Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಕಾಂಗ್ರೆಸ್ ಸಂಘಟನೆಗೆ ನಾಲ್ಕು ಅಂಶದ ಸೂತ್ರ

Thursday, 20.04.2017, 3:00 AM       No Comments

ಬೆಂಗಳೂರು: ರಾಜ್ಯದಲ್ಲಿ ಪಕ್ಷವನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸುವ ಸಲುವಾಗಿ ನಾಲ್ಕು ಅಂಶದ ಸೂತ್ರವನ್ನು ಕಾಂಗ್ರೆಸ್ ಮುಖಂಡರು ಸಿದ್ಧಗೊಳಿಸಿದ್ದಾರೆ. ಕಾಂಗ್ರೆಸ್ ವತಿಯಿಂದ ಈಗಾಗಲೇ ನಡೆಸಿರುವ ಎರಡು ಸಮೀಕ್ಷೆಗಳನ್ನು ಆಧರಿಸಿ ನಾಲ್ಕು ಅಂಶದ ಸೂತ್ರವನ್ನು ಸಿದ್ಧಪಡಿಸಿದ್ದು, ಅದರ ಆಧಾರದಲ್ಲಿಯೇ ಪಕ್ಷವನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಉದ್ದೇಶವಾಗಿದೆ. ಚುನಾವಣೆಗೆ ಇನ್ನೂ 50 ವಾರ ಇದೆ. ಅಷ್ಟರೊಳಗೆ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಪ್ರಮುಖ ಅಜೆಂಡವಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕೈ ನಾಯಕರು ರೂಪಿಸಿರುವ ಸೂತ್ರಗಳು

25-30 ಶಾಸಕರು ಗೆಲ್ಲೋದು ಕಷ್ಟ: ಪಕ್ಷ ನಡೆಸಿರುವ ಎರಡು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಆದರೆ, ಹಾಲಿ ಶಾಸಕರ ಪೈಕಿ 25 ರಿಂದ 30 ಜನ ಸೋಲುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂಥ ಕ್ಷೇತ್ರಗಳಿಗೆ ಒಂದು ವರ್ಷಗಳ ಕಾಲ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸರ್ಕಾರದಿಂದ ವಿಶೇಷ ಸವಲತ್ತು ನೀಡುವುದು ಪ್ರಮುಖವಾಗಿದೆ. ಪಕ್ಷದ ವತಿಯಿಂದಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಒಂದು ವೇಳೆ ಆ ನಂತರವೂ ಶಾಸಕರು ಸೋಲುತ್ತಾರೆ ಎಂದಾದರೆ ಪರ್ಯಾಯ ಅಭ್ಯರ್ಥಿ ಹುಡುಕುವುದು ಪ್ರಮುಖ ಸೂತ್ರವಾಗಿದೆ.

ಸೋತ ಕ್ಷೇತ್ರಗಳ ಕಡೆ ಗಮನ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 100 ಕ್ಷೇತ್ರಗಳಲ್ಲಿ ಸೋಲು ಅನುಭವಿಸಿತ್ತು. ಇದರಲ್ಲಿ ಕನಿಷ್ಠ 35 ರಿಂದ 40 ಸ್ಥಾನ ಪಡೆಯುವುದಕ್ಕೆ ಪ್ರಯತ್ನ ನಡೆಸಬೇಕೆಂದು ನಿರ್ಧರಿಸಲಾಗಿದೆ. ಪಕ್ಷ ಕಡಿಮೆ ಅಂತರದಲ್ಲಿ ಸೋತ ಹಾಗೂ ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರಗಳನ್ನು ಗುರುತಿಸಲಾಗುತ್ತಿದೆ. ಅಂಥ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಮೊದಲೇ ಗುರುತಿಸುವುದು, ಸರ್ಕಾರದ ಯೋಜನೆಗಳ ಪ್ರಚಾರದಲ್ಲಿ ಈ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತದೆ.

ಅಹಿಂದ ಮತಗಳು ಭದ್ರ: ಕಾಂಗ್ರೆಸ್ ಪಾಲಿಗೆ ಜೀವಾಳವಾಗಿರುವ ಅಹಿಂದ ಮತಗಳು ಚದುರದಂತೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಬಿಜೆಪಿ ಹಾಗೂ ಜೆಡಿಎಸ್ ಸಹ ಇದೇ ಮತಗಳ ಮೇಲೆ ಕಣ್ಣಿಟ್ಟಿವೆ. ಬೇರೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ಈ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿವೆ. ಆದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್​ನೊಂದಿಗೆ ಇರುವ ಮತಗಳನ್ನು ಚದುರದಂತೆ ನೋಡಿಕೊಳ್ಳುವ ಉದ್ದೇಶವಿದೆ.

ಮೇಲ್ವರ್ಗಗಳತ್ತ ಚಿತ್ತ: ರಾಜ್ಯದಲ್ಲಿರುವ ಮೇಲ್ವರ್ಗಗಳು ಕಾಂಗ್ರೆಸ್ ವಿರುದ್ಧ ಎಂಬ ಭಾವನೆ ಇದೆ. ಒಂದು ವರ್ಷದಲ್ಲಿ ಅಂಥ ಭಾವನೆ ತೊಡೆದು ಹಾಕುವುದರ ಜತೆಗೆ ಆದಷ್ಟು ಪ್ರಮಾಣದಲ್ಲಿ ಈ ವರ್ಗದ ಮುಖಂಡರ ಮೂಲಕ ಮತ ಸೆಳೆಯಲು ತಂತ್ರಗಳನ್ನು ರೂಪಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

Back To Top