Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಕಪ್ಪು, ಕಪ್ಪೆಂಬ ಟೀಕೆಗೆ ಮುಕುಂದ ಕಿಡಿ

Friday, 11.08.2017, 3:03 AM       No Comments

ನವದೆಹಲಿ: ಸಾಮಾಜಿಕ ತಾಣಗಳಲ್ಲಿ ನಿರಂತರವಾಗಿ ಬರುತ್ತಿರುವ ವರ್ಣಭೇದದ ನಿಂದನೆಗಳಿಗೆ ಟೀಮ್ ಇಂಡಿಯಾ ಎಡಗೈ ಆರಂಭಿಕ ಬ್ಯಾಟ್ಸ್​ಮನ್ ಅಭಿನವ್ ಮುಕುಂದ್ ಕಠಿಣ ಶಬ್ದಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಅಭಿನವ್ ಮುಕುಂದ್ ಮಾಡಿದ ಟ್ವೀಟ್, ರೆಕ್ಕೆ-ಪುಕ್ಕ ಪಡೆದು ದೊಡ್ಡ ಸುದ್ದಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ತಮಿಳುನಾಡು ಬ್ಯಾಟ್ಸ್​ಮನ್, ಟೀಮ್ ಇಂಡಿಯಾದ ಯಾವುದೇ ಆಟಗಾರನ ವಿರುದ್ಧ ಹೇಳಿರುವ ಮಾತು ಇದಲ್ಲ. ಸಾಮಾಜಿಕ ತಾಣಗಳಲ್ಲಿ ನನ್ನ ಚರ್ಮದ ಬಣ್ಣದ ಕುರಿತಾಗಿ ಉದ್ದೇಶಪೂರ್ವಕವಾಗಿ ಮಾತನಾಡುವವರ ವಿರುದ್ಧ ಈ ಟ್ವೀಟ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಶ್ರೀಲಂಕಾ ಪ್ರವಾಸದ ಭಾರತ ತಂಡದಲ್ಲಿರುವ ಅಭಿನವ್ ಮುಕುಂದ್ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಆಡಿದ್ದರು. 2ನೇ ಇನಿಂಗ್ಸ್​ನಲ್ಲಿ ಅಮೂಲ್ಯ 81 ರನ್ ಸಿಡಿಸುವ ಮೂಲಕ ತಂಡದ ಗೆಲುವಿಗೆ ನೆರವಾಗಿತ್ತು. ಈ ನಡುವೆ ತಮ್ಮ ಬಣ್ಣದ ಕುರಿತಾಗಿ ಟ್ವಿಟರ್, ಫೇಸ್​ಬುಕ್​ನಂಥ ತಾಣಗಳಿಂದ ಕೆಲ ಸಂದೇಶಗಳ ಬಂದ ಕುರಿತು ಬೇಸರ ವ್ಯಕ್ತಪಡಿಸಿರುವ ಅವರು, ಟ್ವಿಟರ್​ನಲ್ಲಿ ಭಾವನಾತ್ಮಕ ಸಂದೇಶವನ್ನು ಹಾಕಿದ್ದಾರೆ. ಮುಕುಂದ್​ರ ಟ್ವೀಟ್​ಗೆ ಅಭಿಮಾನಿಗಳು ಹಾಗೂ ಭಾರತೀಯ ಕ್ರೀಡಾತಾರೆಗಳಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಈ ವಿಷಯದ ಕುರಿತಾಗಿ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ಹೊಗಳಿದ್ದಾರೆ. ಬಂಗಾಳ ಕ್ರಿಕೆಟರ್ ಮನೋಜ್ ತಿವಾರಿ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆರ್. ಅಶ್ವಿನ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಕುಂದ್ ಮಾಡಿರುವ ಟ್ವೀಟ್ ಯಾರಿಗೆ ಸಂಬಂಧಪಟ್ಟಿದ್ದು ಎನ್ನುವ ವಿಚಾರಗಳು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವೇಳೆಯಲ್ಲಿಯೇ ಮತ್ತೆರಡು ಟ್ವೀಟ್​ನಲ್ಲಿ ಈ ವಿಷಯವನ್ನು ರಾಜಕೀಯಗೊಳಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ. ‘ಈ ವಿಷಯವನ್ನು ಬೇರೆ ರೀತಿ ವರ್ಗಾಯಿಸಬೇಡಿ. ಟೀಮ್ ಇಂಡಿಯಾದ ಯಾವುದೇ ಸದಸ್ಯರಿಗೂ ಹಾಗೂ ಈ ಟ್ವೀಟ್​ಗೂ ಸಂಬಂಧವಿಲ್ಲ. ಸಾಮಾಜಿಕ ತಾಣಗಳಲ್ಲಿ ಕುಹಕ ಮಾಡುವ ವ್ಯಕ್ತಿಗೆ ಸಂಬಂಧಪಟ್ಟಿದ್ದು’ ಎಂದಿದ್ದಾರೆ.

 

ಮುಕುಂದ್ ಟ್ವೀಟ್​ನಲ್ಲೇನಿದೆ…

ಆತ್ಮೀಯ ಸ್ನೇಹಿತರೆ ಹಾಗೂ ಫಾಲೋವರ್ಸ್ ಗಳೇ..

ನಾನು 10ನೇ ವರ್ಷದಿಂದಲೇ ಕ್ರಿಕೆಟ್​ಅನ್ನು ಆಡಲು ಆರಂಭಿಸಿದೆ. ಏಣಿಯ ಮೆಟ್ಟಿಲುಗಳನ್ನು ಕ್ರಮೇಣ ಏರಿ ಪ್ರಸ್ತುತ ಇರುವ ಹಂತದಲ್ಲಿ ನಿಂತಿದ್ದೇನೆ. ಅತ್ಯುನ್ನತ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುವುದು ಹೆಮ್ಮೆಯ ವಿಚಾರ. ಇಂದು ನಾನು ಬರೆಯುತ್ತಿರುವ ವಿಷಯ ಯಾರ ಅನುಕಂಪ ಅಥವಾ ಗಮನ ಪಡೆದುಕೊಳ್ಳುವುದಕ್ಕಲ್ಲ… ಬದಲಾಗಿ ನಾನು ಕಠಿಣವಾಗಿ ವಿರೋಧಿಸುವ ವಿಷಯದಲ್ಲಿ ಕೆಲ ಜನರ ಮಾನಸಿಕತೆ ಬದಲಾಗಲಿ ಎನ್ನುವ ನಿರೀಕ್ಷೆಯೊಂದಿಗೆ..

ನಾನು 15ನೇ ವರ್ಷದವನಾಗಿದ್ದಾಗಲೇ ದೇಶದ ಒಳಗೆ ಹಾಗೂ ದೇಶದ ಹೊರಗೆ ಸಾಕಷ್ಟು ಪ್ರಯಾಣ ಮಾಡುತ್ತಿದ್ದೆ. ಯುವಕನಾದ ಕ್ಷಣದಿಂದಲೂ, ನನ್ನ ಚರ್ಮದ ಬಣ್ಣದ ಕುರಿತಾಗಿ ಕೆಲ ಜನರ ಮನಸ್ಥಿತಿ ನನಗೆ ಬಹಳ ನಿಗೂಢವೆನಿಸುತ್ತಿತ್ತು. ಬಿರುಬಿಸಿಲನ್ನೂ ಲೆಕ್ಕಿಸದೆ ನನ್ನ ಆಟ ಹಾಗೂ ಅಭ್ಯಾಸ ಸಾಗುತ್ತಿತ್ತು. ಈ ಹಂತದಲ್ಲಿಯೇ ನನ್ನ ಚರ್ಮ ಕಪ್ಪಾಗಿದ್ದಲ್ಲದೆ, ಕೆಲವು ಶೇಡ್​ಗಳನ್ನು ಕಳೆದುಕೊಂಡಿದ್ದಕ್ಕೆ ಬೇಸರವಿದೆ.

ನಾನು ಮಾಡಬೇಕಾದ ಕೆಲಸವನ್ನು ಬಹಳ ಪ್ರೀತಿಸಿ ಮಾಡುತ್ತೇನೆ. ಅದರಿಂದ ಹೀಗಾಗಿದೆ. ದಿನಕ್ಕೆ ಗಂಟೆಗಟ್ಟಲೆ ಬಿಸಿಲಿನಲ್ಲಿ ಅಭ್ಯಾಸ ಮಾಡಿದ್ದರಿಂದಲೇ ಇಂದು ನಾನು ಏನು ಸಾಧನೆ ಮಾಡಿದ್ದೇನೋ ಅದನ್ನು ಸಾಧಿಸಲು ಸಾಧ್ಯವಾಗಿದೆ. ದೇಶದಲ್ಲಿ ಅತ್ಯಂತ ಬಿಸಿಲಿರುವ ಪ್ರದೇಶ ಎನಿಸಿಕೊಂಡಿರುವ ಚೆನ್ನೈನಿಂದ ಬಂದವನು ನಾನು. ಯೌವ್ವನದ ಬಹಳಷ್ಟು ಸಮಯವನ್ನು ಕ್ರಿಕೆಟ್ ಮೈದಾನದಲ್ಲಿಯೇ ಕಳೆದಿದ್ದೇನೆ. ಕಪು್ಪ ಬಣ್ಣದಿಂದಾಗಿ ಸಾಕಷ್ಟು ಅಡ್ಡಹೆಸರುಗಳಿಗೂ ನಾನು ಗುರಿಯಾಗಿದ್ದೇನೆ. ಇದಕ್ಕೆಲ್ಲ ನಾನು ನಕ್ಕು ಬಿಡುತ್ತಿದ್ದೆ. ಅದಕ್ಕೆ ಕಾರಣ ನನ್ನ ಮುಂದೆ ದೊಡ್ಡ ಗುರಿ ಇತ್ತು..!

ಇಂಥ ಅವಮಾನಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಬಹಳ ಸಮಯದಲ್ಲಿ ಅಂದುಕೊಂಡಿದ್ದೇನೆ. ಆದರೆ, ಸಾಮಾಜಿಕ ತಾಣಗಳು ಹೆಚ್ಚಾದ ಬಳಿಕ ಎಲ್ಲ ದಿಕ್ಕಿನಿಂದಲೂ ಜನರು ನಿಂದನೆ ಮಾಡುವುದನ್ನು ಕಾಣುತ್ತಿದ್ದೇನೆ. ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಬೆಳ್ಳಗಿರುವುದು ಮಾತ್ರವೇ ಚೆಲುವು ಹಾಗೂ ಅಂದವನ್ನು ನಿರ್ಧರಿಸುವುದಿಲ್ಲ. ನೀವು ನೀವಾಗಿರಿ.. ಗುರಿಯತ್ತ ಗಮನವಿರಲಿ.. ನಿಮ್ಮ ಚರ್ಮದ ಬಣ್ಣದ ಬಗ್ಗೆ ತೃಪ್ತರಾಗಿರಿ..

Leave a Reply

Your email address will not be published. Required fields are marked *

Back To Top