Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಕರುಣ್ ಶತಕ ಬಾರಿಸಿದರೂ ಸೋತ ಗ್ರೀನ್

Monday, 11.09.2017, 3:00 AM       No Comments

ಲಖನೌ: ಕನ್ನಡಿಗ ಕರುಣ್ ನಾಯರ್(120 ರನ್, 203 ಎಸೆತ, 13 ಬೌಂಡರಿ) ಸಾಹಸಿಕ ಶತಕದ ಹೊರತಾಗಿಯೂ ಇಂಡಿಯಾ ಗ್ರೀನ್ ತಂಡ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಅಹರ್ನಿಶಿ ಚತುರ್ದಿನ ಪಂದ್ಯದಲ್ಲಿ ಇಂಡಿಯಾ ರೆಡ್ ತಂಡದ ವಿರುದ್ಧ 170 ರನ್​ಗಳಿಂದ ಪರಾಭವಗೊಂಡಿದೆ. ಇಂಡಿಯಾ ರೆಡ್ ನೀಡಿದ 474 ರನ್ ಸವಾಲನ್ನು ಬೆನ್ನಟ್ಟಿದ ಇಂಡಿಯಾ ಗ್ರೀನ್ ತಂಡ 2 ವಿಕೆಟ್​ಗೆ 98 ರನ್​ಗಳಿಂದ ಅಂತಿಮ ದಿನವಾದ ಭಾನುವಾರ ದ್ವಿತೀಯ ಇನಿಂಗ್ಸ್ ಮುಂದುವರಿಸಿತು. ಕರುಣ್ ನಾಯರ್ ಶತಕ ಪೂರೈಸಿ ಕ್ರೀಸ್​ನಲ್ಲಿ ಇದ್ದಷ್ಟು ಹೊತ್ತು ಇಂಡಿಯಾ ಗ್ರೀನ್ ಕನಿಷ್ಠ ಡ್ರಾ ಸಾಧಿಸುವ ಹಾದಿಯಲ್ಲಿತ್ತು. ಆದರೆ ಲೆಗ್ ಸ್ಪಿನ್ನರ್ ಕರ್ಣ್ ಶರ್ಮ(94ಕ್ಕೆ 6) ಮಾರಕ ದಾಳಿಗೆ 303 ರನ್​ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

ಇಂಡಿಯಾ ರೆಡ್: 323 ಮತ್ತು 2 ವಿಕೆಟ್​ಗೆ 307, ಇಂಡಿಯಾ ಗ್ರೀನ್: 157 ಮತ್ತು 303 (ಕರುಣ್ 120, ಸಮರ್ಥ್ 59, ಮುರಳಿ ವಿಜಯ್ 13, ಕರ್ಣ್ ಶರ್ಮ 94ಕ್ಕೆ 6, ಸಿದ್ಧಾರ್ಥ್ ಕೌಲ್ 46ಕ್ಕೆ 4).

ಮುಂದಿನ ಪಂದ್ಯ

ಇಂಡಿಯಾ ಬ್ಲೂ-ಇಂಡಿಯಾ ರೆಡ್

ಯಾವಾಗ: ಸೆಪ್ಟೆಂಬರ್ 13-16

ಎಲ್ಲಿ: ಕಾನ್ಪುರ

ಆರಂಭ: ಮಧ್ಯಾಹ್ನ 2.30

Leave a Reply

Your email address will not be published. Required fields are marked *

Back To Top