Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ಕನ್ನಡ ಚಿತ್ರಕ್ಕಾಗಿ ತಮಿಳು ಆಫರ್ ಕೈಬಿಟ್ಟ ದಿವ್ಯಾ

Thursday, 12.10.2017, 3:04 AM       No Comments

ಬೆಂಗಳೂರು: ಸಾಮಾನ್ಯವಾಗಿ ಪರಭಾಷೆಗಳಲ್ಲಿ ಸಿನಿಮಾ ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಎನ್ನುತ್ತಾರೆ. ಆದರೆ, ಇಲ್ಲೋರ್ವ ನಟಿ ತಮಿಳಿನಿಂದ ಅವಕಾಶ ಸಿಕ್ಕಿದ್ದರೂ, ಸ್ಯಾಂಡಲ್​ವುಡ್​ನಿಂದಲೇ ನನ್ನ ಸಿನಿಮಾ ಜೀವನ ಆರಂಭವಾಗಬೇಕು ಎಂಬ ಕಾರಣದಿಂದ ಬಂದ ಆಫರ್​ಗಳನ್ನು ತಿರಸ್ಕರಿಸಿದ್ದಾರೆ. ಅಲ್ಲದೆ, ಕನ್ನಡ ಸಿನಿಮಾಗೆ ನಾಯಕಿಯಾಗುವ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾರೆ. ಯಾರವರು? ಕೊಡಗಿನ ದಿವ್ಯಾ ಗೌಡ. ಸಿನಿಮಾಕ್ಕಿಂತ, ಧಾರಾವಾಹಿಗಳಲ್ಲಿ ನಟಿಸಿದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದರು ದಿವ್ಯಾ. ಅದರಂತೆ ‘ಸೇವಂತಿ ಸೇವಂತಿ’, ‘ಜೀವನಚೈತ್ರ’, ‘ಬಂಗಾರಿ’ ಧಾರಾವಾಹಿಗಳಲ್ಲಿ ನಟಿಸಿದ್ದರು ಕೂಡ. ಇದೀಗ ‘ಮನಸಿನ ಮರೆಯಲಿ’ ಹಾಗೂ ‘ವಿಷ್ಣು ಸರ್ಕಲ್’ ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.

ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಗಲೇ ತಮಿಳಿನ ಹಲವು ನಿರ್ದೇಶಕರು ಸಿನಿಮಾ ಆಫರ್ ನೀಡಿದ್ದರಂತೆ. ಆ ಅವಕಾಶಗಳನ್ನು ಮುಲಾಜಿಲ್ಲದೆ ಕೈ ಬಿಟ್ಟಿದ್ದರಂತೆ ದಿವ್ಯಾ. ‘ಸೀರಿಯಲ್​ನಲ್ಲಿದ್ದಾಗ ಹಲವು ತಮಿಳು ಅವಕಾಶಗಳು ಬಂದಿದ್ದವು. ಆದರೆ ನನಗೆ ಅವು ಬೇಡವಾಗಿದ್ದವು. ನನ್ನ ಮೊದಲ ಸಿನಿಮಾ ಕನ್ನಡದಲ್ಲಿಯೇ ಮೂಡಿಬರಬೇಕೆಂಬ ಆಸೆ ನನ್ನದಾಗಿತ್ತು. ಅದರಂತೆ ಇದೀಗ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ’ ಎಂದು ಕನ್ನಡ ಸಿನಿಮಾ ಬಗೆಗಿನ ಕಾಳಜಿ ವ್ಯಕ್ತಪಡಿಸುತ್ತಾರೆ ದಿವ್ಯಾ.

ಸೀರಿಯಲ್ ಬಗ್ಗೆಯೂ ಹೆಚ್ಚಿನ ವ್ಯಾಮೋಹವಿರುವ ದಿವ್ಯಾ, ‘ಸಿನಿಮಾ ಜತೆಗೆ ಧಾರಾವಾಹಿಗಳಲ್ಲೂ ಕೆಲಸ ಮಾಡುವ ಮನಸ್ಸಿದೆ. ಅದರಂತೆ ಅವಕಾಶಗಳು ಕೂಡಿ ಬಂದರೆ ಎರಡನ್ನೂ ನಿಭಾಯಿಸುತ್ತೇನೆ. ಐದಾರು ಕನ್ನಡ ಸಿನಿಮಾಗಳ ಬಳಿಕ ತಮಿಳು, ತೆಲುಗಿನಲ್ಲಿ ಅವಕಾಶ ಸಿಕ್ಕರೆ ಹೋಗುತ್ತೇನೆ’ ಎನ್ನುತ್ತಾರೆ.

ಸದ್ಯ ಆಸ್ಕರ್ ಕೃಷ್ಣ ನಿರ್ದೇಶನದ ‘ಮನಸಿನ ಮರೆಯಲಿ’ ಸಿನಿಮಾ ಶೂಟಿಂಗ್ ಶುರುವಾಗಿದೆ. ಮಳೆಯಿಂದಾಗಿ ‘ವಿಷ್ಣು ಸರ್ಕಲ್’ ಚಿತ್ರೀಕರಣ ಕೊಂಚ ಮುಂದೂಡಲಾಗಿದೆ.

Leave a Reply

Your email address will not be published. Required fields are marked *

Back To Top