Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ಕಳಂಕಿತ ಜನಪ್ರತಿನಿಧಿಗಳ ಸ್ಪರ್ಧೆಗೆ ಆಜೀವ ನಿಷೇಧ

Tuesday, 21.03.2017, 7:35 AM       No Comments

ನವದೆಹಲಿ: ಕಳಂಕಿತ ಜನಪ್ರತಿನಿಧಿಗಳನ್ನು ಶಾಶ್ವತವಾಗಿ ಚುನಾವಣೆ ಸ್ಪರ್ಧೆಯಿಂದ ನಿಷೇಧಿ ಸಬೇಕೆಂಬ ದಶಕಗಳ ಹಿಂದಿನ ವಾದಕ್ಕೆ ಮರುಜೀವ ಸಿಕ್ಕಿದೆ. ಜನಪ್ರತಿನಿಧಿಗಳ ವಿರುದ್ಧದ ಗಂಭೀರ ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾದಲ್ಲಿ ಅವರಿಗೆ ಜೀವನ ಪರ್ಯಂತ ಚುನಾವಣೆ ನಿಷೇಧ ಹೇರಬೇಕೆಂದು ಕೋರಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದೆ.

‘ಕಳಂಕಿತ ಜನಪ್ರತಿನಿಧಿಗಳನ್ನು ಚುನಾವಣೆಯಿಂದ ದೂರವಿಡುವ ಪ್ರಸ್ತಾವನೆಗೆ ನಮ್ಮ ಸಹಮತವಿದೆ. ಅಪರಾಧ ಸಾಬೀತಾಗುವ ಜನಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಲು ಆಜೀವ ನಿಷೇಧ ಹೇರಬೇಕು’ ಎಂದು ಆಯೋಗ ಪ್ರಮಾಣಪತ್ರದಲ್ಲಿ ಕೋರಿದೆ. ಜತೆಗೆ ಚುನಾವಣಾ ಅಕ್ರಮ ಸಂಬಂಧಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕೆಂದೂ ಆಯೋಗ ನ್ಯಾಯಾಲಯವನ್ನು ಕೋರಿಕೊಂಡಿದೆ.

ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು, ಕಳಂಕಿತ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಈ ಪ್ರಮಾಣಪತ್ರ ಸಲ್ಲಿಸಿದೆ. ಸದ್ಯ ಅಪರಾಧ ಸಾಬೀತಾಗುವ ಅಭ್ಯರ್ಥಿಗೆ ಆರು ವರ್ಷಗಳ ಕಾಲ ಚುನಾವಣಾ ಸ್ಪರ್ಧೆಯಿಂದ ನಿಷೇಧ ಹೇರಲಾಗುತ್ತದೆ.

ಜಾಮೀನು ಪಡೆದರೂ ನಿಷೇಧ ಅನ್ವಯ: ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4)ರ ಅನುಸಾರ, ಶಿಕ್ಷೆಗೊಳಗಾದ ಜನಪ್ರತಿನಿಧಿಗಳು ಮೇಲ್ಮನವಿ ಸಲ್ಲಿಸಲು ಅವಕಾಶವಿರುವ ಮೂರು ತಿಂಗಳ ಅವಧಿಯವರೆಗೆ ತೀರ್ಪನ್ನು ತಡೆಹಿಡಿಯುವಂತೆ ನ್ಯಾಯಾಲಯವನ್ನು ಕೋರಿದಲ್ಲಿ ಇಲ್ಲವೇ, ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದಲ್ಲಿ ಅದು ಇತ್ಯರ್ಥವಾಗುವವರೆಗೆ ಈ ನಿಷೇಧ ಅನ್ವಯವಾಗದು ಎಂಬ ನಿಯಮ ಜಾರಿಯಲ್ಲಿತ್ತು. 2013ರಲ್ಲಿ ಸುಪ್ರೀಂಕೋರ್ಟ್ ಈ ಸೆಕ್ಷನ್ ಅನ್ನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈಗ ಜಾಮೀನು ಪಡೆದರೂ ಅಪರಾಧಿಗಳಿಗೆ ನಿಷೇಧ ಅನ್ವಯವಾಗುತ್ತದೆ.-ಏಜೆನ್ಸೀಸ್

ವಿಸõತ ಪೀಠಕ್ಕೆ ಅರ್ಜಿ

ಕಳಂಕಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸದಂತೆ ಕೋರಿ ನಿವೃತ್ತ ಮಾಜಿ ಮುಖ್ಯ ಚುನಾವಣಾ ಆಯುಕ್ತ ಜೆ.ಎಂ.ಲಿಂಗ್ಡೋ ಹಾಗೂ ಸ್ವಯಂ ಸೇವಾ ಸಂಘಟನೆಗಳವರು ಕೂಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ‘ಇದು ಗಂಭೀರ ವಿಷಯವಾಗಿದ್ದು, ಈ ಕುರಿತು ವಿಸõತ ಚರ್ಚೆಯಾಗಬೇಕಿದೆ. ಇದರ ದುರುಪಯೋಗವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಮುಂದಿನ ಚುನಾವಣೆಯೊಳಗೆ ಜನರು ಕಾಯ್ದೆಯನ್ನು ಸರಿಯಾಗಿ ಅರಿಯುವಂತಾಗಬೇಕು’ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾ.ಜೆ.ಎಸ್.ಖೆಹರ್ ನೇತೃತ್ವದ ತ್ರಿಸದಸ್ಯ ಪೀಠ, ಅರ್ಜಿಯ ವಿಚಾರಣೆಯನ್ನು ವಿಸõತ ಪೀಠಕ್ಕೆ ಶಿಫಾರಸು ಮಾಡಿದೆ. ಈ ಪ್ರಕರಣದ ವಿಚಾರಣೆಗಾಗಿ ಐವರು ನ್ಯಾಯಮೂರ್ತಿಗಳ ಪೀಠ ರಚನೆಯಾಗಬೇಕಿದೆ.

ಲಾಲು, ಶಶಿಕಲಾಗೆ ನಿಷೇಧ

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮೇವು ಹಗರಣದ ಆರೋಪ ಸಾಬೀತಾದ ಬಳಿಕ 2013ರಲ್ಲಿ ಐದು ವರ್ಷಗಳ ಶಿಕ್ಷೆಗೆ ಗುರಿಯಾಗಿ 6 ವರ್ಷ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದರು. 2018ಕ್ಕೆ ಅವರ ಶಿಕ್ಷೆ ಅವಧಿ ಪೂರ್ಣಗೊಂಡರೂ ಬಳಿಕ 6 ವರ್ಷ (2024) ಚುನಾವಣೆ ಸ್ಪರ್ಧೆ ನಿರ್ಬಂಧ ಮುಂದುವರಿಯಲಿದೆ. ಇತ್ತೀಚೆಗೆ ತಮಿಳುನಾಡಿನ ಎಐಎಡಿಂಎಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿ, ಮುಖ್ಯಮಂತ್ರಿ ಪಟ್ಟವೇರಲು ತಯಾರಾಗಿದ್ದ ವಿ.ಕೆ.ಶಶಿಕಲಾ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವುದರಿಂದ, ಶಿಕ್ಷೆ ಮುಗಿಸಿದ ಬಳಿಕ 6 ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಕಾಯ್ದೆ ಏನು ಹೇಳುತ್ತದೆ?

ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 8ರ ಅನುಸಾರ, ಕಾನೂನುಬಾಹಿರ ಹಾಗೂ ಭ್ರಷ್ಟಾಚಾರ, ಉಗ್ರವಾದ ನಿಯಂತ್ರಣ ಕಾಯ್ದೆಯಡಿ, ವರದಕ್ಷಿಣೆ, ಅಧಿಕಾರ ದುರುಪಯೋಗ, ಕಲಬೆರಕೆ ಆಹಾರ ಪೂರೈಕೆ ಹಾಗೂ ಮಾದಕ ದ್ರವ್ಯಗಳ ವಿತರಣೆ ಮತ್ತಿತರ ಗಂಭೀರ ಆರೋಪಗಳಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೊಳಗಾದರೆ ತಕ್ಷಣ ಸದಸ್ಯತ್ವದಿಂದ ಅನರ್ಹರಾಗುತ್ತಾರೆ ಹಾಗೂ ಬಿಡುಗಡೆ ಆದ ನಂತರದ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾರೆ. ಇದು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೊಳಗಾದವರಿಗೆ ಅನ್ವಯವಾಗುತ್ತದೆ. (2 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದಲ್ಲಿ, ತಕ್ಷಣ ಅದೇ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಿ ಜಾಮೀನು ಪಡೆಯುವ ಅವಕಾಶವಿದೆ).

Leave a Reply

Your email address will not be published. Required fields are marked *

Back To Top