Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಕೆನರಾ ಬ್ಯಾಂಕ್​ನಿಂದ ಆಧಾರ್ ಕೇಂದ್ರ

Wednesday, 27.09.2017, 3:00 AM       No Comments

ಬೆಂಗಳೂರು: ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್​ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಜಯಗರದ ಶಾಪಿಂಗ್ ಕಾಂಪ್ಲೆಕ್ಸ್ ಶಾಖೆಯಲ್ಲಿ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರ ಆರಂಭಿಸಿದೆ. ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಕೇಶ್ ಶರ್ಮಾ ಕೇಂದ್ರ ಉದ್ಘಾಟಿಸಿದರು.

ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಮುಖ್ಯ ಉದ್ದೇಶ. ಆದ್ದರಿಂದ ಈ ಕೇಂದ್ರ ಆರಂಭಿಸಲಾಗಿದೆ. ಗ್ರಾಹಕರು ಸ್ವಯಂಪ್ರೇರಿತರಾಗಿ ಆಗಮಿಸಿ, ಆಧಾರ್ ಸಂಖ್ಯೆಯನ್ನು ನವೀಕರಿಸಿಕೊಳ್ಳಬಹುದು. ಕೆಲಸದ ಎಲ್ಲ ಅವಧಿಯಲ್ಲಿ ಈ ಸೇವೆ ಬ್ಯಾಂಕ್​ನಲ್ಲಿ ಸಿಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಈ ರೀತಿ 142 ಕೇಂದ್ರಗಳನ್ನು ಆರಂಭಿಸಲಾಗುತ್ತದೆ ಎಂದು ರಾಕೇಶ್ ಶರ್ಮಾ ತಿಳಿಸಿದರು.

ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕಿ ಪಿ. ವಿ. ಭಾರತಿ, ಬೆಂಗಳೂರು ವಿಭಾಗದ ಯುಐಡಿಎಐ ಮಹಾ ನಿರ್ದೇಶಕ ಸುರೇಂದ್ರ ಬಾಬು ಮತ್ತಿತರಿದ್ದರು.

ಬ್ಯಾಂಕ್​ಗಳಲ್ಲಿ ಆಧಾರ್ ನವೀಕರಣ ಕೇಂದ್ರ: ದೇಶಾದ್ಯಂತ ಕೆನರಾ ಬ್ಯಾಂಕ್ 7350 ಶಾಖೆಗಳನ್ನು ಹೊಂದಿದ್ದು, ಇದರಲ್ಲಿ 1040 ಶಾಖೆಗಳಲ್ಲಿ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರ ಆರಂಭಿಸಲು ಚಿಂತನೆ ನಡೆಸಿದೆ. ಪಿಎಂಎಲ್ ಎ ನಿಯಮ 2015 ಮತ್ತು ಯುಐಡಿಎಐ ಮಾರ್ಗದರ್ಶಿ ಸೂತ್ರಗಳ ತಿದ್ದುಪಡಿ ಅನುಸಾರ ಎಲ್ಲ್ಲ ಬ್ಯಾಂಕ್​ಗಳು ತನ್ನ ಶೇ. 10ರಷ್ಟು ಶಾಖೆಗಳಲ್ಲಿ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರ ಆರಂಭಿಸಲು ಪ್ಯಾನ್ ಇಂಡಿಯಾ ಆಧಾರ್ ಮೇಲೆ ಸೂಚಿಸಲಾಗಿದೆ. ಎಲ್ಲ ಬ್ಯಾಂಕ್​ನ ಸಿಎಎಸ್​ಎ ಖಾತೆದಾರರು ಡಿ. 31ರೊಳಗೆ ಆಧಾರ್​ಸಂಖ್ಯೆಯನ್ನು ಜೋಡಣೆ ಮಾಡಿಕೊಂಡಿರಬೇಕೆಂದು ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

Back To Top