Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

ಕಾಲನಿ ಭೇಟಿ, ದಲಿತರ ಮನೆಯಲ್ಲಿ ಭೋಜನ

Monday, 15.05.2017, 3:00 AM       No Comments

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ, ದಲಿತ ನಾಯಕರ ಸೇರ್ಪಡೆ ಹಾಗೂ ವಾಸ್ತವ ಸ್ಥಿತಿ ಅರಿಯಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೇ 18ರಿಂದ ನಿರಂತರ 39 ದಿನ ‘ಜನ ಸಂಪರ್ಕ ಅಭಿಯಾನ’ ನಡೆಸಲಿದ್ದಾರೆ.

ಬಿಜೆಪಿ ಜತೆಗೆ ಅಷ್ಟಾಗಿ ಗುರುತಿಸಿಕೊಂಡಿಲ್ಲದ ದಲಿತ ಮತ್ತು ಹಿಂದುಳಿದ ಸಮುದಾಯದ ನಾಯಕರನ್ನು ಕೇಂದ್ರೀಕರಿಸಿ ನಡೆಯುವ ಯಾತ್ರೆಯಲ್ಲಿ ದಲಿತ ಕಾಲನಿ ಭೇಟಿ, ಅವರ ಮನೆಯಲ್ಲಿ ಯಡಿಯೂರಪ್ಪ ಭೋಜನ ಮಾಡಲಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಾದದೊಂದಿಗೆ ಅಭಿಯಾನ ಆರಂಭಿಸಲಿದ್ದಾರೆ. ಆ ನಂತರ ಚಿತ್ರದುರ್ಗ, ಬಾಗಲಕೋಟೆ, ಗದಗ, ಶಿವಮೊಗ್ಗ, ಹಾಸನ, ಬಳ್ಳಾರಿ ಮೂಲಕ ಸಾಗಿ ಜೂ.27ರಂದು ವಿಜಯಪುರದಲ್ಲಿ ಬೃಹತ್ ಕಾರ್ಯಕ್ರಮದೊಂದಿಗೆ ಅಭಿಯಾನ ಅಂತ್ಯವಾಗಲಿದೆ.

ಬಿಎಸ್​ವೈ ದಲಿತ ಕಾಲನಿ ಪ್ರವೇಶಿಸುತ್ತಿದ್ದಂತೆಯೇ ಡಾ. ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್​ರಾಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಕಾಲನಿಯ ಪ್ರಮುಖರು, ಮಹಿಳೆಯರು, ಯುವಕರ ಜತೆ ರ್ಚಚಿಸಲಿದ್ದಾರೆ. ಸಭೆಗೆ ಸ್ಥಳೀಯ ಒಬಿಸಿ ಹಾಗೂ ಎಸ್​ಸಿ-ಎಸ್​ಟಿ ನಾಯಕರ ಹೆಸರು, ದೂರವಾಣಿ ಸಂಖ್ಯೆ ತರಬೇಕು ಎಂದು ಸೂಚಿಸಲಾಗಿದೆ. ಪ್ರವಾಸದ ವೇಳೆ ಕಡ್ಡಾಯವಾಗಿ ದಲಿತ, ಹಿಂದುಳಿದ ಸಮುದಾಯದ ಕಾರ್ಯಕರ್ತರ ಮನೆಯಲ್ಲೇ ಊಟಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಅಭಿಯಾನವನ್ನು ಈಶ್ವರಪ್ಪ ಅವರೂ ಸೇರಿ ಯಾವುದೇ ನಾಯಕರನ್ನು ಬಿಟ್ಟು ಮಾಡುವುದಿಲ್ಲ ಎಂದು ರಾಜ್ಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರವಾಸದ ವೇಳೆಯ ಕಾರ್ಯಕ್ರಮ

  • ಬೆಳಗ್ಗೆ 9ರಿಂದ 10 ಗಂಟೆವರೆಗೆ ದಲಿತ ಕಾಲನಿಗೆ ಭೇಟಿ
  • 10ರಿಂದ ಮಧ್ಯಾಹ್ನ 1ರವರೆಗೆ ಬರ ಪರಿಸ್ಥಿತಿ ಅವಲೋಕನ
  • ಬರವಿಲ್ಲದ ಪ್ರದೇಶಗಳಲ್ಲಿ ಅಲ್ಲಿನ ಪ್ರಮುಖ ಸಮಸ್ಯೆ ಕುರಿತು ಚರ್ಚೆ, ವೀಕ್ಷಣೆ
  • ಮಧ್ಯಾಹ್ನ 3ರಿಂದ 5ರವರೆಗೆ ತಾಲೂಕು ಕೇಂದ್ರದಲ್ಲಿ ಸುಮಾರು 10 ಸಾವಿರ ಜನರ ಸಮಾವೇಶ
  • ರಾತ್ರಿ 8.30ರವರೆಗೆ ಚುನಾವಣೆ ಬಗ್ಗೆ ಸ್ಥಳೀಯ ಕಾರ್ಯಕರ್ತರು, ಪದಾಧಿಕಾರಿಗಳ ಜತೆ ಚರ್ಚೆ

 

ಯಡಿಯೂರಪ್ಪ ನೇತೃತ್ವದಲ್ಲಿ ಮೇ 18ರಿಂದ ಬರಪೀಡಿತ ಪ್ರದೇಶದಲ್ಲಿ ಪ್ರವಾಸ ಮಾಡಿ ರೈತರಿಗೆ ಧೈರ್ಯ ತುಂಬುತ್ತೇವೆ. ಬಿಎಸ್​ವೈ ಅವರೊಂದಿಗೆ ಬಿಜೆಪಿಯ ಎಲ್ಲ ನಾಯಕರು ಭಾಗವಹಿಸುತ್ತೇವೆ.

| ಕೆ.ಎಸ್.ಈಶ್ವರಪ್ಪ,  ಮೇಲ್ಮನೆ ಪ್ರತಿಪಕ್ಷ ನಾಯಕ

Leave a Reply

Your email address will not be published. Required fields are marked *

3 × 3 =

Back To Top