Thursday, 29th June 2017  

Vijayavani

1. ಗಣಿಗಾರಿಕೆ ವಿರುದ್ಧದ ಕ್ರಮಕ್ಕೆ ವರ್ಗಾವಣೆ ಭಾಗ್ಯ- ಒಂದೇ ತಿಂಗಳಿಗೆ ಕುಣಿಗಲ್​​​​​​ ತಹಶೀಲ್ದಾರ್​​​ ಟ್ರಾನ್ಸ್​​ಫರ್​​- ಅಕ್ರಮ ಗಣಿಗಾರಿಕೆ ಸುದ್ದಿ ಭಿತ್ತರಿಸಿದ್ದ ದಿಗ್ವಿಜಯ ನ್ಯೂಸ್​ 2. ಮುಂದಿನ ಸಿಎಂ ಅಭ್ಯರ್ಥಿ ಕುರಿತು ಚರ್ಚೆಯಾಗಿಲ್ಲ- ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ- ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಎಸ್​.ಆರ್​.ಪಾಟೀಲ್​​ ವಿಶ್ವಾಸ 3. ಪತ್ರಕರ್ತ ರವಿ ಬೆಳೆಗೆರೆ ಜೈಲು ಶಿಕ್ಷೆ ವಿಚಾರ- ಸಿಎಂ ಮನವಿ ಮೇರೆಗೆ ಬಂಧಿಸದಂತೆ ಸೂಚನೆ- ಪೊಲೀಸರಿಗೆ ಸೂಚನೆ ನೀಡಿದ ಸ್ಪೀಕರ್​​​​​​​ ಕೋಳಿವಾಡ 4. ಕಲಬುರಗಿಯಲ್ಲಿ ಸರಣಿ ಕಳ್ಳತನ- ಹಲವು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಕಳುವು- ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಸೆರೆ 5. ಪ್ರಧಾನಿಗೆ ಮುಜುಗರ ತಂದ ಕೇಂದ್ರ ಕೃಷಿ ಸಚಿವ- ಸಾರ್ವಜನಿಕ ಸ್ಥಳದಲ್ಲಿ ಸಚಿವರ ಮೂತ್ರ ವಿಸರ್ಜನೆ- ರಾಧಾ ಮೋಹನ್​ ಸಿಂಗ್​ ನಡೆಗೆ ವ್ಯಾಪಕ ಖಂಡನೆ
Breaking News :

ಕಟ್ಟಪ್ಪ ಕ್ಷಮೆಗೆ ಪಟ್ಟು

Friday, 21.04.2017, 3:04 AM       No Comments

ಬೆಂಗಳೂರು: ನೂರಾರು ಕೋಟಿ ರೂ.ವೆಚ್ಚದ ಬಹುನಿರೀಕ್ಷಿತ ಬಹುಭಾಷಾ ಚಿತ್ರ ‘ಬಾಹುಬಲಿ-2’ ಬಿಡುಗಡೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ಮುಂದುವರಿದಿದೆ. ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕ್ಷಮೆ ಯಾಚಿಸುವವರೆಗೆ ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಏ. 28ರಂದು ಬೆಂಗಳೂರು ಬಂದ್​ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಚಿತ್ರದ ಬಿಡುಗಡೆಗೆ ಇನ್ನೊಂದು ವಾರ ಇರುವಂತೆಯೇ ಕನ್ನಡಿಗರ ಮನವೊಲಿಸಲು ಗುರುವಾರ ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ನಡೆಸಿರುವ ಪ್ರಯತ್ನವೂ ಫಲನೀಡಿಲ್ಲ.

ಸತ್ಯರಾಜ್ ಹೇಳಿಕೆಗೂ, ಬಾಹುಬಲಿ ಚಿತ್ರಕ್ಕೂ ಸಂಬಂಧವಿಲ್ಲ. ದಯವಿಟ್ಟು ನಮ್ಮ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಿ ಎಂದು ರಾಜಮೌಳಿ ಗುರುವಾರ ಒಂದೂವರೆ ನಿಮಿಷದ ವಿಡಿಯೋ ಬಿಡುಗಡೆ ಮಾಡಿದರು. ವಿಡಿಯೋ ಮೂಲಕ ಕನ್ನಡದಲ್ಲಿಯೇ ಮನವಿ ಮಾಡಿರುವ ರಾಜಮೌಳಿ, ‘ಸತ್ಯರಾಜ್ ಹೇಳಿಕೆಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಅವರು ಒಂದು ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಅದಕ್ಕಾಗಿ ಸಂಭಾವನೆ ಪಡೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯದಿಂದಾಗಿ, ಆತ ನಟಿಸಿರುವ ಸಿನಿಮಾಕ್ಕೆ ತೊಂದರೆ ಆಗಬಾರದು’ ಎಂದಿದ್ದಾರೆ. ಈ ಬಗ್ಗೆ ಸತ್ಯರಾಜ್​ಗೆ ದೂರವಾಣಿ ಕರೆಮಾಡಿ ಮಾತನಾಡಲಾಗಿದೆ ಎಂದೂ ಚಿತ್ರತಂಡ ಹೇಳಿಕೊಂಡಿದೆ. ಆದರೆ ರಾಜಮೌಳಿ ಮನವಿಯನ್ನು ತಿರಸ್ಕರಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡಪರ ಸಂಘಟನೆಗಳು ಖುದ್ದು ಸತ್ಯರಾಜ್ ಕ್ಷಮೆಕೇಳದ ಹೊರತು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಕಟ್ಟಪ್ಪನಿಗೇಕೆ ವಿರೋಧ

 • ಹೊಗೇನಕಲ್​ನಲ್ಲಿ ಸೇತುವೆ ನಿರ್ವಿುಸಲು ಕರ್ನಾಟಕದ ವಿರೋಧ
 • ಕರ್ನಾಟಕದ ವಿರುದ್ಧ ತಮಿಳು ನಟರಿಂದ 2008ರಲ್ಲಿ ಪ್ರತಿಭಟನೆ
 • ಪ್ರತಿಭಟನಾ ರ್ಯಾಲಿಯಲ್ಲಿ ಕನ್ನಡಿಗರ ವಿರುದ್ಧ ಸತ್ಯರಾಜ್ ಭಾಷಣ
 • ಅವಾಚ್ಯ ಶಬ್ದಗಳನ್ನು ಬಳಸಿ ಕನ್ನಡ ಮತ್ತು ಕನ್ನಡಿಗರ ಅವಹೇಳನ
 • ಕನ್ನಡಿಗರನ್ನು ನಾಯಿಗೆ ಹೋಲಿಸಿ, ಅವಹೇಳನ ಮಾಡಿದ್ದ ಸತ್ಯರಾಜ್
 • ಕನ್ನಡಿಗರ ವಿರುದ್ಧ ಸತ್ಯರಾಜ್ ಪ್ರಚೋದನಾಕಾರಿ ಭಾಷಣ ಮಾಡಿದ್ದರು
 • ತಮಿಳುನಾಡಿನಲ್ಲಿರುವ ಕನ್ನಡಿಗರ ವಿರುದ್ಧ ತಮಿಳರನ್ನು ಎತ್ತಿ ಕಟ್ಟಲು ಹುನ್ನಾರ
 • ಕನ್ನಡಿಗರು ಭಾರತದಲ್ಲಿಯೇ ಅತ್ಯಂತ ಅಸಹಿಷ್ಣುಗಳು ಎಂದಿದ್ದ ಸತ್ಯರಾಜ್

ಬಾಹುಬಲಿ -1 ದಿ ಬಿಗಿನಿಂಗ್

 • ಚಿತ್ರೀಕರಣ ಭಾಷೆ- ತೆಲುಗು, ತಮಿಳು
 • ಬಿಡುಗಡೆ-ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಿ
 • ತಾರಾಗಣ-ಪ್ರಭಾಸ್, ರಾಣ ದಗ್ಗುಬಟ್ಟಿ, ತಮನ್ನಾ,ಅನುಷ್ಕಾ ಶೆಟ್ಟಿ, ಸತ್ಯರಾಜ್, ರಮ್ಯಕೃಷ್ಣ, ಸುದೀಪ್
 • ಸಿನಿಮಾ ವೆಚ್ಚ-180 ಕೋಟಿ ರೂ.
 • ಬಿಡುಗಡೆ ದಿನಾಂಕ-2015ರ ಜುಲೈ 10
 • 650 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದ ದಕ್ಷಿಣ ಭಾರತದ ಮೊದಲ ಸಿನಿಮಾ
 • ಬಿಡುಗಡೆ-ತೆಲುಗಿನಲ್ಲಿ 1600, ಹಿಂದಿಯಲ್ಲಿ 1,500, ತಮಿಳಿನಲ್ಲಿ 350 ಹಾಗೂ ಮಲೆಯಾಳದಲ್ಲಿ 225 ಸ್ಕ್ರೀನ್​ಗಳಲ್ಲಿ ಬಿಡುಗಡೆ
 • ಅಮೆರಿಕದಲ್ಲಿ 135 ಥಿಯೇಟರ್​ಗಳಲ್ಲಿ ಬಿಡುಗಡೆ

ಬಾಹುಬಲಿ-2 ದಿ ಕನ್​ಕ್ಲೂಷನ್

 • ಚಿತ್ರೀಕರಣ ಬಜೆಟ್-250 ಕೋಟಿರೂ.ಗೂ ಹೆಚ್ಚು
 • ಬಿಡುಗಡೆ ದಿನಾಂಕ-ವಿಶ್ವದಾದ್ಯಂತ 2017ರ ಏಪ್ರಿಲ್ 28
 • ವಿಶೇಷತೆ-4ಕೆ ಹೈ ಡೆಫಿನಿಷನ್ ಫಾರ್ವಟ್​ನಲ್ಲಿ ಬಿಡುಗಡೆಯಾಗುತ್ತಿರುವ
 • ಮೊದಲ ಚಿತ್ರ
 • ಚಿತ್ರೀಕರಣ ಭಾಷೆ-ತೆಲುಗು, ತಮಿಳು
 • ಸೆಟಲೈಟ್ ಹಾಗೂ ಥಿಯೇಟರ್ ಹಕ್ಕಿನಿಂದ ಬಿಡುಗಡೆ ಮುನ್ನ 500 ಕೋಟಿ ರೂ. ಲಾಭ ತಾರಾಗಣ-ಪ್ರಭಾಸ್, ರಾಣ ದಗ್ಗುಬಾಟಿ, ತಮನ್ನಾ,ಅನುಷ್ಕಾ ಶೆಟ್ಟಿ, ಸತ್ಯರಾಜ್, ರಮ್ಯಕೃಷ್ಣ

ರಾಜಮೌಳಿ ಕ್ಷಮೆ ಯಾಚಿಸಿದರೆ ಸಾಲದು. ಸತ್ಯರಾಜ್ ನೇರವಾಗಿ ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ಬಾಹುಬಲಿ-2 ಅಥವಾ ಸತ್ಯರಾಜ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ.

| ಸಾ.ರಾ.ಗೋವಿಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

Leave a Reply

Your email address will not be published. Required fields are marked *

seventeen − eleven =

Back To Top