Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಕಾಶೀನಾಥ್ ಅಲ್ಲ, ವಿಶ್ವನಾಥ್..

Monday, 20.03.2017, 10:09 AM       No Comments

| ಬ್ಯಾಡನೂರು ಹರ್ಷವರ್ಧನ್ ಬೆಂಗಳೂರು

1980ರ ದಶಕದಲ್ಲಿ ನಾಯಕನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡವರು ಕಾಶೀನಾಥ್. ಮೂರೂವರೆ ದಶಕ ಕಳೆದರೂ ಅವರನ್ನು ‘ಅನುಭವ’ ಮೂಲಕವೇ ಗುರುತಿಸಲಾಗುತ್ತಿತ್ತು. ಕಾಶೀನಾಥ್ ಎಂದರೆ, ಅಡಲ್ಟ್ ಕಾಮಿಡಿ ಸಿನಿಮಾಗಳಿಗಷ್ಟೇ ಸೂಕ್ತ, ಸೀರಿಯಸ್ ಕಥೆ ಅವರಿಂದಾಗಲ್ಲ ಅಂತಲೇ ಬಹುತೇಕರು ನಿರ್ಧರಿಸಿದ್ದಂತಿತ್ತು. ‘ಚೌಕ’ ಚಿತ್ರದ ವಿಶ್ವನಾಥ್ ಪಾತ್ರದ ಮೂಲಕ ಆ ಇಮೇಜ್​ನಿಂದ ಹೊರಬಂದಿದ್ದಾರೆ ಕಾಶೀನಾಥ್. ಈ ಚಿತ್ರ 50 ದಿನಗಳನ್ನು ಪೂರೈಸಿದೆ. ಈ ಸುಸಂದರ್ಭ ‘ನಮಸ್ತೆ ಬೆಂಗಳೂರು’ ಜತೆ ಕಾಶೀನಾಥ್ ತಮ್ಮ ‘ಅನುಭವ’ ಹಂಚಿಕೊಂಡಿದ್ದಾರೆ.

  •  ‘ಚೌಕ’ ಚಿತ್ರದಲ್ಲಿನ ವಿಶ್ವನಾಥ್ ಪಾತ್ರ ಸಿಕ್ಕಿದ್ದು ಹೇಗೆ?

-ನಿರ್ದೇಶಕ ತರುಣ್ ಸುಧೀರ್ ನಾಲ್ಕು ವರ್ಷಗಳ ಹಿಂದೆ ಮಾಡಿದ್ದ ಕಥೆಯದು. ಆಗಾಗ ನನ್ನ ಮಗನ (ಅಭಿಮನ್ಯು) ಬಳಿ ಹೇಳುತ್ತಿದ್ದ. ಇನ್ನೇನು ಸಿನಿಮಾ ಪ್ರಾರಂಭವಾಗಬೇಕು ಎನ್ನುವಾಗ ಭೇಟಿಯಾದ. ಕಥೆ ಇಷ್ಟವಾಯಿತು. ಆದರೆ ನನ್ನಿಂದ ಈ ಪಾತ್ರ ಸಾಧ್ಯವಾ, ಜನ ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನವಿತ್ತು. ಆದರೆ, ತರುಣ್​ಗೆ ನನ್ನ ಮೇಲೆ ಕಾನ್ಪಿಡೆನ್ಸ್ ಇತ್ತು.

  • ಪಾತ್ರಕ್ಕೆ ಸಿದ್ಧತೆ ಹೇಗಿತ್ತು?

-ಇಲ್ಲಿ ನನಗೆ ಇದುವರೆಗೂ ಮಾಡಿರದ ಪಾತ್ರ ಸಿಕ್ಕಿತು. ವಿಶ್ವನಾಥ್ ಸುತ್ತವೇ ಕಥೆ ಸುತ್ತುತ್ತದೆ. ನಾನೇ ವೀಕ್ ಆದಲ್ಲಿ ಉಳಿದ ಪಾತ್ರಗಳೂ ವೀಕ್ ಆಗಿಬಿಡುವ ಭಯ, ಜವಾಬ್ದಾರಿ ಎರಡೂ ಇದ್ದವು. ಹೀಗಾಗಿಯೇ ಸವಾಲಾಗಿ ತೆಗೆದುಕೊಂಡೆ. ತೆರೆಮೇಲೆ ನೀವು ಕಾಶೀನಾಥ್ ನೋಡಲ್ಲ, ಬದಲಾಗಿ ವಿಶ್ವನಾಥ್ ನೋಡುತ್ತೀರಿ. ಹಲವು ಬಾರಿ ತರುಣ್ ಜತೆ ರ್ಚಚಿಸಿ ಔಟ್​ಲುಕ್ ಬದಲಿಸಿಕೊಂಡೆ, ಮ್ಯಾನರಿಸಂ, ಡೈಲಾಗ್ ಡೆಲಿವರಿ ಹೀಗೆ ಕಂಪ್ಲೀಟ್ ಚೇಂಜ್ ಓವರ್ ಮಾಡಿಕೊಂಡೆ.

  • ಈ ಚಿತ್ರದಲ್ಲಿನ ನಟನೆಗೆ ಸಿಕ್ಕ ಅತ್ಯುತ್ತಮ ಕಾಂಪ್ಲಿಮೆಂಟ್?

-ಸಿನಿಮಾದ ಓವರ್ ಆಲ್ ಇಂಪ್ಯಾಕ್ಟ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರ ನೋಡಿದ ಎಷ್ಟೋ ಮಂದಿ ಥಿಯೇಟರ್​ನಲ್ಲೇ ಅತ್ತಿದ್ದಾರೆ. ಗುರುತು-ಪರಿಚಯವಿಲ್ಲದವರು, ಸಂಬಂಧವಿಲ್ಲದವರೂ ನನ್ನ ನಂಬರ್ ಹುಡುಕಿ/ಪಡೆದು ಕರೆ ಮಾಡಿ, ಹೂಗುಚ್ಛ ಮತ್ತು ಪತ್ರ ಕಳಿಸಿದ್ದಾರೆ. ನಟ ರವಿಶಂಕರ್ ಕೂಡ ಕರೆ ಮಾಡಿ, ‘ಈ ಬಾರಿಯ ಎಲ್ಲ ಪ್ರಶಸ್ತಿಗಳೂ ನಿಮಗೇ..’ ಅಂದರು. ನಾನು, ರವಿಶಂಕರ್ ಕನ್ನಡ ಚಿತ್ರರಂಗದಲ್ಲೇ ಇದ್ದರೂ ಇದುವರೆಗೂ ಭೇಟಿಯಾಗಿಲ್ಲ. ಜತೆಯಾಗಿ ಕೆಲಸ ಮಾಡಿಲ್ಲ. ಆದರೂ ನನ್ನ ನಂಬರ್ ಹುಡುಕಿ ಕರೆ ಮಾಡಿದ್ದು ತುಂಬ ಖುಷಿ ನೀಡಿತು.

  •  ‘ಚೌಕ’ ಚಿತ್ರದಿಂದ ನಿಮ್ಮ ಇಮೇಜ್ ಬದಲಾಗಿದೆ ಅಂತನ್ನಿಸುತ್ತಾ?

-ಖಂಡಿತ ಹೌದು. ನಾನು ಈ ರೀತಿಯ ಪಾತ್ರಗಳನ್ನೂ ಮಾಡಬಲ್ಲೆ ಅಂತ ಗೊತ್ತಾಗಿದೆ. ನಿರ್ದೇಶಕ ತರುಣ್​ಗೆ ನನ್ನ ಮೇಲೆ ಆತ್ಮವಿಶ್ವಾಸ ಇದ್ದರೂ, ನನಗೇ ಡೌಟ್ ಇತ್ತು. ಜತೆಗೆ ನಿರ್ವಪಕರೂ ಪ್ರಾರಂಭದಲ್ಲಿ ‘ಬೇಡ ರೀ..’ ಅಂದಿದ್ದರು. ಹೀಗಾಗಿಯೇ ಮಾತುಕತೆಯಾದ ಬಳಿಕ ಒಂದು ತಿಂಗಳಾದರೂ ಚಿತ್ರತಂಡದಿಂದ ಕರೆ ಬಂದಿರಲಿಲ್ಲ. ನಾನೂ ಬೇರೆಯವರನ್ನು ಆಯ್ಕೆ ಮಾಡಿಕೊಂಡಿರಬಹುದು ಅಂತ ಸುಮ್ಮನಾದೆ. ಆದರೆ ತರುಣ್ ಪಟ್ಟು ಬಿಡಲಿಲ್ಲ. ಕಾಶೀನಾಥ್ ಆ ಪಾತ್ರ ಮಾಡಿದರೆ, ವಿಭಿನ್ನವಾಗಿರುತ್ತದೆ ಅಂತ ಎಲ್ಲರನ್ನೂ ಒಪ್ಪಿಸಿದ್ದರು.

  • ಇದೀಗ ಸೀರಿಯಸ್ ಪಾತ್ರಗಳ ಆಫರ್ ಹೆಚ್ಚು ಬರುತ್ತಿರಬೇಕಲ್ಲವೇ?

-ಹೌದು, ಆದರೆ ನನಗೆ ಒಂದೇ ರೀತಿಯ ಪಾತ್ರದಲ್ಲಿ ನಟಿಸಲು ಇಷ್ಟವಿಲ್ಲ. ಹೀಗಾಗಿಯೇ ಪಾತ್ರದ ಆಯ್ಕೆ ಬಗ್ಗೆ ತುಂಬ ಗಮನ ಕೊಡುತ್ತಿದ್ದೇನೆ. ಸದ್ಯಕ್ಕೆ ಒಂದು ಆಫರ್ ಬಂದಿದೆ. ಇಲ್ಲೂ ವಿಭಿನ್ನ ಔಟ್​ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಹುಡುಗರಿಗೇ ಸವಾಲು ಹಾಕುವ ಚಾಲೆಂಜಿಂಗ್ ಪಾತ್ರವದು.

  •  ಮತ್ತೆ ನಿರ್ದೇಶನ ಮಾಡುವ ಆಲೋಚನೆ,..

-ಸಿನಿಮಾ ಮಾಡಬೇಕು ಅಂತ ಯಾರನ್ನೂ ಹುಡುಕಿಕೊಂಡು ಓಡಾಡಲ್ಲ. ಯಾರಾದರೂ ಸಿನಿಮಾ ಮಾಡಿಕೊಡಿ ಅಂತ ಬಂದರೆ, ಯೋಚಿಸುತ್ತೇನೆ ಅಥವಾ ನನ್ನ ಶಿಷ್ಯ ಕಾರ್ತಿಕ್ ಹೆಸರು ಹೇಳುತ್ತೇನೆ. ನಾನು ಎಲ್ಲ ಬಗೆಯ ಸಿನಿಮಾ ಮಾಡಿದ್ದಾಗಿದೆ. ಸವಾಲು ಎನಿಸುವ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡುವ, ಆಸ್ಕರ್ ಮಟ್ಟಕ್ಕೇರುವಂತಹ ಇಂಗ್ಲಿಷ್ ಸಿನಿಮಾ ಮಾಡುವ ಆಫರ್ ದೊರೆತರೆ ಆಗ ಮತ್ತೆ ನಿರ್ದೇಶನ ಮಾಡುವ ಛಲ ಮೂಡಬಹುದು ಅನ್ನಿಸುತ್ತದೆ!

Leave a Reply

Your email address will not be published. Required fields are marked *

Back To Top