Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಕಲಘಟಗಿಯಲ್ಲಿ ಹೂಡಿಕೆದಾರರಿಗೆ ಕೋಟ್ಯಂತರ ರೂ. ಟೋಪಿ

Tuesday, 08.08.2017, 3:00 AM       No Comments

| ಮೃತ್ಯುಂಜಯ ಕಲ್ಮಠ

ಹುಬ್ಬಳ್ಳಿ: ಬೆಂಗಳೂರು ಮೂಲದ ಸ್ವರ್ಣ ಶಕ್ತಿ ಮಲ್ಟಿ ಪರ್ಪಸ್ ಕೋ ಆಪ್​ರೇಟಿವ್ ಲಿಮಿಟೆಡ್ (ಸ್ವರ್ಣಕೃಷಿ ಫಾಮ್ರ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್) ಎಂಬ ಸಂಸ್ಥೆಯೊಂದು ಧಾರವಾಡ ಜಿಲ್ಲೆಯ ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿ ಟೋಪಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಲಘಟಗಿ ಪಟ್ಟಣದಲ್ಲಿ ಜನರಿಂದ ನೂರಾರು ಕೋಟಿ ರೂ. ಸಂಗ್ರಹಿಸಿ ವಂಚಿಸಿದ ಖಾಸನೀಸ್ ಸೋದರರ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತೊಂದು ಮೋಸದ ಪ್ರಕರಣ ಬೆಳಕಿಗೆ ಬಂದಿದೆ. ರೋಸಿ ಹೋದ ಅಮಾಯಕರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರ ಉದಾಸೀನದಿಂದ ಹಣ ಹೂಡಿದವರು, ಸಂಸ್ಥೆಯ ಪ್ರತಿನಿಧಿಗಳು ಕಂಗಾಲಾಗಿದ್ದಾರೆ.

ಏನಿದು ಪ್ರಕರಣ?: ಬೆಂಗಳೂರು ಮೂಲದ ಬಿ. ತಮ್ಮೇಗೌಡ., ಬಿ. ನಾರಾಯಣಸ್ವಾಮಿ ಎಂಬುವರ ಮಾಲೀಕತ್ವದ ಸ್ವರ್ಣ ಶಕ್ತಿ ಮಲ್ಟಿ ಪರ್ಪಸ್ ಕೋ-ಆಪ್​ರೇಟಿವ್ ಲಿಮಿಟೆಡ್ (ನಂ. 47/1, ಶಬರಿನಗರ 3ನೇ ಕ್ರಾಸ್, ಬ್ಯಾಟರಾಯನಪುರ, ಬೆಂಗಳೂರು) ಸಂಸ್ಥೆ 2011ರಲ್ಲಿ ನವನಗರದಲ್ಲಿ ಕಚೇರಿ ಆರಂಭಿಸಿತು.

ಸ್ವರ್ಣಶಕ್ತಿ ಸಂಸ್ಥೆ ಅರ್ಜಿ ವಿತರಿಸಿ ಸದಸ್ಯರನ್ನಾಗಿಸಿಕೊಂಡು ಆರ್​ಡಿ, ಎಫ್​ಡಿ ಮತ್ತು ಎಂಐಎಸ್ ಯೋಜನೆಯಡಿ ಹಣ ಸಂಗ್ರಹಿಸಿತು. ವಾರ್ಷಿಕ ಶೇ.6 ಬಡ್ಡಿ ನೀಡುವ ಭರವಸೆ ಹಾಗೂ ಹಣ ನೀಡಿದ್ದಕ್ಕೆ ಪ್ರತಿಯಾಗಿ ಸಂಸ್ಥೆಯವರು ಯಾವ ಯೋಜನೆಯಡಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಬಾಂಡ್ ಮತ್ತು ರಶೀದಿ ನೀಡಿದ್ದರೆಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.

ದೂರು ದಾಖಲಿಸಿದರು: ವಂಚನೆ ಗೊಳಗಾದ ಸರಸ್ವತಿ ರಘುನಾಥ ಶೆಟ್ಟಿ ಎಂಬುವರು ಸಂಸ್ಥೆ ವಿರುದ್ಧ ಜುಲೈ 18, 2017ರಂದು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸರಸ್ವತಿ ಶೆಟ್ಟಿ 1.75 ಲಕ್ಷ ರೂ., ರಘುನಾಥ ಶೆಟ್ಟಿ 3.14,500 ರೂ., ಪ್ರಕಾಶ ವಸಂತರಾವ ದಾಯಪುಲೆ 1.50 ಲಕ್ಷ ರೂ., ಜಮೀರ್ ಅಹ್ಮದ್ ಮಲ್ಲಿಕ್​ಜಾನ್ ಧಾರವಾಡ 1.10 ಲಕ್ಷ ರೂ., ರಾಮು ಮಾರುತಿ ಜಾಲಗಾರ 1.80 ಲಕ್ಷ ರೂ., ಲಾಲಸಾಬ್ ರಸ್ತೂಮಸಾಬ್ ಸನ್ಮನಿ 1 ಲಕ್ಷ ರೂ. ಈರಪ್ಪ ಮುದಗಲ್ 67 ಸಾವಿರ ರೂ. ಸೇರಿ ಆನೇಕರು ಹಣವನ್ನು ಸಂಸ್ಥೆಯ ಆರ್​ಡಿ, ಎಫ್​ಡಿ ಖಾತೆಗೆ ಜಮಾ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಕೆಲವರು ಬೆಂಗಳೂರಿನ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾರ್ಚ್​ನಲ್ಲೇ ದೂರು ದಾಖಲಿಸಿದ್ದಾರೆ.

ಸಂಸ್ಥೆಯ ಆಸ್ತಿ ಇದೆ: ಜನರಿಂದ ಸಂಗ್ರಹಿಸಿದ ಹಣವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್ ಬಳಿ ಪೆಟ್ರೋಲ್ ಬಂಕ್, ಚಿಂತಾಮಣಿ ನಗರದಲ್ಲಿರುವ ಎಬಿಸಿ ಗಾರ್ವೆಂಟ್ಸ್, ಸ್ವರ್ಣ ಪ್ಯಾರಡೈಸ್ ಮತ್ತು ಫಿಲ್ಮಿ ಎನಿಮೇಶನ್ ಉದ್ಯಮದಲ್ಲಿ ಹೂಡಲಾಗಿದೆ. ಶಿರಾ ತಾಲೂಕಿನ ಚಂಗಾವರದಲ್ಲಿ 75 ಎಕರೆ ಜಮೀನು ಇದೆ ಎಂದು ಸಂಸ್ಥೆಯು ನಂಬಿಸಿ ಹಣ ಪಡೆದುಕೊಂಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರತಿನಿಧಿಗಳಿಗೆ ದುಂಬಾಲು: ಕಂಗಾಲಾದ ಗ್ರಾಹಕರು ಹಣ ವಾಪಸ್ ಕೊಡಿಸಿ ಎಂದು ಸಂಸ್ಥೆಯ ಪ್ರತಿನಿಧಿಗಳಿಗೆ ದುಂಬಾಲು ಬಿದ್ದರು. ಕಮಿಷನ್ ಆಸೆಗಾಗಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿದ ಪ್ರತಿನಿಧಿಗಳ ಮನೆಗಳಿಗೆ ಗ್ರಾಹಕರು ಬರತೊಡಗಿದರು. ಗ್ರಾಹಕರ ಸಂಖ್ಯೆ ಹೆಚ್ಚಾಗತೊಡಗಿದ್ದರಿಂದ ಪ್ರತಿನಿಧಿಗಳು ತಲೆಮರೆಸಿಕೊಳ್ಳತೊಡಗಿದ್ದಾರೆ.

 ಮೂರು ವರ್ಷದ ನಂತರ ಬಂದ್

ಒಂದೆರಡು ವರ್ಷಗಳ ಕಾಲ ಸಂಸ್ಥೆಯು ನಿತ್ಯ ಹಣ ತುಂಬಿದ ಬಹುತೇಕರಿಗೆ ಅಸಲು ಜತೆ ಶೇ.6 ಬಡ್ಡಿ ಹಣ ಪಾವತಿಸಿತು. ಸಣ್ಣ ಪುಟ್ಟ ವ್ಯಾಪಾರಿಗಳು, ಉದ್ಯೋಗಸ್ಥರು, ದಿನಕ್ಕೆ, ತಿಂಗಳಿಗೆ ಇಂತಿಷ್ಟು ಹಣವನ್ನು ಪ್ರತಿನಿಧಿಗಳ ಮೂಲಕ ಸಂಸ್ಥೆಯ ಖಾತೆಗೆ ಜಮಾ ಮಾಡತೊಡಗಿದರು. ಮೂರು ವರ್ಷಗಳ ಅವಧಿಯಲ್ಲಿ ಕೋಟ್ಯಂತರ ರೂ. (ಅಂದಾಜು 4 ಕೋಟಿ ರೂ.) ಹಣ ಸಂಗ್ರಹ ಮಾಡಲಾಗಿದೆ. 2014ರಲ್ಲಿ ಸಂಸ್ಥೆಯ ಸಾಫ್ಟ್​ವೇರ್ ಹಾಳಾಗಿದೆ ಎಂಬ ನೆಪವೊಡ್ಡಿ ನವನಗರ ಶಾಖೆ ಮುಚ್ಚಲಾಯಿತು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸಂಸ್ಥೆ ಪ್ರತಿನಿಧಿ.

Leave a Reply

Your email address will not be published. Required fields are marked *

Back To Top