Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಕನ್ನಡೇತರ ಚಿತ್ರಮಂದಿರಗಳಿಗೆ ಭರ್ಜರಿ ಲಗ್ಗೆ!

Wednesday, 13.09.2017, 3:03 AM       No Comments

ಬೆಂಗಳೂರು: ಧ್ರುವ ಸರ್ಜಾ, ರಚಿತಾ ರಾಮ್ ಹರಿಪ್ರಿಯಾ, ವೈಶಾಲಿ ದೀಪಕ್ ನಟನೆಯ ‘ಭರ್ಜರಿ’ ಚಿತ್ರ ಈಗಾಗಲೇ ಹಾಡು, ಟ್ರೇಲರ್ ಮೂಲಕ ಭಾರಿ ಸೌಂಡು ಮಾಡುತ್ತಿದೆ. ಇದೀಗ ಅದು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಬಿಡುಗಡೆಗೂ ಮುನ್ನವೇ ಗಡಿಭಾಗ ಹಾಗೂ ಕನ್ನಡೇತರ ಚಿತ್ರಮಂದಿರಗಳಲ್ಲಿಯೂ ಸದ್ದು ಮಾಡಲಾರಂಭಿಸಿದೆ. ಸುದೀರ್ಘ ಸಮಯದಿಂದ ಕನ್ನಡ ಚಿತ್ರಗಳ ಪ್ರದರ್ಶನ ಕಾಣದ ಚಿತ್ರಮಂದಿರಗಳಲ್ಲಿಯೂ ‘ಭರ್ಜರಿ’ ಬಿಡುಗಡೆ ಆಗಲಿದೆ. ಬೆಂಗಳೂರಿನ ರೆಕ್ಸ್, ಕಾವೇರಿ ಹಾಗೂ ಊರ್ವಶಿ ಥಿಯೇಟರ್​ಗಳಲ್ಲಿ ‘ಭರ್ಜರಿ’ ಬಿಡುಗಡೆಯಾಗಲಿರುವುದು ಕನ್ನಡ ಚಿತ್ರಪ್ರೇಮಿಗಳಲ್ಲಿ ಸಂತಸವನ್ನು ಉಂಟುಮಾಡಿದೆ. ಅದರಲ್ಲೂ ರೆಕ್ಸ್​ನಲ್ಲಿ ಬಿಡುಗಡೆ ಆಗಲಿರುವ ಮೂಲಕ, ‘ಭರ್ಜರಿ’ ಇಡೀ ಕನ್ನಡ ಚಿತ್ರರಂಗವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಏಕೆಂದರೆ ಬ್ರಿಗೇಡ್ ರಸ್ತೆಯಲ್ಲಿರುವ ಈ ಚಿತ್ರಮಂದಿರದಲ್ಲಿ ಹೆಚ್ಚು ಪ್ರದರ್ಶನವಾಗುವುದು ಇಂಗ್ಲಿಷ್ ಸಿನಿಮಾಗಳು. ಅದನ್ನು ಹೊರತುಪಡಿಸಿದರೆ ತೆಲುಗು, ತಮಿಳು ಮುಂತಾದ ಕನ್ನಡೇತರ ಚಿತ್ರಗಳು. ಆದರೆ ಇದೀಗ 18 ವರ್ಷಗಳ ಬಳಿಕ ಅಲ್ಲಿ ಮತ್ತೊಮ್ಮೆ ಕನ್ನಡ ಚಿತ್ರ ಪ್ರದರ್ಶನ ಕಾಣಲಿದೆ.

‘ರೆಕ್ಸ್​ನಲ್ಲಿ ಸಾಮಾನ್ಯವಾಗಿ ಇಂಗ್ಲಿಷ್ ಹಾಗೂ ಕನ್ನಡೇತರ ಚಿತ್ರಗಳೇ ಪ್ರದರ್ಶನ ಕಾಣುತ್ತವೆ. ಅದರಲ್ಲೂ 1999ರಲ್ಲಿ ತೆರೆಕಂಡ ‘ಎಕೆ-47’ ಚಿತ್ರದ ಬಳಿಕ ಅಲ್ಲಿ ಕನ್ನಡದ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಆದರೆ ಈಗ ‘ಭರ್ಜರಿ’ ರೆಕ್ಸ್​ಗೂ ಲಗ್ಗೆ ಇಟ್ಟಿದ್ದು, ಅಲ್ಲಿ ಕನ್ನಡದ ಸದ್ದು ಕೇಳುವಂತೆ ಮಾಡಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್​ಕುಮಾರ್.

ಅಲ್ಲದೆ, ಬೆಂಗಳೂರಿನಲ್ಲಿ ಕನ್ನಡೇತರ ಚಿತ್ರಗಳೇ ಹೆಚ್ಚಾಗಿ ಪ್ರದರ್ಶನ ಕಾಣುವ ಕಾವೇರಿ ಹಾಗೂ ಊರ್ವಶಿ ಚಿತ್ರಮಂದಿರಗಳಲ್ಲೂ ‘ಭರ್ಜರಿ’ ಪ್ರದರ್ಶನ ಕಾಣಲಿದೆ. ‘ಭರ್ಜರಿ’ಯ ಈ ಲಗ್ಗೆ ಗಡಿಪ್ರದೇಶಗಳಿಗೂ ವಿಸ್ತರಿಸಿದೆ. ಕೋಲಾರ, ಹೊಸಪೇಟೆ, ಮಂಗಳೂರು ಮುಂತಾದ ಗಡಿಪ್ರದೇಶಗಳಲ್ಲೂ ಕನ್ನಡೇತರ ಚಿತ್ರಗಳು ಪ್ರದರ್ಶನ ಕಾಣುವ ಚಿತ್ರಮಂದಿರಗಳಲ್ಲಿ ‘ಭರ್ಜರಿ’ ಬಿಡುಗಡೆ ಆಗಲಿದೆ ಎನ್ನುತ್ತಾರೆ ಚೇತನ್​ಕುಮಾರ್. ಇದರಿಂದಾಗಿ 30ಕ್ಕೂ ಅಧಿಕ ಹೆಚ್ಚುವರಿ ಚಿತ್ರಮಂದಿರಗಳು ಸಿಕ್ಕಂತಾಗಿದ್ದು, ಒಟ್ಟಾರೆ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಭರ್ಜರಿ’ ಬಿಡುಗಡೆ ಆಗಲಿದೆಯಂತೆ. ಇನ್ನು, ಉತ್ತಮ ಬೆಲೆಗೆ ಚಿತ್ರದ ಟಿವಿ ಪ್ರಸಾರದ ಹಕ್ಕು ಹಾಗೂ ಹಿಂದಿ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿವೆಯಂತೆ.

ನಾವು ‘ಬಹದ್ದೂರ್’ ಸಿನಿಮಾ ಸಂದರ್ಭದಲ್ಲೂ ರೆಕ್ಸ್​ನಲ್ಲಿ ಬಿಡುಗಡೆಗೆ ಅವಕಾಶ ಕೋರಿದ್ದೆವು. ಆದರೆ ಆಗ ಅದು ಸಾಧ್ಯವಾಗಿರಲಿಲ್ಲ. ಅಂದಿನಂತೆ ಈ ಬಾರಿಯೂ ನಾವು ಕೇಳಿದ್ದಷ್ಟೇ ಅಲ್ಲ, ಅವರಿಂದಲೂ ಆ ಬಗ್ಗೆ ಒಲವು ವ್ಯಕ್ತವಾಗಿತ್ತು. ಇತ್ತೀಚೆಗೆ ಕನ್ನಡ ಚಿತ್ರಗಳ ಗುಣಮಟ್ಟ ಅತ್ಯುತ್ತ್ತು ಆಗಿರುವುದರಿಂದ ಹಾಗೂ ಟ್ಯಾಕ್ಸ್ ಫ್ರೀ ವ್ಯವಸ್ಥೆ ಬಂದಿರುವುದರಿಂದ ಕನ್ನಡೇತರ ಚಿತ್ರಮಂದಿರಗಳಲ್ಲೂ ಕನ್ನಡ ಸಿನಿಮಾಗೆ ಬೇಡಿಕೆ ಬರುತ್ತಿದೆ.

| ಚೇತನ್​ಕುಮಾರ್ ನಿರ್ದೇಶಕ

 

Leave a Reply

Your email address will not be published. Required fields are marked *

Back To Top