Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಕರ್ನಾಟಕಕ್ಕೆ 2 ರನ್ ಜಯ

Friday, 12.01.2018, 3:02 AM       No Comments

ವಿಶಾಖಪಟ್ಟಣ: ಅಂತಿಮ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ದಕ್ಷಿಣ ವಲಯ ಪಂದ್ಯದಲ್ಲಿ ಕರ್ನಾಟಕ ತಂಡ 2 ರನ್​ಗಳಿಂದ ಹೈದರಾಬಾದ್ ವಿರುದ್ಧ ರೋಚಕ ಜಯ ದಾಖಲಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ ಕರ್ನಾಟಕ, ಕರುಣ್ ನಾಯರ್ (77ರನ್, 42ಎಸೆತ, 10ಬೌಂಡರಿ, 1ಸಿಕ್ಸರ್) ಹಾಗೂ ಕೆ.ಗೌತಮ್ (57ರನ್, 31ಎಸೆತ, 4ಬೌಂಡರಿ, 4ಸಿಕ್ಸರ್) ಜೋಡಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್​ಗೆ 205ರನ್ ಕಲೆಹಾಕಿತು. ಪ್ರತಿಯಾಗಿ ಹೈದರಾಬಾದ್ 20 ಓವರ್​ಗಳಲ್ಲಿ 9 ವಿಕೆಟ್​ಗೆ 203 ರನ್ ಗಳಿಸಿ ಸೋಲು ಕಂಡಿತು.

ಕರ್ನಾಟಕ: 5 ವಿಕೆಟ್​ಗೆ 205 (ಮಯಾಂಕ್ 10, ಕರುಣ್ 77, ಕೆ.ಗೌತಮ್ 57, ಮನೀಷ್ ಪಾಂಡೆ 11, ವಿನಯ್ 15, ರವಿಕಿರಣ್ 33ಕ್ಕೆ 2), ಹೈದರಾಬಾದ್: 9 ವಿಕೆಟ್​ಗೆ 203 (ತನ್ಮಯ್ 38, ಅಕ್ಷತ್ ರೆಡ್ಡಿ 70, ಬಿ.ಸಂದೀಪ್ 34, ಸ್ಟುವರ್ಟ್ ಬಿನ್ನಿ 29ಕ್ಕೆ 3, ವಿನಯ್ 37ಕ್ಕೆ 1, ಎಸ್.ಅರವಿಂದ್ 30ಕ್ಕೆ 1, ಕೆ.ಗೌತಮ್ 35ಕ್ಕೆ 1).

ಥ್ರಿಲ್ಲರ್ ಲಾಸ್ಟ್ ಓವರ್

ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕಕ್ಕೆ ಬ್ರೇಕ್ ಹಾಕಿದ ವಿನಯ್ಕುಮಾರ್ ಪಡೆ ಸುಲಭ ಗೆಲುವಿನತ್ತ ಮುಖಮಾಡಿತು. ಆದರೆ, ಬಿ.ಸಂದೀಪ್ ಅಂತಿಮ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ಪಂದ್ಯ ರೋಚಕತೆಯತ್ತ ಸಾಗಿತು. ಇದರ ಫಲವಾಗಿ ಹೈದರಾಬಾದ್ ತಂಡಕ್ಕೆ ಅಂತಿಮ ಓವರ್​ನಲ್ಲಿ ಗೆಲುವಿಗೆ 8 ರನ್ ಮಾತ್ರ ಬೇಕಿತ್ತು. ಸ್ಟುವರ್ಟ್ ಬಿನ್ನಿ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲೆ ಬೌಂಡರಿ ಸಿಡಿಸಿದ ಬಿ.ಸಂದೀಪ್, ಕರ್ನಾಟಕಕ್ಕೆ ಆಘಾತ ನೀಡಿದರು. ಮರು ಎಸೆತದಲ್ಲೆ ಸಂದೀಪ್ ರನೌಟ್ ಬಲೆಗೆ ಬಿದ್ದರು. 5ನೇ ಎಸೆತದಲ್ಲಿ 2 ರನ್ ಕದಿಯಲು ಹೋಗಿ ಆಕಾಶ್ ಭಂಡಾರಿ (3) ಸಮರ್ಥ್​ರಿಂದ ರನೌಟ್ ಆದರೆ, ಅಂತಿಮ ಎಸೆತದಲ್ಲಿ ಮೊಹಮದ್ ಸಿರಾಜ್ ಸಿಎಂ ಗೌತಮ್ೆ ಕ್ಯಾಚ್ ನೀಡಿದರು. ಈ ಮೂಲಕ ಬಿನ್ನಿ ರಾಜ್ಯಕ್ಕೆ ಗೆಲುವು ತಂದರು.

ವಿವಾದ-ಅದೃಷ್ಟ ತಂದ 2 ರನ್!

ಕರ್ನಾಟಕದ ಇನಿಂಗ್ಸ್​ನ 2ನೇ ಓವರ್​ನ 4ನೇ ಎಸೆತದಲ್ಲಿ ಕರುಣ್ ನಾಯರ್ ಬಾರಿಸಿದ ಚೆಂಡನ್ನು ಮೆಹ್ದಿ ಹಸನ್ ಬೌಂಡರಿ ಗೆರೆ ಬಳಿ ತಡೆದರು. ಆಗ ಸರಿಯಾಗಿ ಗಮನಿಸದ ಅಂಪೈರ್ ಉಲ್ಲಾಸ್ ಗಾಂದೆ ಕೇವಲ 2 ರನ್ ನೀಡಿದರು. ಆದರೆ ಹಸನ್ ಚೆಂಡು ಹಿಡಿಯುವ ವೇಳೆ ಅವರ ಎಡಗಾಲು ಬೌಂಡರಿ ಗೆರೆಗೆ ತಾಗಿತ್ತು. ಬಳಿಕ ಫೂಟೇಜ್ ಗಮನಿಸಿ ಇನಿಂಗ್ಸ್ ಮುಗಿದ ಬಳಿಕ ಕರ್ನಾಟಕಕ್ಕೆ 2 ರನ್ ನೀಡಲಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈದರಾಬಾದ್ ತಂಡದ ನಾಯಕ ಅಂಬಟಿ ರಾಯುಡು ಸಹ ಆಟಗಾರರೊಂದಿಗೆ ಕೆಲಕಾಲ ಪ್ರತಿಭಟನೆಯನ್ನೂ ನಡೆಸಿದ್ದರು. ಅಂತಿಮವಾಗಿ ಕರ್ನಾಟಕ ತಂಡ ಈ 2 ರನ್​ಗಳಿಂದಲೇ ಜಯ ದಾಖಲಿಸಿದ್ದು ಅದೃಷ್ಟಕ್ಕೆ ಸಾಕ್ಷಿಯಾಯಿತು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top