Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಕಿಚ್ಚ ಸುದೀಪ್ ಟ್ವಿಟರ್ ಹೆಬ್ಬುಲಿ

Monday, 17.07.2017, 3:05 AM       No Comments

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸ್ಯಾಂಡಲ್​ವುಡ್​ನಲ್ಲಿ ಎಲ್ಲ ಹೀರೋಗಳಿಗೂ ಅವರದ್ದೇ ಆದ ಅಪಾರ ಅಭಿಮಾನಿಗಳಿದ್ದಾರೆ. ಹಾಗೆಯೇ ಅನೇಕ ಹೀರೋಗಳು ಟ್ವಿಟರ್, ಫೇಸ್​ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದರಿಂದ ಅವರದ್ದೇ ಆದ ಫಾಲೋವರ್ಸ್ ಕೂಡ ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ ಯಾರೆಂದರೆ ಹೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ.. ಅಭಿಮಾನದ ಪ್ರಮಾಣ, ಅಭಿಮಾನಿಗಳ ಸಂಖ್ಯೆ ಒಂದು ನಿಲುಕಿಗೆ ಸಿಗುವಂಥದ್ದಲ್ಲ. ಆದರೆ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟ ಯಾರು ಎಂದರೆ ಉತ್ತರಿಸುವುದು ಸುಲಭ. ಟ್ವಿಟರ್ ಫಾಲೋವಿಂಗ್ ಪ್ರಕಾರ ಸ್ಯಾಂಡಲ್​ವುಡ್ ಮಟ್ಟಿಗೆ ಟಾಪ್ 1 ಸ್ಟಾರ್ ಎಂದರೆ ಅದು ಕಿಚ್ಚ ಸುದೀಪ್. ಹೌದು.. ಟ್ವಿಟರ್​ನಲ್ಲಿ ಸುದೀಪ್ ಅವರನ್ನು ಫಾಲೋ ಮಾಡುವವರ ಸಂಖ್ಯೆ 8 ಲಕ್ಷದ ಗಡಿಯನ್ನೂ ದಾಟಿದೆ!

ಅವರನ್ನು ಬಿಟ್ಟರೆ ನಂತರದ ಸ್ಥಾನಗಳಲ್ಲಿ ‘ರಿಯಲ್ ಸ್ಟಾರ್’ ಉಪೇಂದ್ರ (2.73 ಲಕ್ಷ), ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (2.26 ಲಕ್ಷ), ರಕ್ಷಿತ್ ಶೆಟ್ಟಿ (1.58 ಲಕ್ಷ), ಜಗ್ಗೇಶ್(1.28 ಲಕ್ಷ), ರಮೇಶ್ ಅರವಿಂದ್ (1.04 ಲಕ್ಷ), ಶ್ರೀಮುರಳಿ (78.1 ಸಾವಿರ), ‘ಗೋಲ್ಡನ್ ಸ್ಟಾರ್’ ಗಣೇಶ್ (65.9 ಸಾವಿರ), ‘ರಾಕಿಂಗ್ ಸ್ಟಾರ್’ ಯಶ್ (55.8 ಸಾವಿರ) ಮುಂತಾದವರಿದ್ದಾರೆ.

ಸುದೀಪ್ ಟ್ವಿಟರ್ ಖಾತೆಗೆ 2013ರ ಆಗಸ್ಟ್​ನಲ್ಲೇ ಮೊದಲ 1 ಲಕ್ಷ ಫಾಲೋವರ್ಸ್ ಲಭಿಸಿದ್ದರು. ಆಮೇಲೆ ಫಾಲೋವರ್ಸ್ ಸಂಖ್ಯೆ ಕ್ರಮೇಣ ಹೆಚ್ಚಾಗಿ, 2016ರ ನವಂಬರ್​ನಲ್ಲಿ ಅದು 5 ಲಕ್ಷದ ಗಡಿ ದಾಟಿತ್ತು. ಅದಾಗಿ 8 ತಿಂಗಳಲ್ಲೇ 3 ಲಕ್ಷ ಫಾಲೋವರ್ಸ್ ಹೆಚ್ಚುವರಿ ಸೇರ್ಪಡೆ ಆಗಿದ್ದು, ಒಟ್ಟು ಫಾಲೋವರ್ಸ್ ಸಂಖ್ಯೆ 8 ಲಕ್ಷ ದಾಟಿದೆ. ಇನ್ನು, ಸುದೀಪ್ ಟ್ವಿಟರ್​ನಲ್ಲಿ 26 ಜನರನ್ನು ಫಾಲೋ ಮಾಡುತ್ತಿದ್ದಾರೆ.

ಟ್ವಿಟರ್​ನಲ್ಲಿ ನಟರನ್ನೂ ಮೀರಿಸುವಂತೆ ಸುದೀಪ್​ಗೆ ಪೈಪೋಟಿ ನೀಡುವ ರೀತಿಯಲ್ಲಿ ಫಾಲೋವರ್ಸ್ ಹೊಂದಿರುವ ನಟಿ ಎಂದರೆ ರಮ್ಯಾ. ಸದ್ಯ ಅವರ ಫಾಲೋವರ್ಸ್ ಸಂಖ್ಯೆ 5 ಲಕ್ಷ.

ಒಂದು ಲಕ್ಷ ಹೊಸ ಸ್ನೇಹಿತರು ನನ್ನನ್ನು ಅವರ ಜೀವನದ ಭಾಗ ಆಗಿಸಿಕೊಂಡಿರುವುದಕ್ಕೆ ಥ್ಯಾಂಕ್ಸ್. ಹಾಗೆಯೇ 7 ಲಕ್ಷ ಸ್ನೇಹಿತರು ನನ್ನನ್ನು ಇನ್ನೂ ಹಚ್ಚಿಕೊಂಡಿರುವುದಕ್ಕೂ ಥ್ಯಾಂಕ್ಸ್…

| ಕಿಚ್ಚ ಸುದೀಪ್ ನಟ

Leave a Reply

Your email address will not be published. Required fields are marked *

Back To Top