Thursday, 19th July 2018  

Vijayavani

ಮೂಲ ಮಠದಲ್ಲಿ ಶ್ರೀಗಳ ಪಾರ್ಥೀವ ಶರೀರ - ಪೂಜಾ ಸಾಮಗ್ರಿ ಜತೆಗಿಟ್ಟು ಸಂಸ್ಕಾರ ಕಾರ್ಯ        ಶೀರೂರು ಶ್ರೀಗಳು ಇನ್ನು ನೆನಪು ಮಾತ್ರ - ಕನಕನ ಕಿಂಡಿ ಮೂಲಕ ಕೃಷ್ಣನ ಕೊನೆಯ ದರ್ಶನ - ಆರತಿ ಸೇವೆ ಸಲ್ಲಿಸಿದ ಸ್ವಾಮೀಜಿ        ಶೀರೂರು ಶ್ರೀ ಸಾವಿನ ಸುತ್ತ ಅನುಮಾನದ ಹುತ್ತ - ಸ್ವಾಮೀಜಿಗಳಿಗೆ ವಿಷಪ್ರಾಸನದ ಶಂಕೆ - ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲು        ಸಾಮಾಜಿಕ ಹೋರಾಟಕ್ಕೂ ಶೀರೂರು ಶ್ರೀಗಳು ಸೈ - ವಾದ್ಯಪರಿಕರಗಳನ್ನು ನುಡಿಸುವುರಲ್ಲೂ ಎತ್ತಿದ ಕೈ        ಶೀರೂರು ಶ್ರೀ ಮಠಾಧಿಶರೇ ಅಲ್ಲ - ಅದಕ್ಕೇ ಅವರಿಗೆ ಪಟ್ಟದೇವರು ಕೊಡಲಿಲ್ಲ - ಪೇಜಾವರ ಶ್ರೀಗಳಿಂದ ಸ್ಫೋಟಕ ಹೇಳಿಕೆ        ಮಹಾ ಮಳೆಗೆ ಮೈದುಂಬಿದ ಕೃಷ್ಣೆ - ಚಿಕ್ಕೋಡಿಯಲ್ಲಿ ಹಲವು ಸೇತುವ ಜಲಾವೃತ - ಇತ್ತ ಕೊಡಗಿನಲ್ಲಿ ಕಾವೇರಿಗೆ ಎಚ್​ಡಿಕೆ ಬಾಗಿನ       
Breaking News

ಕೆಟ್ಟ ಕೆಲಸಕ್ಕೆ ವಿಳಂಬಿಸಬೇಕು

Thursday, 05.07.2018, 3:04 AM       No Comments

ಹರ್ಷಿ ಗೌತಮರು ಒಮ್ಮೆ ಪತ್ನಿಯೊಂದಿಗೆ ಜಗಳಾಡಿದ್ದರು. ಮಗ ಚಿರಕಾರಿಯನ್ನು ಕರೆದು, ನಿನ್ನ ತಾಯಿಯನ್ನು ಕೊಂದುಹಾಕು ಎಂದು ಆಜ್ಞೆ ಮಾಡಿ ಕಾಡಿಗೆ ಹೋದರು. ಜನ್ಮದಾತೆ ನನಗೆ ಮಹಾ ಉಪಕಾರ ಮಾಡಿದ್ದಾಳೆ. ತಂದೆ ಸಾಕ್ಷಾತ್ ದೈವ. ಅವನ ಆಜ್ಞೆ ಹೇಗೆ ಪಾಲಿಸದಿರಲಿ? ಎಂದು ಚಿಂತಿಸಿದ. ಎತ್ತಿದ ಶಸ್ತ್ರವನ್ನು ಅಲ್ಲೇ ಇಟ್ಟು ಸಲ್ಪ ಕಾಲ ದೂಡಿದ. ಗೌತಮರು ಮರಳಿದರು. ಕೋಪ ಶಾಂತವಾಗಿತ್ತು. ಶಸ್ತ್ರವನ್ನು ಕೆಳೆಗೆಸೆದ ಪುತ್ರ ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಪುತ್ರನನ್ನು ಬಿಗಿದಪ್ಪಿ, ವತ್ಸಾ! ನನ್ನನ್ನು ಮಹಾನರಕದ ಕೋಪದಿಂದ ಉಳಿಸಿದೆ. ಮಗು ಹಿತೈಷಿಗಳನ್ನೂ, ಬಂಧುಗಳನ್ನೂ ಪರಿತ್ಯಾಗ ಗೈಯುವಾಗ ಸರಿಯಾಗಿ ಆಲೋಚಿಸಬೇಕೆಂದು ಶಾಸ್ತ್ರ ವಚನವಿದೆ. ನೀನು ಅಂತೆಯೇ ಗೈದು ನನ್ನನ್ನು, ನಿನ್ನ ತಾಯಿಯನ್ನು ಹಾಗೂ ನಿನ್ನನ್ನೂ ಉಳಿಸಿಕೊಂಡೆ, ಕೆಟ್ಟ ಕೆಲಸವನ್ನು ವಿಳಂಬವಾಗಿ ಮಾಡಬೇಕು. ಶುಭಕಾರ್ಯವನ್ನು ಮಾತ್ರ ಶೀಘ್ರ ಮಾಡಬೇಕು ಎಂದರು. ಕೆಟ್ಟ ಕೆಲಸ ಮಾಡುವ ಮುನ್ನ ನೂರುಬಾರಿ ಯೋಚಿಸಿ.

Leave a Reply

Your email address will not be published. Required fields are marked *

Back To Top