Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಕಾಂಬ್ಳಿ ಜೀವದ ಗೆಳೆಯ ಎಂದ ಸಚಿನ್

Sunday, 12.11.2017, 3:02 AM       No Comments

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ವಿನೋದ್ ಕಾಂಬ್ಳಿ ಬಾಲ್ಯದ ಗೆಳೆಯರು ಎಂಬುದು ಎಲ್ಲ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ವಿಷಯ. 1988ರ ಶಾಲಾ ಕ್ರಿಕೆಟ್ ಪಂದ್ಯದಲ್ಲಿ ವಿಶ್ವದಾಖಲೆಯ 664 ರನ್ ಜತೆಯಾಟ ನಡೆಸುವ ಮೂಲಕವೇ ಇಬ್ಬರೂ ಕ್ರಿಕೆಟ್ ಜಗತ್ತಿಗೆ ಜತೆಯಾಗಿ ಪರಿಚಯಿಸಲ್ಪಟ್ಟಿದ್ದರು. ಆದರೆ ಇವರಿಬ್ಬರ ಗೆಳೆತನದಲ್ಲಿ ಕಳೆದ ಕೆಲ ವರ್ಷಗಳಿಂದ ಬಿರುಕು ಮೂಡಿತ್ತು. ಇದು ಎಷ್ಟರ ಮಟ್ಟಿಗೆ ಎಂದರೆ, 2013ರ ‘ವಿದಾಯ ಭಾಷಣ’ದಲ್ಲಿ ಸಚಿನ್ ತಮ್ಮ ಆಪ್ತಮಿತ್ರನ ಹೆಸರನ್ನೇ ಎತ್ತಿರಲಿಲ್ಲ. ಇವರಿಬ್ಬರು ಮತ್ತೆ ಒಂದಾಗಿರುವ ಬಗ್ಗೆ ಇತ್ತೀಚೆಗೆ ಸುದ್ದಿ ಹರಡಿತ್ತು. ಕಾಂಬ್ಳಿಯನ್ನು ‘ಜೀವದ ಗೆಳೆಯ’ ಎಂದು ಕರೆಯುವ ಮೂಲಕ ಸಚಿನ್ ಇದೀಗ ಆಪ್ತಮಿತ್ರರು ಒಂದಾಗಿರುವುದನ್ನು ದೃಢಪಡಿಸಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಚಿನ್, ಕಾಂಬ್ಳಿ ಅಲ್ಲದೆ ಅಜಿತ್ ಅಗರ್ಕರ್, ಅಮೊಲ್ ಮುಜುಮ್ದಾರ್ ಮತ್ತಿತರ ಗೆಳೆಯರು ‘ಸೆಲ್ಪಿ’ ಕ್ಲಿಕ್ಕಿಸಿಕೊಂಡಿದ್ದರು. ಇದು ಸಚಿನ್-ಕಾಂಬ್ಳಿ ಜತೆಯಾಗಿ ಪೋಸ್ ನೀಡಿದ ಮೊಟ್ಟಮೊದಲ ‘ಸೆಲ್ಪಿ’ ಎಂದೂ ವೈರಲ್ ಆಗಿತ್ತು. ಶುಕ್ರವಾರ ಸಚಿನ್ ಕೂಡ ಈ ಚಿತ್ರವನ್ನು ಇನ್​ಸ್ಟಾಗ್ರಾಮ್ಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ‘ಕ್ರಿಕೆಟ್ ನನಗೆ ನೀಡಿರುವ ಅಮೋಘ ಕೊಡುಗೆಯಲ್ಲಿ ಈ ಜೀವದ ಗೆಳೆಯರೂ ಸೇರಿದ್ದಾರೆ. ಇವರು ಜತೆಗಿದ್ದರೆ ಮೈದಾನದೊಳಗೆ ಮತ್ತು ಹೊರಗೆ ನೀರಸ ಕ್ಷಣಗಳೇ ಇರುವುದಿಲ್ಲ’ ಎಂದು ಬರೆದಿದ್ದಾರೆ.

ಕೆಲ ವರ್ಷಗಳ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ಕಾಂಬ್ಳಿ, ತಮ್ಮ ಕಷ್ಟದ ದಿನಗಳಲ್ಲಿ ಸಚಿನ್ ಸಹಾಯ ಮಾಡಿರಲಿಲ್ಲ ಎಂದು ಹೇಳಿಕೆ ನೀಡಿದ ಬಳಿಕ ಇವರಿಬ್ಬರ ನಡುವಿನ ಸಂಬಂಧ ಹಳಸಿತ್ತು. ಸಚಿನ್ ಜತೆ ರಾಜಿಯಾದ ನಂತರ 45 ವರ್ಷದ ಕಾಂಬ್ಳಿ ಇದೀಗ ಐಪಿಎಲ್ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸುವ ಆಸಕ್ತಿಯನ್ನೂ ವ್ಯಕ್ತಪಡಿಸಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top