Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಕೃತಿ ಮದುವೆಗೆ 2 ಕೋಟಿ ಖರ್ಚು

Friday, 05.05.2017, 3:00 AM       No Comments

ಸೆಲೆಬ್ರಿಟಿ ಮದುವೆ ಎಂದರೆ ಅದ್ಧೂರಿತನಕ್ಕೆ ಕೊರತೆ ಇರೋದಿಲ್ಲ. ಕನ್ನಡದಲ್ಲಿ ಮಿಂಚಿದ ಬಳಿಕ ಬಾಲಿವುಡ್​ನಲ್ಲಿ ನೆಲೆಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ನಟಿ ಕೃತಿ ಕರಬಂಧ ಮದುವೆ ಕೂಡ ರಾಜವೈಭವದಂತೆ ಜರುಗುತ್ತಿದೆ. ಅದಕ್ಕಾಗಿ ಬರೋಬ್ಬರಿ ಎರಡು ಕೋಟಿ ರೂ. ವ್ಯಯಿಸಲಾಗುತ್ತಿದೆ. ಅರೆರೆ, ಕೃತಿಗೆ ಮದುವೆ ಯಾವಾಗ ನಿಶ್ಚಯ ಆಯಿತು? ಅವರ ಮನಗೆದ್ದ ಕುವರ ಯಾರು? ಇತ್ಯಾದಿ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿದ್ದರೆ ಅದಕ್ಕೆ ಉತ್ತರ; ‘ಶಾದಿ ಮೆ ಝುರೂರ್ ಆನಾ’!

ಅಂದಹಾಗೆ, ಇದು ರಿಯಲ್ ಮದುವೆ ಅಲ್ಲ. ಅಪ್ಪಟ ರೀಲ್. ಇಮ್ರಾನ್ ಹಷ್ಮಿ ಜತೆ ಕೃತಿ ನಟಿಸಿದ್ದ ‘ರಾಝå್ ರಿಬೂಟ್’ ಚಿತ್ರ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ. ಆ ಬಳಿಕ ಅವರಿಗೆ ಮತ್ತೊಂದು ಬಾಲಿವುಡ್ ಅವಕಾಶ ಸಿಕ್ಕಿದೆ. ಖ್ಯಾತ ನಟ ರಾಜ್​ಕುಮಾರ್ ರಾವ್ ನಾಯಕತ್ವದ ‘ಶಾದಿ ಮೆ ಝುರೂರ್ ಆನಾ’ ಚಿತ್ರಕ್ಕೆ ಕೃತಿ ನಾಯಕಿ. ಈ ಚಿತ್ರದಲ್ಲಿರುವ ಒಂದು ಮದುವೆ ಸನ್ನಿವೇಶಕ್ಕಾಗಿ ನಿರ್ವಪಕರು ಬರೋಬ್ಬರಿ ಎರಡು ಕೋಟಿ ರೂ. ಖರ್ಚು ಮಾಡಿದ್ದಾರಂತೆ! ‘ಚಿತ್ರದಲ್ಲಿ ಒಂದು ಹೈಪ್ರೊಫೈಲ್ ವಿವಾಹ ಸನ್ನಿವೇಶವಿದೆ. ಅದಕ್ಕಾಗಿ ಅದ್ಧೂರಿಯಾಗಿ ಸೆಟ್ ನಿರ್ವಿುಸಲಾಗಿದೆ. ನಿರ್ವಪಕರಿಗೆ ದುಡ್ಡು ಮುಖ್ಯವಾಗಿರಲಿಲ್ಲ. ಬಾಲಿವುಡ್ ಚಿತ್ರಗಳಲ್ಲಿ ಹಿಂದೆಂದೂ ಕಂಡಿರದಂತಹ ಹೊಸ ರೀತಿಯ ವೈಭವವನ್ನು ತೋರಿಸುವುದಷ್ಟೇ ಅವರ ಉದ್ದೇಶ. ಅದಕ್ಕಾಗಿ 2 ಕೋಟಿ ಖರ್ಚು ಮಾಡಿದ್ದಾರೆ’ ಎನ್ನುತ್ತಿವೆ ಮೂಲಗಳು.

ವಿಶೇಷವೆಂದರೆ ಈ ವೈಭವದ ಸೆಟ್​ಅನ್ನು ಕೇವಲ ಮೂರೇ ದಿನಗಳಲ್ಲಿ ನಿರ್ವಿುಸಲಾಯಿತಂತೆ. ಅನೂಪ್ ಅಧಿಕಾರಿ ಅವರ ಕಲಾ ನಿರ್ದೇಶನದಲ್ಲಿ ಸೆಟ್ ಹಾಕಲಾಗಿದೆ. ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ ಅವರ ಪತ್ನಿ

ರತ್ನಾ ಅವರು ‘ಶಾದಿ ಮೆ ಝುರೂರ್ ಆನಾ’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಲಖನೌ, ಅಲಹಾಬಾದ್

ಮತ್ತು ಕಾನ್ಪುರ ಮುಂತಾದೆಡೆ ಶೂಟಿಂಗ್ ನಡೆಯಲಿದೆ. ಈ ಚಿತ್ರಕ್ಕೆ ವಿನೋದ್ ಬಚ್ಚನ್ ಬಂಡವಾಳ ಹೂಡುತ್ತಿದ್ದಾರೆ. ‘ಶಾದಿ…’ ಮಾತ್ರವಲ್ಲದೆ ‘ಅತಿಥಿ ಇನ್ ಲಂಡನ್’ ಶೀರ್ಷಿಕೆಯ ಹಿಂದಿ ಚಿತ್ರದಲ್ಲೂ ಕೃತಿ ನಟಿಸುತ್ತಿದ್ದಾರೆ. ಅವರು ಅಭಿನಯಿಸಿರುವ ಕನ್ನಡದ ‘ಮಾಸ್ತಿಗುಡಿ’ ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *

Back To Top