Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಕರಣ್ ಜತೆ ಆಲಿಯಾ ಮುಕ್ತ ಮಾತುಕತೆ

Friday, 08.06.2018, 3:01 AM       No Comments

ನಟಿ ಆಲಿಯಾ ಭಟ್ ಸದ್ಯ ‘ರಾಝಿ’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈವರೆಗೆ ಅನೇಕ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಆಲಿಯಾಗಿದೆ. ಇದರ ಹಿಂದೆ ಅವರ ಮೆಂಟರ್ ಕರಣ್ ಜೋಹರ್ ಪರಿಶ್ರಮ ಕೂಡ ಇದೆ. ಅಚ್ಚರಿಯ ವಿಚಾರ ಏನೆಂದರೆ ಕರಣ್ ಜತೆ ಆಲಿಯಾ ಎಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸುತ್ತಾರಂತೆ.

ಈ ಬಗ್ಗೆ ಹೇಳಿಕೊಳ್ಳುವ ಆಲಿಯಾ, ‘ನನ್ನ ವೈಯಕ್ತಿಕ ವಿಚಾರ ಇರಬಹುದು ಅಥವಾ ನನ್ನ ವೃತ್ತಿಗೆ ಸಂಬಂಧಿಸಿದ ವಿಚಾರಗಳಿರಬಹುದು, ಅದನ್ನು ಕರಣ್ ಜತೆ ಮುಕ್ತವಾಗಿ ಹಂಚಿಕೊಳ್ಳುತ್ತೇನೆ. ಅವರು ನನಗೆ ಓರ್ವ ಉತ್ತಮ ಮೆಂಟರ್, ಗೆಳೆಯ. ನಾನು ಅವರ ಜತೆ ಚರ್ಚೆ ನಡೆಸಿದಾಗೆಲ್ಲ ರಿಫ್ರೆಶ್ ಫೀಲ್ ಆಗುತ್ತದೆ’ ಎನ್ನುತ್ತಾರೆ.

ಆಲಿಯಾ ಬಣ್ಣದ ಬದುಕು ಆರಂಭಿಸಿದ್ದು ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ. ಆ ಚಿತ್ರಕ್ಕೆ ಕರಣ್ ಅವರದ್ದೇ ನಿರ್ದೇಶನ. ಅದರ ಮೂಲಕ ಆಲಿಯಾಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ಕೀರ್ತಿ ಕರಣ್​ಗೆ ಸಲ್ಲುತ್ತದೆ. ಅದಾದ ನಂತರ ಆಲಿಯಾ ನಟನೆಯ ಅನೇಕ ಚಿತ್ರಗಳಿಗೆ ಕರಣ್ ಬಂಡವಾಳ ಹೂಡಿದ್ದಾರೆ. ‘ರಾಝಿ’ ಚಿತ್ರಕ್ಕೂ ಕರಣ್ ಬಂಡವಾಳ ಹೂಡಿದ್ದಾರೆ. ಸದ್ಯ ‘ರಾಝಿ’ ಭಾರತದ ಬಾಕ್ಸ್ ಆಫೀಸ್​ನಲ್ಲಿ 116 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆಲಿಯಾ, ‘ಬ್ರಹ್ಮಾಸ್ತ್ರ’, ‘ಕಳಂಕ್’ ಹಾಗೂ ‘ಗಲ್ಲಿ ಬಾಯ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top