Thursday, 24th August 2017  

Vijayavani

1. ಹಾವೇರಿಯಲ್ಲಿ ಇಂಜೆಕ್ಷನ್‌ ಬಳಿಕ ರೋಗಿ ಸಾವು- ಆಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ- ಸಾವಿನ ಇಂಜೆಕ್ಷನ್‌ ಅಂತಾ ಆರೋಪ 2. ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣ- ಗಣಪತಿ ಆತ್ಮಹತ್ಯೆ ವೇಳೆ ನನಗೆ ಯಾವುದೇ ಕರೆ ಬಂದಿಲ್ಲ- ಕಾಲ್‌ಡಿಟೆಲ್ಸ್‌ ಡಿಲೀಟ್‌ ಬಗ್ಗೆ ಶಾಸಕ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯೆ 3. ಕೋಲಾರದಲ್ಲಿ ಮಕ್ಕಳ ಸಾವು ಪ್ರಕರಣ- ಆಸ್ಪತ್ರೆಗೆ ಬಿಜೆಪಿ ಸತ್ಯ ಶೋಧನ ಸಮಿತಿ ಭೇಟಿ- ಜಿಲ್ಲೆಗೆ ಇದು ಶೋಭೆಯಲ್ಲ ಎಂದ ಮಾಜಿ ಸಚಿವ ಸುರೇಶ್​ ಕುಮಾರ್​​​ 4. ಮತ್ತೆ ಒಂದಾದ ಸುದೀಪ್​​​​ ದಂಪತಿ- ಪ್ರಿಯಾ-ಸುದೀಪ್​​​​​​​​​​​​​​​​​​​​​ಗೆ ಕಲಾವಿದರ ಶುಭಾಶಯ- ನೂರ್ಕಾಲ ಬಾಳಲಿ ಎಂದ ಜಗ್ಗೇಶ್​​​​​​​ 5. ಬಿಡುಗಡೆಯಾಯ್ತು 200ರ ಹೊಸ ನೋಟು- ನಾಳೆಯಿಂದಲೇ ಬ್ಯಾಂಕ್​​​​​​​​​​​​​​​​​​​​​​​​​​​​​​​​​​ಗಳಿಗೆ ಪೂರೈಕೆ- ಆರ್​​​​​​​ಬಿಐನಿಂದ ಪ್ರಕಟಣೆ
Breaking News :

ಕಾನ್​ನಲ್ಲಿ ಬಾಲಿವುಡ್ ಬೆಡಗಿಯರು

Saturday, 20.05.2017, 3:00 AM       No Comments

ವಿಶ್ವಪ್ರಸಿದ್ಧ ಕಾನ್ ಚಿತ್ರೋತ್ಸವದಲ್ಲಿ ಹತ್ತಾರು ದೇಶಗಳ ತಾರೆಯರು ಮಿಂಚುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅಲ್ಲಿನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿರುವ ದೀಪಿಕಾ ಪಡುಕೋಣೆ ಕೂಡ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ‘ಎಕ್ಸ್​ಎಕ್ಸ್​ಎಕ್ಸ್: ದ ರಿಟರ್ನ್ ಆಫ್ ಕ್ಸಾಂಡರ್ ಕೇಜ್’ ಹಾಲಿವುಡ್ ಚಿತ್ರದಲ್ಲಿ ನಟಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ದೀಪಿಕಾ ಹವಾ ಹೆಚ್ಚಾಗಿತ್ತು. ಅದರ ಬೆನ್ನಲ್ಲೇ ಕಾನ್ ಚಿತ್ರೋತ್ಸವದಲ್ಲೂ ಛಾಯಾಗ್ರಾಹಕರಿಗೆ ಪೋಸ್ ನೀಡುತ್ತ ಮನಸೆಳೆಯುತ್ತಿದ್ದಾರೆ.

ದಿನಕ್ಕೊಂದು ವಿಶೇಷ ಉಡುಗೆ ತೊಟ್ಟು, ಬಿನ್ನಾಣ ಮೆರೆಯುತ್ತಿರುವ ದೀಪಿಕಾಗೆ ಗ್ಲಾಮರ್​ನದ್ದೇ ಚಿಂತೆ. ರೆಡ್ ಕಾರ್ಪೆಟ್ ಹೊರತಾದ ಬಿಡುವಿನ ಸಮಯದಲ್ಲಿ ಯಾವ ಡ್ರೆಸ್ ಹಾಕಿಕೊಳ್ಳಬೇಕು, ಕೇಶವಿನ್ಯಾಸ ಹೇಗಿರಬೇಕು, ಯಾವ ರೀತಿಯ ಮೇಕಪ್​ಗೆ ಮೊರೆ ಹೋಗಬೇಕು, ನೇಲ್ ಪಾಲಿಶ್ ಯಾವ ಬಣ್ಣದ್ದಿರಬೇಕು ಎಂಬಿತ್ಯಾದಿ ಪ್ರಶ್ನೆಗಳೇ ಅವರ ತಲೆಯಲ್ಲಿ ತುಳುಕಾಡುತ್ತಿವೆ. ಹಾಗಾಗಿ, ಆ ಎಲ್ಲ ಕ್ಷಣಗಳ ಫೋಟೋಗಳನ್ನೋ ಒಂದೊಂದಾಗಿ ಕ್ಲಿಕ್ಕಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಮರುದಿನ ತಾವು ಯಾವ ಕಾಸ್ಟ್ಯೂಮ್ ಧರಿಸಲಿದ್ದೇನೆ ಎಂಬುದನ್ನು ಮುಂಚಿತವಾಗಿಯೇ ಅಭಿಮಾನಿಗಳಿಗೆ ತಿಳಿಸುತ್ತಿದ್ದಾರೆ.

ಇಷ್ಟೆಲ್ಲ ಮಿಂಚುತ್ತಿರುವ ದೀಪಿಕಾಗೆ ಪೈಪೋಟಿ ನೀಡುವಲ್ಲಿ ಐಶ್ವರ್ಯಾ ರೈ ಮತ್ತು ಮಲ್ಲಿಕಾ ಶೆರಾವತ್ ಹಿಂದೆ ಬಿದ್ದಿಲ್ಲ. 2002ರಿಂದಲೇ ಸೌಂದರ್ಯ ವರ್ಧಕ ಕಂಪನಿಯೊಂದರ ರಾಯಭಾರಿಯಾಗಿ ಕಾನ್ ಅಂಗಳಕ್ಕೆ ಕಾಲಿಡುತ್ತ ಬಂದಿರುವ ಐಶ್, ಕಂಪನಿಯ ಟ್ವಿಟರ್ ಖಾತೆ ಮೂಲಕ ಅಭಿಮಾನಿಗಳಿಗೆ

ಅಪ್​ಡೇಟ್ಸ್ ನೀಡುತ್ತಿದ್ದಾರೆ. ಗ್ಲಾಮರ್ ಗತ್ತಿನಲ್ಲಿರುವ ಮಲ್ಲಿಕಾ ಕೂಡ ತಾವೇನೂ ಕಮ್ಮಿ ಇಲ್ಲ ಎಂಬಂತೆ ರೆಡ್​ಕಾರ್ಪೆಟ್​ನಲ್ಲಿ ಬಳುಕುತ್ತ ನಡೆದಿದ್ದಾರೆ. ಮೇ 21 ಮತ್ತು 22ರಂದು ಸೋನಮ್ ಕಪೂರ್ ಸಹ ಈ ಸುಂದರಿಯರಿಗೆ ಸಾಥ್ ನೀಡಲಿದ್ದು, ನಾಲ್ವರಲ್ಲಿ ಯಾರು ಬೆಸ್ಟ್ ಎಂಬುದನ್ನು ತೀರ್ವನಿಸುವುದು ಅಭಿಮಾನಿಗಳಿಗೆ ಬಿಟ್ಟಿದ್ದು. –ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top