Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :

ಕರಗಿದ ಕಪ್ಪುಹಣ!

Monday, 19.06.2017, 3:03 AM       No Comments

ನವದೆಹಲಿ: ಕಪ್ಪುಹಣ ಹೊಂದಿರುವವರ ಸ್ವರ್ಗ ಎಂದೇ ಕರೆಯಲಾಗುವ ಸ್ವಿಜರ್​ಲೆಂಡ್​ನಲ್ಲಿ ಭಾರತೀಯ ಮೂಲದವರು ಹೊಂದಿರುವ ಖಾತೆ ಹಾಗೂ ಹಣದ ಕುರಿತು ಮಾಹಿತಿ ನೀಡಲು 2019ರಿಂದ ಸ್ವಯಂಚಾಲಿತ ಮಾಹಿತಿ ವ್ಯವಸ್ಥೆ ಜಾರಿಗೆ ತರಲು ಅಲ್ಲಿನ ಬ್ಯಾಂಕುಗಳ ಒಕ್ಕೂಟ ಒಪ್ಪಿಗೆ ನೀಡಿರುವ ಬೆನ್ನಲ್ಲೇ, ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ವಿಜರ್​ಲೆಂಡ್​ನ ಬ್ಯಾಂಕರ್ಸ್​ಗಳ ಒಕ್ಕೂಟ ಈ ಮಾಹಿತಿ ನೀಡಿದೆ. ಸಿಂಗಾಪುರ, ಹಾಂಕಾಂಗ್​ಗಳ ಹಣಕಾಸು ಸಂಸ್ಥೆಗಳಿಗೆ ಹೋಲಿಸಿದರೆ ಸ್ವಿಸ್ ಬ್ಯಾಂಕ್​ಗಳಲ್ಲಿ ಭಾರತೀಯರ ಹೂಡಿಕೆ ಶೇ. 33ರಷ್ಟು ತಗ್ಗಿದೆ ಎಂದು ಒಕ್ಕೂಟ ಹೇಳಿದೆ.

ಭಾರತೀಯರ ಠೇವಣೆ 8,392 ಕೋಟಿ ರೂ!: 2006ರಲ್ಲಿ ಸ್ವಿಸ್ ಬ್ಯಾಂಕ್​ಗಳಲ್ಲಿ 23 ಸಾವಿರ ಕೋಟಿ ರೂ.ಗಳಷ್ಟಿದ್ದ (6.5 ಬಿಲಿಯನ್ ಫ್ರಾಂಕ್) ಭಾರತೀಯರ ಹಣ ಠೇವಣಿ ಪ್ರಮಾಣ 2015ರ ಅಂತ್ಯಕ್ಕೆ 8,392 ಕೋಟಿ ರೂ.ಗೆ (1.21 ಬಿಲಿಯನ್ ಫ್ರಾಂಕ್) ತಗ್ಗಿದೆ ಎಂದು ಸ್ವಿಜರ್​ಲೆಂಡ್ ಖಾಸಗಿ ಬ್ಯಾಂಕ್ ಒಕ್ಕೂಟ ಅಂದಾಜಿಸಿದೆ. 2015ರಲ್ಲಿ ಸ್ವಿಸ್ ಬ್ಯಾಂಕ್​ಗಳಲ್ಲಿ ಭಾರತೀಯರ ಠೇವಣಿ 13 ಸಾವಿರ ಕೋಟಿ ರೂ. ಇತ್ತು.

‘ಭಾರತೀಯರು ಸ್ವಿಸ್ ಬ್ಯಾಂಕ್​ಗಳಲ್ಲಿ ಖಾತೆ ತೆರೆಯುವ ಬದಲಿಗೆ ಏಷ್ಯಾದ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ’ ಎಂದು ಅಸೋಸಿಯೇಷನ್​ನ ವ್ಯವಸ್ಥಾಪಕ ಜಾನ್ ಲಾಂಗ್ಲೋ ಹೇಳಿದ್ದಾರೆ. ಆದರೆ, ಸ್ವಿಸ್ ಬ್ಯಾಂಕು

ಹೊರತು ಪಡಿಸಿ ಉಳಿದ ದೇಶಗಳ ಬ್ಯಾಂಕ್​ಗಳಲ್ಲಿ ಭಾರತೀಯರು ಎಷ್ಟು ಹಣ ಇರಿಸಿದ್ದಾರೆ ಎಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ. –ಏಜೆನ್ಸೀಸ್

Leave a Reply

Your email address will not be published. Required fields are marked *

Back To Top