Sunday, 21st October 2018  

Vijayavani

ಚಡಚಣ ಸೋದರರ ಹತ್ಯೆ ಪ್ರಕರಣ-ಸಿಪಿಐ ಅಸೋದೆ 10 ದಿನ ಕಸ್ಟಡಿಗೆ-ಸಂಬಂಧಿಕರ ಮೇಲೂ ದೂರು ದಾಖಲು        ಸಿಸಿಬಿಯಿಂದ ಮುತ್ತಪ್ಪ ರೈಗೆ 8 ಗಂಟೆ ಡ್ರಿಲ್​-ಸೂಕ್ತ ದಾಖಲೆಗಳಿಂದ ಮಾಜಿ ಡಾನ್​​ ಬಚಾವ್​-ಇಂದು ಪೊಲೀಸರಿಂದ ಗನ್​​ಮ್ಯಾನ್​​ಗಳ ವಿಚಾರಣೆ        ಆ್ಯಕ್ಷನ್​​​ಕಿಂಗ್​​​ ವಿರುದ್ಧ ಶೃತಿ ಹರಿಹರನ್​ ಮೀಟು ಏಟು-ನಟಿ ವಿರುದ್ಧ ಸರ್ಜಾ ಫ್ಯಾಮಿಲಿ ಟಾಕ್​​ಫೈಟ್​​-ಆರೋಪಕ್ಕೆ ಸ್ಪಷ್ಟನೆ ನೀಡಲು ಇಂದು ಪ್ರೆಸ್​​ಮೀಟ್​​​        ಸಂಸದರ ನಿಧಿ ಹೊಡೆಯಲು ಮೆಗಾ ಪ್ಲಾನ್​-ನಕಲಿ ಲೆಟರ್​​​​​ಹೆಡ್​​​ ಮೂಲಕ ಲಕ್ಷ ಲಕ್ಷ ಗುಳುಂ-26 ಲಕ್ಷ ನುಂಗಿದ ಭೂಪ ಪೊಲೀಸರ ವಶಕ್ಕೆ        ರಂಗೇರಿತು ಉಪಚುನಾವಣೆ ಅಖಾಡ-ಇಂದು ಪಂಚ ಕ್ಷೇತ್ರಗಳಲ್ಲೂ ನಾಯಕರ ಪ್ರಚಾರ-ದೋಸ್ತಿಗೆ ಹುರುಪು ತಂದ ಗುರು-ಶಿಷ್ಯರ ಮಿಲನ        ಮಡಿಕೇರಿ ಸಂತ್ರಸ್ತರಿಗೆ ಮಾದರಿ ಮನೆಗಳ ನಿರ್ಮಾಣ-5 ರಿಂದ 10 ಲಕ್ಷದೊಳಗೆ ಮೂರು ರೀತಿಯ ಮನೆ-ಜನರು ಕೇಳಿದ ಮನೆ ಎರಡು ತಿಂಗಳೊಳಗೆ ರೆಡಿ       
Breaking News

ಕಲ್ಯಾಣಕ್ಕಿಂತ ಮೊದಲೇ ಕುರುಕ್ಷೇತ್ರ ರಿಲೀಸ್?

Friday, 10.08.2018, 3:03 AM       No Comments

ಬೆಂಗಳೂರು: ದರ್ಶನ್, ಅಂಬರೀಷ್, ರವಿಚಂದ್ರನ್, ನಿಖಿಲ್ ಕುಮಾರ್ ಮುಂತಾದವರು ನಟಿಸಿರುವ ‘ಕುರುಕ್ಷೇತ್ರ’ ಚಿತ್ರದ ಬಗ್ಗೆ ಹಬ್ಬಿದ ಗಾಸಿಪ್ ಒಂದೆರಡಲ್ಲ. ‘ಸೀತಾರಾಮ ಕಲ್ಯಾಣ’ ಸಿನಿಮಾ ಮೊದಲು ರಿಲೀಸ್ ಆಗಲಿ ಎಂಬ ಕಾರಣಕ್ಕೆ ನಿಖಿಲ್ ಕುಮಾರ್ ‘ಕುರುಕ್ಷೇತ್ರ’ಕ್ಕೆ ಡಬ್ಬಿಂಗ್ ಮಾಡಲು ಹಿಂದೇಟು ಹಾಕಿದ್ದಾರಂತೆ ಎಂದೆಲ್ಲ ಮಾತುಗಳು ಕೇಳಿಬಂದಿದ್ದವು. ಅದಕ್ಕೀಗ ಸ್ವತಃ ನಿಖಿಲ್ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಸಿನಿಮಾ ಮೊದಲು ರಿಲೀಸ್ ಆಗಲಿ ಎಂಬ ಉದ್ದೇಶ ಖಂಡಿತ ಇಲ್ಲ. ‘ಕುರುಕ್ಷೇತ್ರ’ವೇ ಮೊದಲು ತೆರೆಕಾಣಲಿ ಎಂದು ನಾನು ಅವರಿಗೆ ಹೇಳಿದ್ದೇನೆ. ನಿರ್ದೇಶಕರು ಯಾವಾಗ ಕರೆದರೂ ಓಡಿಹೋಗಿ ಡಬ್ಬಿಂಗ್ ಮಾಡಿಕೊಡುತ್ತೇನೆ. ‘ಸೀತಾರಾಮ ಕಲ್ಯಾಣ’ಕ್ಕೆ ವಿರಾಮ ನೀಡಿಯಾದರೂ ‘ಕುರುಕ್ಷೇತ್ರ’ಕ್ಕೆ ಡಬ್ಬಿಂಗ್ ಮಾಡುತ್ತೇನೆ’ ಎಂದಿದ್ದಾರೆ ನಿಖಿಲ್.

ಇನ್ನು, ಈ ಚಿತ್ರದಲ್ಲಿ ದರ್ಶನ್ ನಿಭಾಯಿಸಿರುವ ದುರ್ಯೋಧನನ ಪಾತ್ರಕ್ಕಿಂತಲೂ ನಿಖಿಲ್ ಮಾಡಿರುವ ಅಭಿಮನ್ಯು ಪಾತ್ರವನ್ನೇ ಹೈಲೈಟ್ ಮಾಡಲಾಗುತ್ತದೆ ಎಂಬ ಸುದ್ದಿ ಕೂಡ ಹಬ್ಬಿತ್ತು. ಆ ಬಗ್ಗೆ ಮಾತನಾಡುವ ನಿಖಿಲ್, ‘ಇದು ‘ಬಾಹುಬಲಿ’ ರೀತಿಯ ಕಾಲ್ಪನಿಕ ಕಥೆಯಲ್ಲ. ಮಹಾಭಾರತದಲ್ಲಿ ಯಾವ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದು ಜನರಿಗೂ ಗೊತ್ತು. ಅದಕ್ಕೆ ತಕ್ಕಂತೆಯೇ ಚಿತ್ರೀಕರಣ ಮಾಡಲಾಗಿದೆಯೇ ಹೊರತು, ಅನಗತ್ಯವಾಗಿ ಯಾರನ್ನೂ ಹೈಲೈಟ್ ಮಾಡಿಲ್ಲ. ನಿರ್ವಪಕರ ತೀರ್ವನದಂತೆ ದ್ವಿತೀಯಾರ್ಧದಲ್ಲಿ ಸಾಹಸ ದೃಶ್ಯಗಳನ್ನು ಹೆಚ್ಚಿಸಲಾಗಿದೆ ಅಷ್ಟೇ. ನಾನು 12 ನಿಮಿಷಗಳ ಅವಧಿಯ ಫೈಟಿಂಗ್ ಸನ್ನಿವೇಶದಲ್ಲಿ ನಟಿಸಿದ್ದೇನೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top