Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಕೃತಕ ಮರಳಿನತ್ತ ಜನರ ಚಿತ್ತ…

Saturday, 25.02.2017, 5:00 AM       No Comments
  •  ಅಭಿಷೇಕ ಡಿ ಪುಂಡಿತ್ತೂರು ಬೆಂಗಳೂರು

ದಿನೇ ದಿನೇ ಹೆಚ್ಚುತ್ತಿರುವ ನೈಸರ್ಗಿಕ ಮರಳಿನ ಬೇಡಿಕೆಗೆ ಪರ್ಯಾಯವಾಗಿ ಕೃತಕ ಮರಳು(ಎಂ-ಸ್ಯಾಂಡ್) ಬಳಕೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಕಟ್ಟಡ ಹಾಗೂ ನಿರ್ಮಾಣ ಕಾಮಗಾರಿಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ ನೈಸರ್ಗಿಕ ಮರಳಿನ ಅಭಾವ, ಗಣಿಕಾರಿಕೆಗೆ ಇರುವ ನಿಷೇಧ ಹಾಗೂ ಕಳಪೆ ಗುಣಮಟ್ಟದ ಮರಳು ದಂಧೆಯ ಹಿನ್ನೆಲೆಯಲ್ಲಿ ಜನರು ಕೃತಕ ಮರಳಿನ ಕಡೆಗೆ ವಾಲುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸರಾಸರಿ ಶೇ.50ಕ್ಕೂ ಅಧಿಕ ಜನರು ಮನೆ ಹಾಗೂ ಕಟ್ಟಡ ಕಾಮಗಾರಿಗಳಿಗೆ ಕೃತಕ ಮರಳನ್ನೇ ಬಳಕೆ ಮಾಡಲು ಮುಂದಾಗಿದ್ದಾರೆ.

ಇದಲ್ಲದೆ ಇನ್ನೂ ಕೆಲವು ಭಾಗದಲ್ಲಿ ಫಿಲ್ಟರ್ ಮರಳುಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಫಿಲ್ಟರ್ ಮರಳು ಬಳಕೆದಾರರ ಸಂಖ್ಯೆ ಶೇ.80 ಕಡಿಮೆಯಾಗಿದೆ. ಕಳಪೆ ಗುಣಮಟ್ಟ ಹಾಗೂ ಕಟ್ಟಡಗಳ ಬಾಳಿಕೆಯ ದೃಷ್ಟಿಯಿಂದ ಫಿಲ್ಟರ್ ಮರಳಿನ ಬಳಕೆ ಇಳಿಕೆಯಾಗುತ್ತಿದೆ.

ಏನಿದು ಎಂ-ಸ್ಯಾಂಡ್ ?

ಗಟ್ಟಿಯಾದ ಗ್ರೇನೈಟ್ ಕಲ್ಲುಗಳನ್ನು ಕ್ರಶರ್​ಗಳ ಮೂಲಕ ಸಣ್ಣ ತುಣುಕುಗಳಾಗಿ ಪರಿವರ್ತನೆ ಮಾಡಲಾಗುತ್ತದೆ. ಹೀಗೆ ಲಭಿಸಿದ ಗ್ರಾನೈಟ್ ಹುಡಿಗಳನ್ನು ಕಟ್ಟಡ ನಿರ್ವಣದ ಅಗತ್ಯತೆಗೆ ತಕ್ಕಂತೆ ಗಾತ್ರಗಳಲ್ಲಿ ಹೆಚ್ಚು-ಕಮ್ಮಿ ಮಾಡಿ, ಇವನ್ನು ಚೆನ್ನಾಗಿ ತೊಳೆಯಲಾಗುತ್ತದೆ. ಅವುಗಳ ಗಾತ್ರದ ಆಧಾರದ ಮೇಲೆ ಎಂ-ಸ್ಯಾಂಡ್ ತಯಾರಿಸಲಾಗುತ್ತದೆ. ಇವುಗಳೊಂದಿಗೆ ನಿಗದಿ ಪ್ರಮಾಣದ ಧೂಳನ್ನೂ ಮಿಶ್ರಮಾಡಲಾಗುತ್ತದೆ. ಘನಾಕಾರದ ಸಣ್ಣ ತುಣುಕುಗಳಾಗಿರುವ ಗ್ರಾನೈಟ್​ಗಳು ಇದೀಗ ಎಂ-ಸ್ಯಾಂಡ್​ಗಳಾಗಿದ್ದು, ಕಟ್ಟಡ ನಿರ್ವಣದಲ್ಲಿ ನೈಸರ್ಗಿಕ ಮರಳಿನ ಬೇಡಿಕೆಯನ್ನು ಕಡಿಮೆಗೊಳಿಸುತ್ತಿದೆ.

 

ಎಂ-ಸ್ಯಾಂಡ್ ಸುಸ್ಥಿರತೆ ಪರೀಕ್ಷೆ

ರಾಜ್ಯ ಭೂಗರ್ಭ ಹಾಗೂ ಗಣಿ ವಿಜ್ಞಾನ ಸಂಸ್ಥೆಯಿಂದ ಕೃತಕ ಮರಳಿನ ಬಾಳಿಕೆ, ಭಾರ, ಒತ್ತಡ ತಡೆದುಕೊಳ್ಳುವ ಬಗೆ, ಕಾಂಕ್ರೀಟ್ ಮಿಶ್ರಣದಲ್ಲಿನ ವ್ಯತ್ಯಾಸಗಳ ಬಗ್ಗೆ ಪರೀಕ್ಷೆ ನಡೆಸಲಾಗಿದೆ.

1. ಕೃತಕ ಮರಳು ನೈಸರ್ಗಿಕ ಮರಳಿಗಿಂತ ಶೇ.30 ಹೆಚ್ಚು ಭಾರ ತಡೆದುಕೊಳ್ಳುತ್ತದೆ.

2. ಎಂ-ಸ್ಯಾಂಡ್ ನೀರು ಹಿಡಿದಿಟ್ಟುಕೊಳ್ಳುವಿಕೆ ಶೇ.35 ಹೆಚ್ಚಿರುವುದು ದೃಢಪಟ್ಟಿದೆ.

3. ತಳಹದಿಯ ತೇವ ಹೀರಿಕೊಳ್ಳುವಿಕೆ ಶೇ.10 ಹೆಚ್ಚು.

4. ಕಟ್ಟಡಗಳಲ್ಲಿ ಕ್ರ್ಯಾಕ್ ಬರುವುದಿಲ್ಲ

ನಕಲಿ ಎಂ-ಸ್ಯಾಂಡ್ ಸಹ

ಸಿಗುತ್ತೆ ಎಚ್ಚರ

ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ನಕಲಿ ಎಂ-ಸ್ಯಾಂಡ್​ಗಳೂ ಲಭ್ಯವಿರುತ್ತದೆ. ಗುಣಮಟ್ಟದ ಎಂ-ಸ್ಯಾಂಡ್ ಜತೆಗೆ, ಕಲಬೆರಕೆ ಮಾಡುವ ದಂಧೆಗಳೂ ಹೆಚ್ಚಾಗಿ ನಡೆಯುತ್ತದೆ. ಹೀಗಾಗಿ ಗ್ರಾಹಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಐಎಸ್​ಒ ಅಂತಾರಾಷ್ಟ್ರೀಯ ಗುಣಮಟ್ಟದ ಮರಳೇ ಎಂಬ ಬಗ್ಗೆ ತಿಳಿದುಕೊಳ್ಳಬೇಕು

ಗುಣಮಟ್ಟ ಹೀಗೆ ಪರೀಕ್ಷಿಸಿ: ಒಂದು ಮುಷ್ಟಿಯಷ್ಟು ಎಂ-ಸ್ಯಾಂಡ್ ಹಿಡಿದು, ಅವುಗಳ ಆಕಾರವನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಿ. ಮರಳಿನ ಕಣ ಕೈಗೆ ಸಿಕ್ಕಿದಂತೆಲ್ಲಾ ಆಕಾರ ಒಂದೇ ಸಮಾನಾಗಿರುವುದು ಅನುಭವವಾಗಬೇಕು. ಹೀಗಿದ್ದರೆ ಗುಣಮಟ್ಟ ಚೆನ್ನಾಗಿದೆ ಎಂದು. ಅಲ್ಲದೆ ಕೈಯಲ್ಲಿ ಧೂಳಿನ ಪ್ರಮಾಣ, ಕಲ್ಲು, ಇತ್ಯಾದಿಗಳು ಕಾಣಬಾರದು. ಎಂ ಸ್ಯಾಂಡ್

1. ಗ್ರಾನೈಟ್ ಕಲ್ಲುಗಳಿಂದ ತಯಾರಿಸುವ ಕಾರಣ, ಪ್ರತೀಕೂಲ ಹವಾಮಾನ ಹಾಗೂ ಅಧಿಕ ನೀರು ಇತ್ಯಾದಿ ವ್ಯತ್ಯಾಸಗಳಿಂದ ಕಟ್ಟಡಗಳಿಗೆ ಆಗಬಹುದಾದ ತೊಂದರೆಯನ್ನು ತಡೆಯುತ್ತದೆ. ಅಲ್ಲದೆ ಕಟ್ಟಡಗಳ ಮೂಲೆಗಳಲ್ಲಿ ಜೇನು ಗೂಡು ಕಟ್ಟುವುದು, ಕಟ್ಟಡದ ಗೋಡೆಗಳಲ್ಲಿ ಬಿರುಕು ಕಾಣುವುದು ಸೇರಿದಂತೆ ಇನ್ನಿತರ ತೊಂದರೆಗೆ ಕಡಿವಾಣ ಬೀಳುತ್ತದೆ.

2 ಎಲ್ಲ ಮರಳಿನ ಕಣಗಳೂ ಒಂದೇ ರೀತಿ ಆಕೃತಿ ಹೊಂದಿರುವುದರಿಂದ ಕಾಂಕ್ರೀಟ್ ಮಿಶ್ರಣ ಹಾಗೂ ಮಿಶ್ರಣವನ್ನು ಬಳಕೆ ಮಾಡಲು ಕಾರ್ವಿುಕರಿಗೆ ಸುಲಭವಾಗುತ್ತದೆ. ಅಲ್ಲದೆ ಅಂತಿಮ ಹಂತದ ಕಾಮಗಾರಿಗಳಲ್ಲಿ ಅತ್ಯಂತ ಫೈನ್ ಟಚ್ ನೀಡಲೂ ಸಾಧ್ಯವಾಗುತ್ತದೆ. ಎಲ್ಲ ಕಣಗಳು ಘನ ಆಕೃತಿ ಹೊಂದುವುದರಿಂದ ಅಣುಗಳ ನಡುವಿನ ಬಂಧಗಳು ಅತ್ಯಂತ ಗಟ್ಟಿಯಾಗಿರುತ್ತದೆ. ಇದರಿಂದ ಕಾಂಕ್ರೀಟ್ ಮಿಶ್ರಣದ ಬಾಳಿಕೆ ದ್ವಿಗುಣವಾಗುತ್ತದೆ.

3. ಕೃತಕವಾಗಿ ತಯಾರಿಸುವುದರಿಂದ ಇವುಗಳನ್ನು ಮತ್ತೆ ಶುದ್ಧೀಕರಿಸುವ ಕೆಲಸ ಇಲ್ಲ. ಕಾರ್ವಿುಕರ ಸಮಯ ಉಳಿತಾಯವಾಗುತ್ತದೆ. ಅಲ್ಲದೆ ವಾತಾವರಣದಲ್ಲಿರುವ ಬೇರೆ ಯಾವುದೇ ಸಾವಯವ ಪಾದಾರ್ಥಗಳನ್ನು ಒಳಗೊಂಡಿರುವುದಿಲ್ಲ. ಕಲ್ಲುಗಳನ್ನು ಬೇರ್ಪಡಿಸುವ ಕೆಲಸವೂ ಇರುವುದಿಲ್ಲ.

4. ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದ್ದು, ಪರಿಸರಕ್ಕೆ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಅಲ್ಲದೆ ನೈಸರ್ಗಿಕ ಮರಳು ಬೇಡಿಕೆ ಹೆಚ್ಚಾದಂತೆ ಬೆಲೆಯೂ ಅಧಿಕ

5. ಕೃತಕ ಮರಳು ತಯಾರಿಕೆಗೆ ಮಾನವನ ಶಕ್ತಿಯ ಬಳಕೆ ಕಡಿಮೆ. ನೈಸರ್ಗಿಕ ಮರಳು

1. ಎಲ್ಲ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ವಿಪರೀತ ಮಳೆ ಹಾಗೂ ಬಿರು ಬಿಸಿಲು ತಡೆಯುವ ಶಕ್ತಿ ಕಡಿಮೆ.

2. ನದಿ ತಳಭಾಗದಿಂದ ನೈಸರ್ಗಿಕವಾಗಿ ಸಿಗುವುದರಿಂದ ಕಣಗಳ ಆಕಾರಗಳಲ್ಲಿ ವಿಭಿನ್ನತೆ. ಕಾಂಕ್ರೀಟ್ ಮಿಶ್ರಣಕ್ಕೆ ಅಧಿಕ ಮರಳಿನ ಅವಶ್ಯಕತೆ ಇರುತ್ತದೆ. ಮಿಶ್ರಣದಲ್ಲಿ ತಪ್ಪಾದರೆ ಗೋಡೆಗಳಲ್ಲಿ ಬಿರುಕು.

3. ಶುದ್ಧೀಕರಣ ಮಾಡದೇ ಕಾಮಗಾರಿಯಲ್ಲಿ ಬಳಸುವುದು ಅಸಾಧ್ಯ. ಕಲ್ಲು ಹಾಗೂ ಧೂಳಿನ ಪ್ರಮಾಣ ಬೇರ್ಪಡಿಸುವುದು ಅನಿವಾರ್ಯ. ಕಾರ್ವಿುಕರಿಗೆ

ಕೆಲಸ ಹೆಚ್ಚು

4. ಮಿತಿಮೀರಿದ ಮರಳು ಗಣಿಗಾರಿಕೆಯಿಂದ ಅಂತರ್ಜಲಕ್ಕೆ ಪೆಟ್ಟು. ಪರಿಸರಕ್ಕೆ ಹಾನಿ

5. ನದಿ ಮಧ್ಯಭಾಗಕ್ಕೆ ದೋಣಿಯಲ್ಲಿ ತೆರಳಬೇಕು. ಅಥವಾ ನೀರಿಲ್ಲದ ಸಂದರ್ಭದಲ್ಲಿ ಮಾತ್ರ ಮರಳು ತೆಗೆಯಲು ಸಾಧ್ಯ. ಮಾನವನ ಶಕ್ತಿಯ ಬಳಕೆ ಯಥೇಚ್ಛ

 

Leave a Reply

Your email address will not be published. Required fields are marked *

Back To Top