Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಕಳ್ಳಿ ಸಿಕ್ಕಿಬಿದ್ದಿದ್ದು ಹೀಗೆ!

Tuesday, 14.08.2018, 3:00 AM       No Comments

ಕಳ್ಳರನ್ನು ಹಿಡಿಯುವ, ದುರುಳರನ್ನು ಸದೆಬಡಿಯುವ ಕಸರತ್ತಿನ ಒಂದು ಅಂಗವಾಗಿ ಪೊಲೀಸರು ‘ಮಾಹಿತಿದಾರರು’ (informants) ಎನ್ನಲಾಗುವ ವಿಶಿಷ್ಟ ವರ್ಗದ ಜನರನ್ನು ನೆಚ್ಚುವುದುಂಟು. ಸಮಾಜವಿರೋಧಿ ಕೃತ್ಯಗಳನ್ನು ತಹಬದಿಗೆ ತರುವಲ್ಲಿ ತಮ್ಮದೇ ಆದ ಕೊಡುಗೆ ನೀಡುವ ಇವರೊಂಥರಾ ‘ಎಲೆ ಮರೆಯ ಕಾಯಿಗಳು’ ಇದ್ದ ಹಾಗೆ. ಇಂಥ ವಿಶಿಷ್ಟ ಮಾಹಿತಿದಾರರ ನೆರವಿನಿಂದ ಪೊಲೀಸರು ತಮ್ಮ ಕೆಲಸ ಸಾಧಿಸಿದ ಸುದ್ದಿ ಫ್ಲೋರಿಡಾದಿಂದ ವರದಿಯಾಗಿದೆ.

ಕಾರೊಂದರಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಕಂಡ ಅಲ್ಲಿನ ಪೊಲೀಸರಿಗೆ ‘ಇವರು ಖಂಡಿತ ಕಳ್ಳರೇ, ಇದು ಕದ್ದ ಕಾರೇ’ ಎಂಬುದು ಖಾತ್ರಿಯಾಗಿ ಬೆನ್ನತ್ತಿದರು. ವೇಗವಾಗಿ ಸಾಗತೊಡಗಿದ ಕಾರು ದುರದೃಷ್ಟವಶಾತ್ ಕಂದಕವೊಂದರಲ್ಲಿ ಸಿಲುಕಿದಾಗ, ಅಷ್ಟೇ ವೇಗವಾಗಿ ಅನುಸರಿಸಿಕೊಂಡು ಬಂದ ಪೊಲೀಸರು, ಒಬ್ಬ ಕಳ್ಳನನ್ನು ಹಿಡಿದರು. ಆದರೆ ಜತೆಗಿದ್ದ ಮಹಿಳೆ ತಪ್ಪಿಸಿಕೊಂಡು ಅವರಿಗೆ ಸಿಗದಂತೆ ಜೋರಾಗಿ ಓಡಿಬಿಟ್ಟಳು. ಆದರೆ ಕೆಲ ಹೊತ್ತಿನ ನಂತರ, ಆಕೆಯನ್ನು ಹಿಡಿದೇಬಿಟ್ಟರು. ಅದು ಹೇಗೆ ಗೊತ್ತೇ? ಇಲಾಖೆಯ ಮತ್ತಾವುದೋ ನಿಯೋಜಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಹೆಲಿಕಾಪ್ಟರ್ ಒಂದು ಹಾರಾಟದಲ್ಲಿರುವಾಗ ಚಿತ್ರಿಸಿದ ಭೂದೃಶ್ಯಗಳಲ್ಲಿ ಬರೋಬ್ಬರಿ 12 ಹಸುಗಳ ಹಿಂಡೊಂದು ಮಹಿಳೆಯೊಬ್ಬಳನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ದಾಖಲಾಗಿತ್ತು. ತಾವು ಮೇಯುತ್ತಿದ್ದ ಹುಲ್ಲುಗಾವಲಿಗೆ ಅತಿಕ್ರಮ ಪ್ರವೇಶ ಮಾಡಿದ್ದಕ್ಕೆ ಹಸುಗಳು ಆ ಕಳ್ಳಿಗೆ ಹೀಗೆ ಮ್ಯಾರಥಾನ್ ಮಾಡಿಸಿ ಕೊಟ್ಟಿಗೆಗೆ ದೂಡಿದ್ದವು. ಈ ಸುಳಿವನ್ನು ಅನುಸರಿಸಿ ಅಲ್ಲಿಗೆ ಹೋದ ಪೊಲೀಸರಿಗೆ ಮಿಕ ಸಿಕ್ಕಿತ್ತು. ಕೊಟ್ಟಿಗೆಯಲ್ಲಿ ದಣಿವಾರಿಸಿಕೊಳ್ಳುತ್ತಿದ್ದ ಅವಳಿಗೆ ‘ಬಳೆ ತೊಡಿಸುವ ಶಾಸ್ತ್ರ’ ಮಾಡಿ ಠಾಣೆಗೆ ಕರೆತಂದರು!

Leave a Reply

Your email address will not be published. Required fields are marked *

Back To Top