Thursday, 19th July 2018  

Vijayavani

ಮೂಲ ಮಠದಲ್ಲಿ ಶ್ರೀಗಳ ಪಾರ್ಥೀವ ಶರೀರ - ಪೂಜಾ ಸಾಮಗ್ರಿ ಜತೆಗಿಟ್ಟು ಸಂಸ್ಕಾರ ಕಾರ್ಯ        ಶೀರೂರು ಶ್ರೀಗಳು ಇನ್ನು ನೆನಪು ಮಾತ್ರ - ಕನಕನ ಕಿಂಡಿ ಮೂಲಕ ಕೃಷ್ಣನ ಕೊನೆಯ ದರ್ಶನ - ಆರತಿ ಸೇವೆ ಸಲ್ಲಿಸಿದ ಸ್ವಾಮೀಜಿ        ಶೀರೂರು ಶ್ರೀ ಸಾವಿನ ಸುತ್ತ ಅನುಮಾನದ ಹುತ್ತ - ಸ್ವಾಮೀಜಿಗಳಿಗೆ ವಿಷಪ್ರಾಸನದ ಶಂಕೆ - ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲು        ಸಾಮಾಜಿಕ ಹೋರಾಟಕ್ಕೂ ಶೀರೂರು ಶ್ರೀಗಳು ಸೈ - ವಾದ್ಯಪರಿಕರಗಳನ್ನು ನುಡಿಸುವುರಲ್ಲೂ ಎತ್ತಿದ ಕೈ        ಶೀರೂರು ಶ್ರೀ ಮಠಾಧಿಶರೇ ಅಲ್ಲ - ಅದಕ್ಕೇ ಅವರಿಗೆ ಪಟ್ಟದೇವರು ಕೊಡಲಿಲ್ಲ - ಪೇಜಾವರ ಶ್ರೀಗಳಿಂದ ಸ್ಫೋಟಕ ಹೇಳಿಕೆ        ಮಹಾ ಮಳೆಗೆ ಮೈದುಂಬಿದ ಕೃಷ್ಣೆ - ಚಿಕ್ಕೋಡಿಯಲ್ಲಿ ಹಲವು ಸೇತುವ ಜಲಾವೃತ - ಇತ್ತ ಕೊಡಗಿನಲ್ಲಿ ಕಾವೇರಿಗೆ ಎಚ್​ಡಿಕೆ ಬಾಗಿನ       
Breaking News

ಕಾಪರ್ ಕೇಬಲ್ ಕಳ್ಳರ ಬಂಧನ

Tuesday, 10.07.2018, 10:36 PM       No Comments

ಮುಳಗುಂದ: ಸಮೀಪದ ಶಿರುಂದ ಗ್ರಾಮದ ಸರಹದ್ದಿನಲ್ಲಿರುವ ಸುಜಲಾನ್ ಪವನ ವಿದ್ಯುತ್ ಸ್ಥಾವರ ಹಾಗೂ ಭೋರುಕಾ ಪವರ್ ಕಾರ್ಪೇರೇಷನ್ ಲಿ. ಕಂಪನಿಯ ವಿದ್ಯುತ್ ಸ್ಥಾವರಗಳಿಂದ ಕದ್ದಿದ್ದ ಅಂದಾಜು 31,60,940 ರೂ. ಮೌಲ್ಯದ ಕಾಪರ್ ಕೇಬಲ್ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದ ಶಿವಪ್ಪ ಬಾಲಪ್ಪ ಚವ್ಹಾಣ, ಮಂಜುನಾಥ ಕೃಷ್ಣಪ್ಪ ನಾಯಕ, ವೆಂಕಟೇಶ ಚನ್ನಪ್ಪ ಪವಾರ ಹಾಗೂ ಡೋಣಿ ತಾಂಡಾದ ವೆಂಕಟೇಶ ವಿಠ್ಠಲ ಲಮಾಣಿ ಬಂಧಿತ ಆರೋಪಿಗಳು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ ಬಾಬು ಮಾರ್ಗದರ್ಶನದಲ್ಲಿ ಡಿಎಸ್​ಪಿ ವಿ.ಟಿ. ವಿಜಯಕುಮಾರ, ಗದಗ ಗ್ರಾಮೀಣ ಸಿಪಿಐ ಸಿದ್ದಲಿಂಗಪ್ಪಗೌಡ ಪಾಟೀಲ, ಮುಳಗುಂದ ಠಾಣೆಯ ಪಿಎಸ್​ಐ ಚಂದ್ರಪ್ಪ ಈಟಿ, ಸಿಬ್ಬಂದಿ ಹನುಮಂತ ಕಲ್ಲಣ್ಣವರ, ಲಕ್ಷ್ಮಣ ಪೂಜಾರ, ವಿಶ್ವನಾಥ ಬಡಿಗೇರ, ನಿಸ್ಸಾರಹಮ್ಮದ್ ಮೌಲ್ವಿ, ಬಸವರಾಜ ಗುಡ್ಲಾನೂರ, ಕರಿಯಪ್ಪ ಸಂಕದಾಳ, ಗುರುರಾಜ ಬೂದಿಹಾಳ, ಸಂತೋಷ ಸಾತಪೂತೆ, ಐ.ಕೆ. ತಾವರಗೇರಿ, ಅಂದಪ್ಪ ಮಾಳವಾಡ, ಎಂ.ಜಿ, ಮಲ್ಲಿಗವಾಡ, ಎಸ್.ಪಿ. ನವಲೇಕರ, ಸೈಯ್ಯದ್ ಕಲಾದಗಿ, ನಿಯಾಜ್ ದಳವಾಯಿ ಕಾರ್ಯಾಚರಣೆ ನಡೆಸಿದ್ದರು.

Leave a Reply

Your email address will not be published. Required fields are marked *

Back To Top