Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಕರಾಳತೆ ವಿರುದ್ಧ ನೇಹಾ ಧ್ವನಿ!

Friday, 12.01.2018, 3:03 AM       No Comments

‘ನನಗ್ಯಾವತ್ತೂ ಲೈಂಗಿಕ ಕಿರುಕುಳ ಎದುರಾಗಿಲ್ಲ, ಆದರೆ ಸಿನಿಮಾರಂಗದಲ್ಲಿ ಅದು ನಡೆಯುತ್ತಲಿರುತ್ತೆ’- ಹೀಗೊಂದು ಹೇಳಿಕೆ ನೀಡಿದ್ದು ಬಾಲಿವುಡ್ ನಟಿ ನೇಹಾ ದೂಫಿಯಾ. ಹೀಗೆ ಹೇಳುವುದಕ್ಕೆ ಕಾರಣ ಮತ್ತದೇ ಹಾಲಿವುಡ್ ಚಿತ್ರರಂಗ! ಕಳೆದ ವರ್ಷ ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ಹಾಲಿವುಡ್​ನಲ್ಲಿ ದೊಡ್ಡ ಸಂಚಲನವೇ ಉಂಟಾಗಿತ್ತು. ಖ್ಯಾತ ನಿರ್ವಪಕ ಹಾರ್ವಿ ವಿನ್ಸ್​ಟನ್ ವಿರುದ್ಧ ಇಡೀ ಚಿತ್ರರಂಗವೇ ತಿರುಗಿಬಿದ್ದಿತ್ತು. ಆತನಿಂದ ಕಿರುಕುಳ ಅನುಭವಿಸಿದ ಅದೆಷ್ಟೋ ನಟಿಯರು ಸಾಮಾಜಿಕ ಜಾಲತಾಣದಲ್ಲಿ ‘ಮೀಟೂ’, ‘ಟೈಮ್ಸ್​ಅಪ್’ ಎಂಬ ಅಭಿಯಾನವನ್ನೇ ಆರಂಭಿಸಿದ್ದರು. ಇದೀಗ ಅದರ ಬಗ್ಗೆ ಮತ್ತೆ ನೇಹಾ ಧ್ವನಿ ಎತ್ತಿದ್ದಾರೆ.

‘ಲೈಂಗಿಕ ಹಿಂಸೆ ಎದುರಾದರೆ ಅದನ್ನು ಮುಚ್ಚಿಟ್ಟುಕೊಳ್ಳುವುದು ಬುದ್ಧಿವಂತಿಕೆ ಅಲ್ಲ. ಆ ಕಹಿ ಸತ್ಯವನ್ನು ಹೊರಗಿನ ಲೋಕಕ್ಕೆ ಪರಿಚಯಿಸಬೇಕು. ಕೆಟ್ಟ ಹುಳುಗಳ ಮುಖವಾಡ ಬಯಲು ಮಾಡಬೇಕು. ಇಂಡಸ್ಟ್ರಿಯಲ್ಲಿ ಆ ರೀತಿ ನಡೆಯುವುದಿಲ್ಲ ಎನ್ನುವ ಮೂಲಕ ಉದ್ಯಮದ ಪರವಾಗಿ ನಾನು ನಿಲ್ಲುವುದಿಲ್ಲ. ಖಂಡಿತವಾಗಿಯೂ ಅಂತಹ ನೀಚ ಕೆಲಸಗಳೂ ಈಗಲೂ ಚಾಲ್ತಿಯಲ್ಲಿವೆ. ಎಲ್ಲ ಭಾಷೆಯ ಸಿನಿಮಾರಂಗದಲ್ಲೂ ನಡೆಯುತ್ತಿದೆ’ ಎಂದು ಖಡಕ್ಕಾಗಿ ಮಾತನಾಡಿದ್ದಾರೆ ನೇಹಾ. ‘ನಟಿಯರೆಂದರೆ ಅವರಿಗೆ ಅವರದೇ ಆದ ಪ್ರತಿಷ್ಠೆ ಇರುತ್ತದೆ. ಅವರದೇ ಆದ ಅಭಿಮಾನಿ ಬಳಗ ಹೊಂದಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೂ ಕುಟುಂಬ, ಬಂಧು-ಬಾಂಧವರಿರುತ್ತಾರೆ. ಅದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇಂಡಸ್ಟ್ರಿಯಲ್ಲಿ ತಮ್ಮ ಮೇಲಾದ ಕಿರುಕುಳವನ್ನು ಮುಚ್ಚಿಡಲು ಯತ್ನಿಸುತ್ತಿರುತ್ತಾರೆ’ ಎನ್ನುವ ಅವರು, ‘ಈ ವಿಷಯದಲ್ಲಿ ನಾನು ಲಕ್ಕಿ. ಆ ರೀತಿಯ ಕಿರುಕುಳ ನಾನು ಅನುಭವಿಸಿಲ್ಲ. ಚಿತ್ರರಂಗದ ಸಣ್ಣ ಸಣ್ಣ ಮಾಹಿತಿಯೂ ನಾನು ಬಲ್ಲೆ. ಮೀಟಿಂಗ್​ಗಳು ಹೇಗೆ ನಡೆಯುತ್ತವೆ. ಬಾಲಿವುಡ್ ಸಿಸ್ಟಮ್ ಹೇಗಿದೆ ಎಂಬುದು ನನಗೆ ಗೊತ್ತು. ಹೀಗಾಗಿ ಈ ರೀತಿಯ ವಿಷಯವನ್ನು ಗುಪ್ತವಾಗಿಡಬೇಡಿ, ಬಹಿರಂಗಪಡಿಸಿ’ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top