Tuesday, 26th September 2017  

Vijayavani

1. ಗಡಿಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್​- ನಡೆಯಲಿದೆ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​- ಪಾಕ್​ಗೆ ಬಿಪಿನ್​ ರಾವತ್​ ವಾರ್ನಿಂಗ್​ 2. ಮ್ಯಾನ್ಮಾರ್‌ನಲ್ಲಿ ಭುಗಿಲೆದ್ದ ಹಿಂಸಾಚಾರ- ಪ್ರತಿಕಾರಕ್ಕಿಳಿದ ರೋಹಿಂಗ್ಯಾ ಮುಸ್ಲಿಂರು- 92 ಜನರ ಭೀಕರ ಕಗ್ಗೊಲೆ 3. ವಿಶ್ವಕ್ಕೆ 3ನೇ ಮಹಾಯುದ್ಧದ ಭೀತಿ- ಕೋರಿಯಾ ದೃಷ್ಟಿಯಲ್ಲಿ ಅಮೆರಿಕಾವೇ ಆರೋಪಿ- ಸಮರಕ್ಕೆ ಸಿದ್ಧ ಎಂದ ಸರ್ವಾಧಿಕಾರಿ 4. ಗದಗ್​ನಲ್ಲಿ ಯಶಸ್ವಿಯಾದ ಸ್ವಚ್ಛ ಭಾರತ- ನರಗುಂದ ತಾಲೂಕು ಬಯಲು ಶೌಚಮುಕ್ತ- ಇಂದು ಉಪರಾಷ್ಟ್ರಪತಿಗಳಿಂದ ಅಧಿಕೃತ ಘೋಷಣೆ 5. ಮಳೆಗೆ ತತ್ತರಿಸಿದ ಬೆಣ್ಣೆ ದೋಸೆ ನಗರಿ- ಮಲೆನಾಡಲ್ಲಿ ಮನೆಗೆ ನುಗ್ಗಿದ ನೀರು- ಇತ್ತ ಕೋಲಾರದಲ್ಲಿ ನೂರಾರು ಎಕರೆ ಬೆಳೆ ನಾಶ
Breaking News :

ಕರಗಲಿದೆ ಜಿಎಸ್​ಟಿ ಭಯ

Monday, 17.07.2017, 3:00 AM       No Comments

| ಕೆ ವಿದ್ಯಾಶಂಕರ್ ಹಿರಿಯ ಪತ್ರಕರ್ತರು

ಈಗ ಆಷಾಢ ಮಾಸ. ಈ ಮಾಸದಲ್ಲಿ ಹಬ್ಬ ಬರುವುದೇ ಇಲ್ಲ. ಆದರೂ ದೇಶದಲ್ಲಿ ಒಂದು ಹಬ್ಬ ಸಾಗಿದೆ- ಅದೇ ಜಿಎಸ್​ಟಿ ಹಬ್ಬ! ಗಣಪತಿ-ದಸರಾ-ದೀಪಾವಳಿಯಂತೆ ಈಗ ಎಲ್ಲೆಲ್ಲೂ ಈ ಹಬ್ಬದ ಮಾತು; ಜಿಎಸ್​ಟಿ ಅದಕ್ಕೆ ಏನಾಯ್ತು- ಇದಕ್ಕೆ ಏನಾಯ್ತು? ಇದೇ ಮಾತು. ಅದು ಸಹಜ. ಹೊಸತು ಎಂದಾಗ ಏನೋ ಎಂತೋ ಎನಿಸುವುದು ಸ್ವಾಭಾವಿಕ. ಜಿಎಸ್​ಟಿ ಬಗ್ಗೆ ಕೂಡ ಅದು ನಿಜ.

ಹೊಸತು ಎಂದಾಗ ಆತಂಕ-ದಿಗಲು ಸಾಮಾನ್ಯ. ನೀವು ರೈಲ್ವೆ ಸ್ಟೇಷನ್​ಗೆ ಹೋಗಿ. ಯಾವುದೇ ಎಕ್ಸ್​ಪ್ರೆಸ್ ರಾಜಧಾನಿ- ಶತಾಬ್ಧಿ ಎಕ್ಸ್​ಪ್ರೆಸ್ ರೈಲು ಹೊರಡುವ ಮುನ್ನ ಹೇಗಿದೆ ನೋಡಿ. ಅಲ್ಲೂ ಜನರಲ್ಲಿ ಆತಂಕ-ಗಡಿಬಿಡಿ-ಗೋಜಲು-ಗೊಂದಲ-ಭೀತಿ ಎಲ್ಲ ಇದ್ದಿದ್ದೇ. ರೈಲು ಹೊರಟರೂ ಇದು ಹೊರಟು ಹೋಗುವುದಿಲ್ಲ. ಆದರೆ ಅರ್ಧಗಂಟೆ ಮೇಲೆ ನೋಡಿ ಇದಾವುದೂ ಇಲ್ಲ! ಎಲ್ಲ ಶಾಂತ. ಇಲ್ಲ ಸೀಟು ರಾದ್ಧಾಂತ! ಅದಕ್ಕೆ ಸೆಟಲ್​ವೆುಂಟ್ ಟೈಮ್ ಅಂತಾರೆ. ಶುರುವಿನಲ್ಲಿ ಇದು ರೈಲು ಹೊರಟಾಗ ಇದ್ದಿದ್ದೇ, ಆಮೇಲೆ ಇಲ್ಲವೇ ಇಲ್ಲ ಆತಂಕದ ಸದ್ದೇ!

ಜಿಎಸ್​ಟಿ ವಿಚಾರದಲ್ಲೂ ಅಷ್ಟೇ. ಈಗ ಅದು ಚಾಲ್ತಿಗೆ ಬಂದಿದೆ. ಆಂತಕ ಇದೆ ಜನರಲ್ಲಿ. ಗೊಂದಲ ಇದೆ ಚರ್ಚಾಪಟುಗಳಲ್ಲಿ. ಜಿಎಸ್​ಟಿಯನ್ನು ಜಾರಿ ಮಾಡುವವರು ಹಗಲೂರಾತ್ರಿ ವಾರಗಳಿಂದ, ತಿಂಗಳುಗಳಿಂದ ಎಲ್ಲ ಕ್ರಮಗಳನ್ನೂ ರೂಪಿಸಿದ್ದಾರೆ. ಜಿಎಸ್​ಟಿ ರೂಪರೇಷೆಯು ವರ್ಷಾನುವರ್ಷದಿಂದ ರೂಪುಗೊಂಡಿದೆ. ಹಬ್ಬ ಎಂದರೆ ಏನು? ಹಬ್ಬ ಎಂದರೆ ತಯಾರಿ! ಗಣಪತಿ ದೀಪಾವಳಿ ಹಬ್ಬವು ಅದರ ತಯಾರಿಯಲ್ಲೇ ಬದುಕುವುದು! ಹಬ್ಬದ ದಿನ ಪಟಾರನೇ ಮುಗಿದುಬಿಡುತ್ತದೆ. ಅದರ ತಯಾರಿ ಎರಡು-ಮೂರು ವಾರಗಳಿಂದ ಸಾಗಿರುತ್ತದೆ. ಮದುವೆ ಕೂಡ ಹಾಗೇ. ಮದುವೆ ದಿನ ಒಂದೆರಡು ಹಗಲು-ರಾತ್ರಿ. ಆದರೆ ತಯಾರಿ ಜೋರು ಮೂರ್ನಾಲ್ಕು ತಿಂಗಳು! ಈ ರೀತಿ ಅರ್ಥ ಮಾಡಿಕೊಂಡರೆ ಜಿಎಸ್​ಟಿ ಹಬ್ಬಕ್ಕೆ ತಯಾರಿ ಜೋರೇ ಜೋರು! ಎಲ್ಲ ಸಿದ್ಧ ಸನ್ನದ್ಧ ಈಗ ಜಿಎಸ್​ಟಿ. ಮುಂದೇನಾಗುವುದೋ ಎಂದು ಈ ಕ್ಷಣದಲ್ಲಿ ತುಮುಲ. ಇದು ಇದ್ದದ್ದೇ. ಬಸ್ಸಿಗೆ, ಟ್ರೖೆನಿಗೆ, ಆಟೋಗೆ ನಾವು ಅವಸರದಲ್ಲಿ ಕಾಯುತ್ತಿರುವಾಗ ಇದ್ದದ್ದೇ ಈ ತುಮುಲ. ಈಗ ಜಿಎಸ್​ಟಿ ಕಾಲ ಆರಂಭವಾಗಿದೆ. ದಿನ ಕಳೆದಂತೆ ಅದೂ ಸೆಟಲ್ ಆಗುತ್ತದೆ. ಅರ್ಥ ಆಗುತ್ತದೆ, ಅನುಭವ ಆಗುತ್ತದೆ.

ಜಿಎಸ್​ಟಿ ಪ್ರಯೋಗ ದೊಡ್ಡದೇ. ಆದರೆ ಇದೇನು ಮಹಾ ಎಂದು ಯಾರಾದರೂ ಕೇಳಿದರೆ ಕೋಪ ಮಾಡಿಕೊಳ್ಳಬೇಡಿ. ಇದಕ್ಕಿಂತ ಮಹಾಯಜ್ಞ -ಮಹಾಯುದ್ಧ ಈಗ ತಾನೆ ಮುಗಿದಿದೆ. ಯಾವುದು ಗೊತ್ತಾಗಲಿಲ್ಲವೆ? ಅದೇ ನೋಟು ಯಜ್ಞ; ಹಳೆಯ ನೋಟಿನ ಹೊಸ ಅವತಾರ. ಅಂಥದ್ದನೇ ನಾವು ಕಂಡಿದ್ದೇವೆ, ಅರಗಿಸಿಕೊಂಡಿದ್ದೇವೆ. ಇನ್ನೂ ಶಕ್ತಿವಂತರಾಗಿ ದಾಪುಗಾಲು ಇರಿಸುತ್ತಿದ್ದೇವೆ. ಹೀಗಿರುವಾಗ ಜಿಎಸ್​ಟಿ ಯಜ್ಞವನ್ನು ನಿಭಾಯಿಸೋಣ ಬಿಡಿ.

500-1,000 ರೂಪಾಯಿ ಹಳೇನೋಟು ನಿಷೇಧಿಸಿ ಬದಲಾಗಿ 500-2,000 ರೂಪಾಯಿ ಹೊಸ ನೋಟು ಚಲಾವಣೆಗೆ ಬಂದು ಹೊಸ ಯುಗವೇ ನಗದು ರಂಗದಲ್ಲಿ ಉಂಟಾಗಿದೆ. ನಮ್ಮ ದೇಶವು ಶೇಕಡ 86 ಕರೆನ್ಸಿಯನ್ನು ತೆಗೆದು ಪರಿಸ್ಥಿತಿಯನ್ನು ನಿಭಾಯಿಸಿದೆ. ಇದರಲ್ಲಿ 500 ರೂಪಾಯಿ ಹಳೇನೋಟುಗಳ ಬಾಬ್ತು ಶೇ.47.6(1,716 ಕೋಟಿ ನೋಟುಗಳು) ಹಾಗೂ 1000 ರೂಪಾಯಿಯ 68 ಕೋಟಿ ನೋಟುಗಳ ಪಾಲು ಶೇ. 38.4. 14.15 ಲಕ್ಷ ಕೋಟಿ ರೂ. ಪರಿವರ್ತನೆ ಈ ನೋಟು ಮಹಾಯಜ್ಞದಲ್ಲಿ ನಡೆದಿದೆ. ಇಂಥ ಅದ್ಭುತ ಸಾಹಸವನ್ನು ಮೆರೆದಿರುವ ನಮ್ಮ ದೇಶ ಈಗ ಜಿಎಸ್​ಟಿ ಪ್ರಯೋಗವನ್ನು ಕೂಡ ಯಶಸ್ವಿಯಾಗಿ ಮಾಡುತ್ತದೆ. ಈ ಬಗ್ಗೆ ಸಂಶಯ ಬೇಡ.

Leave a Reply

Your email address will not be published. Required fields are marked *

Back To Top