Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ಕಂಬ ನೆಡಲು ವಿರೋಧಿಸದಿರಿ

Thursday, 12.07.2018, 3:43 AM       No Comments

ಚನ್ನರಾಯಪಟ್ಟಣ: ರೈತರು ಹಾಗೂ ಸಾರ್ವಜನಿಕರು ಸಮರ್ಪಕ ವಿದ್ಯುತ್​ಬೇಕೆಂದು ಕೋರುತ್ತಾರೆ. ಆದರೆ ಜಮೀನು, ಮನೆ ಮುಂದೆ ಕಂಬ ಹಾಕುವುದು ಬೇಡವೆನ್ನುತ್ತಾರೆ. ಇಂತಹ ಧೋರಣೆ ಸರಿಯಲ್ಲ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಚನ್ನರಾಯಪಟ್ಟಣದಲ್ಲಿ ಕೆಪಿಟಿಸಿಎಲ್​ನಿಂದ 9 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿರುವ 11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ವಿದ್ಯುತ್ ಘಟಕ ಸ್ಥಾಪನೆಯಿಂದ 25 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗಲಿದೆ. ವಿದ್ಯುತ್ ಕಂಬ ಅಳವಡಿಸುವ ಜಾಗಕ್ಕೆ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿ, ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು.

ಜಿಪಂ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದ ಈ ಭಾಗದ ರೈತರಿಗೆ ಘಟಕ ನಿರ್ವಣದಿಂದ ಅನುಕೂಲವಾಗಲಿದೆ ಎಂದರು.

ತಾಪಂ ಸದಸ್ಯ ವೆಂಕಟೇಶ್ ಮಾತನಾಡಿ, ಈ ಭಾಗದ ರೈತರ ಕೊಳವೆಬಾವಿಗಳಿಗೆ 24 ಗಂಟೆ ವಿದ್ಯುತ್ ನೀಡಿದರೆ ಅಂತರ್ಜಲಮಟ್ಟ ಸಂಪೂರ್ಣ ಕುಸಿಯುತ್ತದೆ. ಆದ್ದರಿಂದ ಎಚ್.ಎನ್.ವ್ಯಾಲಿ, ಎತ್ತಿನ ಹೊಳೆ ಯೋಜನೆ ಸಂಪೂರ್ಣಗೊಂಡು, ಕೆರಗಳಿಗೆ ನೀರು ಪೂರೈಕೆಯಾದ ನಂತರ ವಿದ್ಯುತ್ ನೀಡಲಿ, ಅದುವರೆವಿಗೂ ಭಾಗ್ಯಜ್ಯೋತಿ ಮತ್ತಿತರೆ ಗೃಹಬಳಕೆಗಳಿಗೆ ಮಾತ್ರ 24 ಗಂಟೆ ವಿದ್ಯುತ್ ನೀಡಿ, ಹಗಲಿನಲ್ಲಿ ರೈತರಿಗೆ 10 ಗಂಟೆ ವಿದ್ಯುತ್ ನೀಡಲಿ ಎಂದರು.

ಕೆಪಿಟಿಸಿಎಲ್ ಸೂಪರಿಡೆಂಟ್ ಸತ್ಯನಾರಾಯಣ ಮಾತನಾಡಿ, 11 ಕೆವಿ ವಿದ್ಯುತ್ ವಿತರಣಾ ಕೇಂದ್ರದೊಂದಿಗೆ 7.9 ಕಿಮೀ ವ್ಯಾಪ್ತಿಯಲ್ಲಿ 66/11 ಕೆ.ವಿ. ವಿದ್ಯುತ್ ಮಾರ್ಗವನ್ನು ನಿರ್ವಿುಸಲಾಗುತ್ತಿದ್ದು, ಈ ಉಪಕೇಂದ್ರ ನಿರ್ವಣವಾದ ನಂತರ ಮಂಡಿಬೆಲೆ, ಚನ್ನರಾಯಪಟ್ಟಣ, ಯಲಿಯೂರು, ದಿನ್ನೂರು, ಪಾಪನಹಳ್ಳಿ ಮುಂತಾಗಿ 25 ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಸಹಕಾರಿಯಾಗುವುದು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರವೀಂದ್ರ, ದೇವನಹಳ್ಳಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೋಮತ್ತನಹಳ್ಳಿ ಮಂಜುನಾಥ್,ತಾಪಂ ಸದಸ್ಯರಾದ ಮಹೇಶ್, ಗೋಪಾಲಸ್ವಾಮಿ, ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷೆ ಮಂಜುಳಮ್ಮಮಂಜುನಾಥ್, ಕೆಪಿಸಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಅಕ್ಕಯ್ಯಮ್ಮ ಸಿ.ಮುನಿಯಪ್ಪ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಮುನೇಗೌಡ, ಟಿಎಪಿಎಂಎಸ್​ಸಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಹಾಪ್​ಕಾಮ್್ಸ ನಿರ್ದೇಶಕ ಹುರಳಗುರ್ಕಿ ಶ್ರೀನಿವಾಸ್, ವಿಎಸ್​ಎಸ್​ಎನ್ ಅಧ್ಯಕ್ಷ ಬಾಬು, ಉಪಾಧ್ಯಕ್ಷ ಮಾರೇಗೌಡ, ಬೆಸ್ಕಾಂ ಇಇ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back To Top