Saturday, 18th November 2017  

Vijayavani

1. ಮುಷ್ಕರ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಎಂ ಸಭೆ- ವೈದ್ಯಕೀಯ ಸಂಘದ ಜತೆ ಮೀಟಿಂಗ್- ಬಗೆಹರಿಯುತ್ತಾ ಖಾಸಗಿ ವಿಧೇಯಕ ಗೊಂದಲ 2. ಖಾಸಗಿ ವೈದ್ಯರ ಮುಷ್ಕರ ವಿಚಾರ- ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ- ಖಡಕ್‌ ಸೂಚನೆ ನೀಡುತ್ತಾ ಹೈಕೋರ್ಟ್..? 3. ಐದನೇ ದಿನ, ಬಲಿಯಾದವರು ಹನ್ನೊಂದು ಜನ- ವೈದ್ಯರ ಮುಷ್ಕರಕ್ಕೆ ಅಮಾಯಕರ ಸಾವು- ಪ್ರತಿಷ್ಠೆ ಬಿಡಿ, ಕರ್ತವ್ಯಕ್ಕೆ ಬನ್ನಿ 4. ಕಾವೇರಿ ಬಳಿಕ ತಮಿಳುನಾಡು ಮತ್ತೊಂದು ಕ್ಯಾತೆ- ಮೈಸೂರು ಪಾಕ ತಮ್ಮದೆಂದು ವಾದ- ಸೋಷಿಯಲ್ ಮೀಡಿಯಾದಲ್ಲಿ ಶುರು ಸಿಹಿ ಸಮರ 5. ಪತ್ರಕರ್ತೆ ಮೇಲೆ ಎರಗಿದ ಕಿಡಿಗೇಡಿ- ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಲೈಂಗಿಕ ಕಿರುಕುಳ- ಸಿಸಿಟಿವಿ ಆಧರಿಸಿ ಆರೋಪಿ ಸೆರೆ
Breaking News :

ಕಂಪ್ಯೂಟರ್ ಜೊತೆ ಮಾತು-ಕತೆ!

Sunday, 20.08.2017, 3:00 AM       No Comments

| ಟಿ.ಜಿ. ಶ್ರೀನಿಧಿ

ಕಂಪ್ಯೂಟರಿನೊಡನೆ ನಮ್ಮ ಒಡನಾಟದ ಬಹುಪಾಲು ಕೀಲಿಮಣೆ ಹಾಗೂ ಮೌಸ್ ಮೂಲಕವೇ ನಡೆಯುವುದು ಸಾಮಾನ್ಯ. ಮೊಬೈಲ್ ಫೋನುಗಳಲ್ಲೂ ಅಷ್ಟೇ: ಕರೆಮಾಡಬೇಕಾದ ಸಂಖ್ಯೆಯನ್ನು ಒತ್ತಲು, ಸಂದೇಶಗಳನ್ನು ಟೈಪ್ ಮಾಡಲು, ಆಪ್ ಬಳಸಲು ನಾವು ಕೀಲಿಮಣೆಯನ್ನೇ ಹೆಚ್ಚಾಗಿ ಬಳಸುತ್ತೇವೆ. ಕೀಲಿಮಣೆಯಿಲ್ಲದ ಸ್ಮಾರ್ಟ್ ವಾಚ್​ನಂತಹ ಸಾಧನಗಳಲ್ಲೂ ನಮ್ಮ ಕೆಲಸ ಸಾಗಬೇಕಾದರೆ ಪರದೆಯನ್ನು ರ್ಸ³ಸುವುದು, ಬೇಕಾದ ಸೌಲಭ್ಯವನ್ನು ಆಯ್ದುಕೊಳ್ಳುವುದು ಅನಿವಾರ್ಯ.

ಇದರ ಅರ್ಥ ಇಷ್ಟೇ, ಯಂತ್ರಗಳ ಜೊತೆಗಿನ ನಮ್ಮ ಸಂವಹನ ಇಂದಿಗೂ ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಅವಲಂಬಿಸಿದೆ. ಕೀಲಿಮಣೆಯ ಕೀಲಿಗಳನ್ನು ಒತ್ತುವುದು, ಟಚ್ ಸ್ಕ್ರೀನ್ ಮೇಲಿನ ಸಂಕೇತಗಳನ್ನು ರ್ಸ³ಸುವುದೆಲ್ಲ ಈ ಬಗೆಯ ಸಂವಹನದ್ದೇ ಉದಾಹರಣೆಗಳು. ಹೀಗೇಕೆ? ಇತರ ಮನುಷ್ಯರೊಡನೆ ಮಾತನಾಡುವಂತೆ ನಾವು ಯಂತ್ರಗಳೊಡನೆ ಮಾತನಾಡುವುದು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಇದನ್ನು ಸಾಧ್ಯವಾಗಿಸುವ ತಂತ್ರಜ್ಞಾನವೇ ಸ್ಪೀಚ್ ರೆಕಗ್ನಿಶನ್. ನಾವು ಏನು ಹೇಳುತ್ತಿದ್ದೇವೆ ಎಂದು ಗುರುತಿಸಿ, ಅದನ್ನು ಅರ್ಥೈಸಿಕೊಂಡು, ನಿರ್ದಿಷ್ಟ ಕೆಲಸ ಕೈಗೊಳ್ಳುವಂತೆ ಕಂಪ್ಯೂಟರಿಗೋ ಸ್ಮಾರ್ಟ್​ಫೋನಿಗೋ ನಿರ್ದೇಶಿಸುವುದನ್ನು ಈ ತಂತ್ರಜ್ಞಾನ ಸಾಧ್ಯವಾಗಿಸುತ್ತದೆ. ಸಾಧನಗಳನ್ನು, ತಂತ್ರಾಂಶಗಳನ್ನು ಹೆಚ್ಚು ಗ್ರಾಹಕ ಸ್ನೇಹಿಯಾಗಿಸುವಲ್ಲಿ, ಬಳಕೆದಾರರ ಉತ್ಪಾದಕತೆ ಹೆಚ್ಚಿಸುವಲ್ಲಿ ಈ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಮಿಲಿಟರಿ, ರೋಬಾಟಿಕ್ಸ್, ವೈದ್ಯಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸ್ಪೀಚ್ ರೆಕಗ್ನಿಶನ್ ಬಳಕೆಯಾಗುತ್ತದೆ.

ದೈಹಿಕ ಸಮಸ್ಯೆಗಳಿಂದ ಕೀಬೋರ್ಡ್-ಮೌಸ್ ಇತ್ಯಾದಿಗಳನ್ನು ಬಳಸಲು ಸಾಧ್ಯವಿಲ್ಲದವರಿಗೂ ಇದು ಅನುಕೂಲಕರ. ಧ್ವನಿರೂಪದ ಮಾಹಿತಿಯನ್ನು (ದೂರವಾಣಿ ಕರೆ, ಭಾಷಣ ಇತ್ಯಾದಿ) ಪಠ್ಯರೂಪಕ್ಕೆ ಪರಿವರ್ತಿಸುವಲ್ಲೂ ಈ ತಂತ್ರಜ್ಞಾನವನ್ನು ಬಳಸಬಹುದು. ನಮ್ಮ ಮಾತುಗಳನ್ನು ಬೇರೆಯವರಿಂದ ಬರೆಸಿದಂತೆಯೇ(ಉಕ್ತಲೇಖನ) ಕೆಲಸಮಾಡುವ ಇಂತಹ ತಂತ್ರಾಂಶಗಳನ್ನು ‘ಸ್ಪೀಚ್ ಟು ಟೆಕ್ಸ್ಟ್’ ತಂತ್ರಾಂಶಗಳೆಂದು ಕರೆಯುತ್ತಾರೆ. ಬೇರೊಬ್ಬ ವ್ಯಕ್ತಿ ಬರೆದುಕೊಳ್ಳುವ ಬದಲಿಗೆ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಇಲ್ಲಿ ಆ ಕೆಲಸ ಮಾಡುತ್ತದೆ ಎನ್ನುವುದಷ್ಟೇ ವ್ಯತ್ಯಾಸ. ಈಚೆಗೆ ಪರಿಚಯವಾದ ‘ಲಿಪಿಕಾರ್’ ತಂತ್ರಾಂಶ ಕನ್ನಡದಲ್ಲಿರುವ ಇಂತಹ ಸೌಲಭ್ಯಗಳಿಗೆ ಒಂದು ಉದಾಹರಣೆ. ಲಿಪಿಕಾರ್ ಬೆನ್ನಲ್ಲೇ ಇದೀಗ ಆಂಡ್ರಾಯ್್ಡ ಗೂಗಲ್ ಕೀಲಿಮಣೆಯಲ್ಲೂ ಕನ್ನಡ ಸ್ಪೀಚ್-ಟು-ಟೆಕ್ಸ್ಟ್ ಸೌಲಭ್ಯ ಬಂದಿದೆ, ಇಂಡಸ್ ಓಎಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಫೋನುಗಳಲ್ಲೂ ಈ ಸೌಲಭ್ಯ ಒದಗಿಸಲಾಗಿದೆ. ಲಿಪಿಕಾರ್ ಹಾಗೂ ಇಂಡಸ್ ಓಎಸ್​ನ ತಂತ್ರಾಂಶಗಳಲ್ಲಿ ಧ್ವನಿಯನ್ನು ಗುರುತಿಸುವ ತಂತ್ರಜ್ಞಾನವನ್ನು ರೂಪಿಸಿದ್ದು ಬೆಂಗಳೂರು ಮೂಲದ ್ಝಡ.ಚಜಿ ಎಂಬ ಸಂಸ್ಥೆ. ಈ ಸಂಸ್ಥೆ ಕನ್ನಡವೂ ಸೇರಿದಂತೆ ಒಟ್ಟು ಒಂಬತ್ತು ಭಾರತೀಯ ಭಾಷೆಗಳಲ್ಲಿ ಸ್ಪೀಚ್ ಟು ಟೆಕ್ಸ್ ್ಟ ತಂತ್ರಜ್ಞಾನವನ್ನು ರೂಪಿಸಿದೆ. ಲಿಪಿಕಾರ್​ನಂತಹ ಕೀಲಿಮಣೆ ತಂತ್ರಾಂಶಗಳಲ್ಲಷ್ಟೇ ಅಲ್ಲದೆ ಗ್ರಾಹಕ ಸೇವೆಗಳ ಯಾಂತ್ರೀಕರಣ (Customer care automation)), ಧ್ವನಿರೂಪದ ದಾಖಲೆಗಳ ವಿಶ್ಲೇಷಣೆ (Speech analytics) ಮುಂತಾದ ಕ್ಷೇತ್ರಗಳಲ್ಲೂ ಈ ತಂತ್ರಜ್ಞಾನ ಉಪಯುಕ್ತವಾಗಬಲ್ಲದು ಎನ್ನುವುದು ಆ ಸಂಸ್ಥೆಯ ಅಭಿಪ್ರಾಯ. ಹೌದು, ಸ್ಮಾರ್ಟ್ ಫೋನ್ – ಸ್ಮಾರ್ಟ್​ವಾಚ್ ಮುಂತಾದ ಅನೇಕ ಸಾಧನಗಳಲ್ಲಿ ಈ ತಂತ್ರಜ್ಞಾನದ ಬಳಕೆ ಈಗಾಗಲೇ ಆಗುತ್ತಿದೆ. ಆಂಡ್ರಾಯ್್ಡ

‘ಓಕೆ ಗೂಗಲ್’ ಹಾಗೂ ಗೂಗಲ್ ಅಸಿಸ್ಟೆಂಟ್, ಆಪಲ್​ನ ‘ಸಿರಿ’, ಅಮೆಜಾನ್​ನ ‘ಅಲೆಕ್ಸಾ’ ಹಾಗೂ ಮೈಕ್ರೋಸಾಫ್ಟ್​ನ ‘ಕೊರ್ಟಾನಾ’ ಸ್ಪೀಚ್ ರೆಕಗ್ನಿಶನ್ ತಂತ್ರಜ್ಞಾನ ಬಳಸುತ್ತಿರುವ ಇಂತಹ ಸೌಲಭ್ಯಗಳಿಗೆ ಪ್ರಮುಖ ಉದಾಹರಣೆಗಳು. ನಿರ್ದಿಷ್ಟ ಆಪ್ ತೆರೆಯುವುದು, ದೂರವಾಣಿ ಕರೆ ಮಾಡುವುದು, ಸಂದೇಶ ಕಳುಹಿಸುವುದು, ಅಗತ್ಯ ಮಾಹಿತಿ ಹುಡುಕುವುದು, ಮಾಡಬೇಕಾದ ಕೆಲಸಗಳನ್ನು ಗುರುತಿಟ್ಟುಕೊಳ್ಳುವುದು – ಹೀಗೆ ಹಲವಾರು ಉದ್ದೇಶಗಳಿಗೆ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ನಾವು ಹೇಳಿದ ಪದದ ಅರ್ಥವನ್ನೋ ಇತರ ಭಾಷೆಗಳಲ್ಲಿ ಅದರ ಅನುವಾದವನ್ನೋ ಪಡೆದುಕೊಳ್ಳಲೂ ಈ ಸೌಲಭ್ಯಗಳು ನೆರವಾಗುತ್ತವೆ (good morning in Kannada’ ಎಂದು ಗೂಗಲ್ ಅಸಿಸ್ಟೆಂಟ್​ಗೆ ಹೇಳಿದರೆ ‘ಶುಭೋದಯ’ ನಮ್ಮೆದುರು ಕಾಣಿಸಿಕೊಳ್ಳುತ್ತದೆ, ಬೇಕಿದ್ದರೆ ಪ್ರಯತ್ನಿಸಿ ನೋಡಿ!). ಗೂಗಲ್ ತಾಣದಲ್ಲಿ ಮಾಹಿತಿಗಾಗಿ ಹುಡುಕಾಡುವುದು ನಮಗೆ ಗೊತ್ತೇ ಇದೆಯಲ್ಲ, ಕೀವರ್ಡ್ ಅಥವಾ ಹುಡುಕುಪದಗಳನ್ನು ಟೈಪ್ ಮಾಡುವ ಬದಲಿಗೆ ಅವನ್ನು ಧ್ವನಿರೂಪದಲ್ಲೇ ಹೇಳುವುದು ಕೂಡ ಸಾಧ್ಯವಿದೆ.

ನಿಮ್ಮ ಆಂಡ್ರಾಯ್ಡ್ ಮೊಬೈಲಿನ ಗೂಗಲ್ ಆಪ್ ತೆರೆದು ಅದರಲ್ಲಿರುವ ಮೈಕ್ ಚಿಹ್ನೆಯನ್ನು ಒತ್ತಿದರೆ ಸಾಕು, ಅದು ನಿಮ್ಮ ಮಾತು ಕೇಳಲು ಸಿದ್ಧವಾಗುತ್ತದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಇದೀಗ ನಾವು ಗೂಗಲ್ ಜೊತೆ ಮಾತನಾಡಬಹುದು! (ನೆನಪಿಡಿ: ಕನ್ನಡದಲ್ಲಿ ಮಾತನಾಡಿದ್ದು ಗೂಗಲ್​ಗೆ ಅರ್ಥವಾಗಬೇಕಾದರೆ ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಫೋನಿನ ಸೆಟಿಂಗ್ಸ್ ಗೂಗಲ್ ಸೆಟಿಂಗ್ಸ್ ಸರ್ಚ್ ವಾಯ್ಸ್ ಲ್ಯಾಂಗ್ವೇಜಸ್ ಅಡಿಯಲ್ಲಿ ಕನ್ನಡವನ್ನು ಆರಿಸಿಕೊಂಡಿರಬೇಕು; ಈ ಮೂಲಕ ಗೂಗಲ್ ಕೀಲಿಮಣೆಯಲ್ಲಿ ಕನ್ನಡ ಸ್ಪೀಚ್-ಟು-ಟೆಕ್ಸ್ ್ಟ ಸೌಲಭ್ಯ ಬಳಸುವುದೂ ಸಾಧ್ಯವಾಗುತ್ತದೆ)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top