Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಕಳ್ಳತನ ತಡೆದ ಶಾಸ್ತ್ರಜ್ಞಾನ

Wednesday, 18.10.2017, 3:00 AM       No Comments

| ಗಂಗಾವತಿ ಪ್ರಾಣೇಶ್​

ಭೋಜರಾಜನ ಪಟ್ಟಣದಲ್ಲಿ ಒಬ್ಬ ಶಾಸ್ತ್ರ ಪಂಡಿತ ಇದ್ದ. ಬಹಳ ಬಡತನ ಕಾಡುತಿತ್ತು. ಅರಮನೆಯಲ್ಲೇ ಕಳ್ಳತನ ಮಾಡಬೇಕೆಂದು ತೀರ್ವನಿಸಿದ. ರಾತ್ರಿ ಯಾರಿಗೂ ತಿಳಿಯದಂತೆ ಒಳ ಪ್ರವೇಶಿಸಿದ. ಸ್ವರ್ಣ, ರತ್ನ ಮೊದಲಾದ ಅಮೂಲ್ಯ ವಸ್ತುಗಳು ಕೈಗೆ ಸಿಕ್ಕವು. ಕದಿಯಲು ಮುಂದಾದ. ಆತನೊಳಗಿದ್ದ ಶಾಸ್ತ್ರ ಜ್ಞಾನ ಜಾಗೃತವಾಯಿತು. ಬಂಗಾರ ಕದ್ದವ ನರಕಕ್ಕೆ ಹೋಗುತ್ತಾನೆ. ಇದು ಪಂಚ ಮಹಾಪಾತಕ ಎಂದು ಜ್ಞಾನ ಎಚ್ಚರಿಕೆ ಕೊಟ್ಟಿತು. ರಾತ್ರಿ ಕಳೆಯುವವರೆಗೆ ಸುಮ್ಮನೆ ಕುಳಿತ. ಸೇವಕರೆಲ್ಲ ಎಚ್ಚರಗೊಂಡರು. ಪಂಡಿತ ಭಯದಿಂದ ಭೋಜ ರಾಜನ ಮಂಚದ ಕೆಳಗೆ ಸೇರಿಬಿಟ್ಟ. ಮಹಾರಾಜ ಎಚ್ಚರಗೊಂಡ. ರಾಣಿಯರು ಮತ್ತು ಸೇವಕಿಯರು ರಾಜನ ಮಂಚದ ಸುತ್ತ ಸೇವೆಗಾಗಿ ನಿಂತರು. ಕೆಳಗಿದ್ದ ಪಂಡಿತನಿಂದ ಒಂದು ಶ್ಲೋಕ ಹೊಮ್ಮಿತು. ‘ಚೇತೋಹಾರಿ ಯುವತಯಃ ಸುಹೃದೋನು …. ಎಂದರೆ ‘ಕಣ್ಮುಚ್ಜಿದ ಬಳಿಕ ಈ ವೈಭವಗಳು ಯಾವುದೂ ಇರುವುದಿಲ್ಲ‘ ಮಹಾರಾಜ ಬೆರಗಾದ. ಮಂಚದ ಕೆಳಗಿನಿಂದ ಪಂಡಿತ ಈಗ ಹೊರ ಬರಲೇಬೇಕಾಯಿತು. ಇದೇನು ಪಂಡಿತರೇ ಇಲ್ಲಿ ಅಡಗಿದ್ದೀರಿ.. ರಾಜ ಬೆರಗಿನಿಂದ ವಿಚಾರಿಸಿದ. ಪಂಡಿತ ನಿಜ ಹೇಳಿದ. ಕಳ್ಳತನ ಮಾಡಲು ಶಾಸ್ತ್ರಜ್ಞಾನ ನನ್ನನ್ನು ತಡೆಯಿತು ಎಂದ. ಭಯದಿಂದ ಅಡಗಿ ಕುಳಿತಾಗಲೂ ಉತ್ತಮ ಶ್ಲೋಕದಿಂದ ನನ್ನ ಕಣ್ಣು ತೆರೆಸಿದ್ದೀರಿ ಎಂದು ರಾಜ ಮೆಚ್ಚುಗೆ ಸೂಚಿಸಿದ. ಪಂಡಿತನ ಪ್ರಾಮಾಣಿಕತೆ ಮೆಚ್ಚಿದ ರಾಜ ಅವನ ಬಡತನ ನಿವಾರಿಸಲು ಧನಕನಕ ನೀಡಿ ಸತ್ಕರಿಸಿದ.

Leave a Reply

Your email address will not be published. Required fields are marked *

Back To Top