Saturday, 22nd September 2018  

Vijayavani

‘ದಂಗೆ’ ಬಿಸಿ ತಟ್ಟುತ್ತಿದ್ದಂತೆ ದೇವರ ಸ್ತುತಿ - ಶಾರದಂಬೆ ಸನ್ನಿಧಿಯಲ್ಲಿ ಎಚ್​​ಡಿಕೆ - ಸಿಎಂಗೆ ಅಣ್ಣ ರೇವಣ್ಣ ಸಾಥ್​        ರಾಜ್ಯ ರಾಜಕೀಯ ಹಾಸನಕ್ಕೆ ಶಿಫ್ಟ್​ - ಇಂದು ಹಾಸನದಲ್ಲಿ ಜೆಡಿಎಲ್​​ಪಿ ಮೀಟಿಂಗ್​ - ದಳನಾಯಕರಿಂದ ರಣತಂತ್ರದ ಚರ್ಚೆ        ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ - ಇಂದು ಕೂಡ ಹಲವೆಡೆ ಹೋರಾಟ ಸಂಭವ        ಇಂದು ಚಿಕ್ಕಮಗಳೂರಲ್ಲಿ ಸಿಎಂ ಮೀಟಿಂಗ್​ - ಅತಿವೃಷ್ಟಿ, ಅನಾವೃಷ್ಟಿ ಕುರಿತು ಚರ್ಚೆ - ಸಿಎಂಗೆ ವರದಿ ನೀಡಲಿರುವ ಡಿಸಿ        ರಾಫೆಲ್​​ ವಿಮಾನ​​​​ ಖರೀದಿ ಹಗರಣ - ಭಾರತವೇ ಅನಿಲ್​ ಅಂಬಾನಿ ಹೆಸರು ಸೂಚಿಸಿತ್ತು - ವಿವಾದಕ್ಕೆ ತುಪ್ಪ ಸುರಿದ ಹೊಲೆಂಡೆ ಹೇಳಿಕೆ        ಭುಗಿಲೆದ್ದಿರುವ ರಫೇಲ್​​ ಡೀಲ್​ ಹಗರಣ - ಪ್ರಕಟಣೆ ಹೊರಡಿಸಿದ ಫ್ರಾನ್ಸ್​​ ಸರ್ಕಾರ - ಕಂಪನಿಗಳ ಮೇಲೆ ಹಸ್ತಕ್ಷೇಪ ಇಲ್ಲವೆಂದು ಸ್ಪಷ್ಟನೆ       
Breaking News

ಕಾಲುಬಾಯಿಗೆ ಜಾನುವಾರು ತತ್ತರ

Tuesday, 12.06.2018, 3:51 AM       No Comments

ವಿಜಯಪುರ: ಹೋಬಳಿಯ ಕೆಲ ಗ್ರಾಮಗಳಲ್ಲಿ ಕಾಲುಬಾಯಿ ಜ್ವರ ತೀವ್ರವಾಗಿ ಹರಡುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಚಿಕ್ಕಬಳ್ಳಾಪುರ ಗಡಿ ಗ್ರಾಮಗಳಾದ ಕೊಮ್ಮಸಂದ್ರ, ಪುರ, ಚಂದೇನಹಳ್ಳಿ ಮೊದಲಾದ ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದ್ದು, 15 ದಿನಗಳಿಂದ ಸೋಂಕು ತೀವ್ರವಾಗಿ ಹರಡುತ್ತಿದೆ. ರಾಸುಗಳು ನಿರಂತರವಾಗಿ ಜೊಲ್ಲು ಸುರಿಸುತ್ತ ಅತಿಯಾದ ಜ್ವರದಿಂದ ಬಳಲುತ್ತಿ್ತೆ.

ನಾಲಿಗೆ, ತುಟಿ ಸೀಳುವಿಕೆ, ಗೊರಸುಗಳಲ್ಲಿ ಹುಳು ಬೀಳುವುದು, ಸುಸ್ತು, ಆಹಾರ ಸೇವಿಸದಿರುವುದು ನಿಸ್ತೇಜಗೊಳ್ಳುವುದು, ಹಾಲು ಉತ್ಪಾದನೆ ನಿಂತುಹೋಗುವುದು ರೋಗ ಲಕ್ಷಣ.

ಕೊಮ್ಮಸಂದ್ರದಲ್ಲಿ ಸುಮಾರು 300 ರಾಸುಗಳಿದ್ದು, ಆ ಪೈಕಿ ಈಗಾಗಲೇ 60ಕ್ಕೂ ಹೆಚ್ಚು ರಾಸುಗಳಿಗೆ ಸೋಂಕು ಹರಡಿದೆ. ಪಶು ವೈದ್ಯರು ಇಂಜೆಕ್ಷನ್ ಕೊಟ್ಟು ಹೋಗುತ್ತಿದ್ದು, ಇಲಾಖೆ ಶಾಶ್ವತ ಪರಿಹಾರ ಸೂಚಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಸಾಮಾನ್ಯವಾಗಿ ಮಳೆ ಬಂದರೆ ಸೋಂಕು ಕಡಿಮೆಯಾಗಬೇಕು. ಈಗಾಗಲೇ ಎರಡು- ಮೂರು ಬಾರಿ ಅಧಿಕ ಮಳೆ ಬಿದ್ದಿದ್ದರೂ ಕಾಲುಬಾಯಿ ಜ್ವರ ಕಡಿಮೆಯಾಗುತ್ತಿಲ್ಲ. ರಾಸುಗಳನ್ನು ದೇವರಂತೆ ಕಾಣುವ ನಮಗೆ ಅವುಗಳು ಕಾಯಿಲೆಯಿಂದ ನರಳುವುದನ್ನು ನೋಡಲಾಗದು. ನಿತ್ಯವೂ ಇಪ್ಪತ್ತೈದು ಲೀಟರ್ ಹಾಲು ಹಾಕುತ್ತಿದ್ದವರು ಹಾಲೇ ಬರುತ್ತಿಲ್ಲವಾದ್ದರಿಂದ ಹೈನುಗಾರಿಕೆ ನಂಬಿ ಜೀವನ ದುಸ್ತರವಾಗಿದೆ ಎನ್ನುತ್ತಾರೆ ಕೊಮ್ಮಸಂದ್ರ ರೈತ ಶಿವಕುಮಾರ್.

ನಿರಂತರ ಪೂಜೆಗೆ ಮೊರೆ: ಕೊಮ್ಮಸಂದ್ರ ಗ್ರಾಮಸ್ಥರು ರಾಸುಗಳಿಗೆ ರೋಗ ಹರಡಿರುವ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಬದಲು ದೇವರ ಮೊರೆ ಹೋಗಿದ್ದಾರೆ. ತಂಬಿಟ್ಟು ಆರತಿ, ಪೂಜೆ ನೆರವೇರಿಸಿ ದೇವರ ಉತ್ಸವ ನೆರವೇರಿಸುತ್ತಿದ್ದಾರೆ. ರಾಸುಗಳಿಗೆ ಶೀಘ್ರ ಗುಣಮುಖವಾಗಲು ಪೂರಕವಾಗಿ ವೀಳ್ಯದೆಲೆ, ಈರುಳ್ಳಿ, ಬೆಲ್ಲ, ಕೊತ್ತಂಬರಿ ಸೊಪ್ಪು ಮತ್ತಿತರ ವಸ್ತು ತಿನ್ನಿಸಲು ಮುಂದಾಗಿದ್ದಾರೆ.

 

ಜಮೀನು ಅಲ್ಪ ಮಾತ್ರ ಇದೆ. ಇರುವ ಎರಡು ಹಸುಗಳನ್ನೇ ನಂಬಿದ್ದೇವೆ. ಅವುಗಳಿಗೂ ರೋಗ ತಗುಲಿ ಹಾಲು ಕಡಿಮೆಯಾಗಿದೆ. ಪಶುವೈದ್ಯ ಇಲಾಖೆ ವೈದ್ಯರು ಕೆಎಂಎಫ್​ನಿಂದ ರಾಸುಗಳಿಗೆ ಇನ್ಶೂರೆನ್ಸ್, ಟೋಕನ್ ಹಾಕಿಸಿದ್ದರೆ ಮಾತ್ರ ಬಂದು ಚಿಕಿತ್ಸೆ ನೀಡುತ್ತಾರೆ. ಈಗ ಹಾಲು ಉತ್ಪಾದನೆಯೂ ಇಲ್ಲವಾದ್ದರಿಂದ ಖಾಸಗಿ ವೈದ್ಯರಿಂದಲೂ ಚಿಕಿತ್ಸೆ ಕೊಡಿಸಲು ಆಗದಂತಾಗಿದೆ.

| ಅಶ್ವತ್ಥ್, ರೈತ ಕೊಮ್ಮಸಂದ್ರ

 

ಸೋಂಕು ಹರಡದಂತೆ ಪಶುವೈದ್ಯ ಇಲಾಖೆ ಹಾಲು ಉತ್ಪಾದಕರ ಸಹಕಾರ ಸಂಘಗಳ ನೆರವಿನಲ್ಲಿ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಗ್ರಾಮಕ್ಕೆ ವೈದ್ಯರು ಭೇಟಿ ನೀಡಿ ಲಸಿಕೆ ಹಾಕುತ್ತಿದ್ದು, ಮತ್ತಷ್ಟು ಚಿಕಿತ್ಸಾಕ್ರಮ ಚುರುಕಾಗಿ ಕೈಗೊಳ್ಳಲು ಕ್ರಮವಹಿಸಲಾಗುವುದು.

| ಡಾ. ನಾರಾಯಣಸ್ವಾಮಿ, ಪಶುವೈದ್ಯಾಧಿಕಾರಿ, ವಿಜಯಪುರ 

Leave a Reply

Your email address will not be published. Required fields are marked *

Back To Top