೇರ್ಪಡೆಯಾಗಲಿದ್ದಾರೆ.

ಹುಬ್ಬಳ್ಳಿಯಲ್ಲಿ 4ನೇ ಬಾರಿ ಕೆಪಿಎಲ್

ಕೆಪಿಎಲ್​ಗೆ ಹುಬ್ಬಳ್ಳಿ ಸತತ 4ನೇ ಬಾರಿ ಆತಿಥ್ಯ ವಹಿಸುತ್ತಿದೆ. ಅದರಲ್ಲಿಯೂ 3ನೇ ಬಾರಿ ಕೆಪಿಎಲ್ ಚುಟುಕು ಕ್ರಿಕೆಟ್​ನ ಅಂತಿಮ ಚರಣಕ್ಕೆ ಸಿದ್ಧಗೊಂಡಿರುವುದು ವಿಶೇಷ. 2016ರಲ್ಲಿ ಪೂರ್ಣ ಕೆಪಿಎಲ್ ಇಲ್ಲೇ ಆಯೋಜನೆಗೊಂಡಿದ್ದರೆ, 2014ರ ಅಂತಿಮ ಚರಣವೂ ಇಲ್ಲೇ ನಡೆದಿತ್ತು. ಪ್ರತಿ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹುಬ್ಬಳ್ಳಿ ಸಾಕಷ್ಟು ಯಶಸ್ಸು ಕಂಡಿದೆ.

ಕುತೂಹಲಕರ ಸೆಮೀಸ್ ರೇಸ್

ಹಾಲಿ ಟೂರ್ನಿಯಲ್ಲಿ ಇಲ್ಲಿಯವರೆಗೆ ಎಲ್ಲ ತಂಡಗಳು ತಲಾ 4 ಪಂದ್ಯಗಳನ್ನು ಆಡಿದ್ದು, ಕೊನೆಯ ತಲಾ 2 ಲೀಗ್ ಪಂದ್ಯಗಳ ಫಲಿತಾಂಶ ಸೆಮಿಫೈನಲ್ ಅವಕಾಶದ ದೃಷ್ಟಿಯಿಂದ ಮಹತ್ವದ್ದಾಗಿದೆ. ಬೆಳಗಾವಿ ಪ್ಯಾಂಥರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳು ತಲಾ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಇವೆರಡು ತಂಡಗಳು ಇನ್ನೊಂದು ಪಂದ್ಯ ಗೆದ್ದರೂ ಸೆಮಿಫೈನಲ್ ಸ್ಥಾನ ಖಚಿತಗೊಳ್ಳಲಿದೆ. ಟೂರ್ನಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಬೆಂಗಳೂರು ಬ್ಲಾಸ್ಟರ್ಸ್ ಆಡಿದ ನಾಲ್ಕೂ ಪಂದ್ಯ ಸೋತು ಸೆಮೀಸ್ ರೇಸ್​ನಿಂದ ಈಗಾಗಲೆ ಹೊರಬಿದ್ದಿದೆ. ಹಾಲಿ ಚಾಂಪಿಯನ್ ಬಳ್ಳಾರಿ ಟಸ್ಕರ್ಸ್ ತಂಡವೂ 1 ಪಂದ್ಯ ಮಾತ್ರ ಗೆದ್ದು, 2ರಲ್ಲಿ ಸೋತಿದ್ದಲ್ಲದೆ, 1 ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಕೇವಲ 3 ಅಂಕದೊಂದಿಗೆ ಬಹುತೇಕ ಪ್ರಶಸ್ತಿ ಬಿಟ್ಟುಕೊಡುವ ಅಪಾಯದಲ್ಲಿದೆ. ಇನ್ನುಳಿದಂತೆ ನಮ್ಮ ಶಿವಮೊಗ್ಗ 5 ಅಂಕ (2 ಜಯ, 1 ಸೋಲು, 1 ರದ್ದು), ಮೈಸೂರು ವಾರಿಯರ್ಸ್ ಮತ್ತು ಬಿಜಾಪುರ ಬುಲ್ಸ್ ತಲಾ 4 ಅಂಕ (2 ಜಯ, 2 ಸೋಲು) ಗಳಿಸಿ ಉಪಾಂತ್ಯ ರೇಸ್​ನಲ್ಲಿ ಉಳಿದಿವೆ. ಈ ತಂಡಗಳು ಇನ್ನು ಒಂದಷ್ಟೇ ಗೆಲುವು ಕಂಡರೆ ರನ್​ರೇಟ್ ಲೆಕ್ಕಾಚಾರ ನಿರ್ಣಾಯಕವೆನಿಸಲಿದೆ. ಒಂದು ವೇಳೆ ಎರಡೂ ಪಂದ್ಯ ಗೆದ್ದರೆ ಸೆಮೀಸ್ ಖಚಿತವೆನಿಸಲಿದೆ.

Leave a Reply

Your email address will not be published. Required fields are marked *

Back To Top