Monday, 19th February 2018  

Vijayavani

ಶ್ರವಣಬೆಳಗೊಳದ ಮಹಾಮಜ್ಜನದಲ್ಲಿ ಮೋದಿ - ಮೆಟ್ಟಿಲುಗಳ, ಬಾಹುಬಲಿ ಆಸ್ಪತ್ರೆ ಉದ್ಘಾಟನೆ - ಚಾವುಂಡರಾಯ ವೇದಿಕೆಯಲ್ಲಿ ಭಾಷಣ.        ಮೈಸೂರಿನಲ್ಲಿ ಪರಿವರ್ತನಾ ಯಾತ್ರೆಗೆ ಕ್ಷಣಗಣನೆ - ಸಿಎಂ ತವರಲ್ಲಿ ಅಬ್ಬರಿಸಲಿದ್ದಾರೆ ಮೋದಿ - ಸಿದ್ದರಾಮಯ್ಯಗೆ ಟಾಂಗ್ ಕೊಡ್ತಾರಾ ಪ್ರಧಾನಿ?        ಮೋದಿ ಯಾತ್ರೆಗೆ ಬೆದರಿದ್ರಾ ಸಿದ್ದರಾಮಯ್ಯ - ಪ್ರಧಾನಿ ಪ್ರವಾಸದ ವೇಳೆಯೇ ರೌಂಡ್ಸ್ - ಜನರ ಸಮಸ್ಯೆ ಆಲಿಸಿದ ಸಿಎಂ.        ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಮಹಮ್ಮದ್‌ ವಿರುದ್ಧ ಸೆಕ್ಷನ್ 307 ಕೇಸ್ ದಾಖಲು - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ.        ಕೆ.ಆರ್‌.ಆಸ್ಪತ್ರೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಪಾರ್ಥಿವ ಶರೀರ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ.       
Breaking News

ಕರ್ನಾಟಕ-ಒಡಿಶಾ ಮುಖಾಮುಖಿ

Tuesday, 13.02.2018, 3:02 AM       No Comments

ಬೆಂಗಳೂರು: ನಾಕೌಟ್ ಹಂತ ಖಚಿತಪಡಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಆತಿಥೇಯ ಕರ್ನಾಟಕ ತಂಡ ವಿಜಯ್ ಹಜಾರೆ ಏಕದಿನ ಟೂರ್ನಿಯ ತನ್ನ 5ನೇ ಪಂದ್ಯದಲ್ಲಿ ಒಡಿಶಾ ತಂಡವನ್ನು ಎದುರಿಸಲಿದೆ. ನಗರದ ಹೊರವಲಯದಲ್ಲಿರುವ ಆಲೂರು ಮೈದಾನ-1ರಲ್ಲಿ ನಡೆಯಲಿರುವ ‘ಎ’ ಗುಂಪಿನ ಪಂದ್ಯ ಕರ್ನಾಟಕದ ಪಾಲಿಗೆ ಮಹತ್ವ ಪಡೆದಿದೆ. ಭಾನುವಾರ ಪಂಜಾಬ್ ವಿರುದ್ಧ 4 ರನ್​ಗಳಿಂದ ಸೋಲನುಭವಿಸಿದ್ದ ಕರ್ನಾಟಕ ಜಯದ ಹಳಿಗೆ ಮರಳುವ ಯತ್ನದಲ್ಲಿದೆ. ಕಳೆದ ಪಂದ್ಯದ ಶತಕ ಸಾಧಕ ರಾಹುಲ್, ಟಿ20 ಸರಣಿಗಾಗಿ ರಾಷ್ಟ್ರೀಯ ತಂಡ ಕೂಡಿಕೊಳ್ಳುತ್ತಿರುವುದರಿಂದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಕಳೆದ ಮೂರು ಆವೃತ್ತಿಗಳಲ್ಲಿ ಪ್ರಶಸ್ತಿ ಜಯಿಸದೆ ವಂಚಿತವಾಗಿರುವ ಕರ್ನಾಟಕದ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ಇದುವರೆಗೂ ಕರ್ನಾಟಕ ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು, 1 ಸೋಲು ಹಾಗೂ 1 ರದ್ದಿನ ಫಲಿತಾಂಶದೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಒಡಿಶಾ ಕೂಡ ನಾಕೌಟ್ ಹಂತ್ಕಕೇರುವ ರೇಸ್​ನಲ್ಲಿ ಕರ್ನಾಟಕ ಸವಾಲು ಎದುರಿಸಲು ಸಿದ್ಧವಾಗಿದೆ.

ದಿನದ ಇತರ ಪಂದ್ಯಗಳು

ಆಲೂರು ಮೈದಾನ-3: ಅಸ್ಸಾಂ-ಪಂಜಾಬ್, ಮೈದಾನ-2: ರೈಲ್ವೇಸ್-ಬರೋಡ

Leave a Reply

Your email address will not be published. Required fields are marked *

Back To Top