Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಕಂಡಕ್ಟರ್, ಡ್ರೖೆವರ್​ಗಳಿಗೆ ಆನ್​ಲೈನ್​ನಲ್ಲೇ ರಜೆ!

Monday, 28.08.2017, 3:00 AM       No Comments

| ಇಮಾಮಹುಸೇನ್ ಗೂಡುನವರ

ಬೆಳಗಾವಿ: ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕ ಮತ್ತು ನಿರ್ವಾಹಕರು ಇನ್ನು ಮುಂದೆ ರಜೆ ಪಡೆಯಲು ಅಧಿಕಾರಿಗಳಿಗೆ ದುಂಬಾಲು ಬೀಳಬೇಕಿಲ್ಲ. ಆನ್​ಲೈನ್​ನಲ್ಲೇ ಅರ್ಜಿ ಸಲ್ಲಿಸಿ ತುರ್ತು ರಜೆ ಪಡೆದುಕೊಳ್ಳಬಹುದು!

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್​ಡಬ್ಲ್ಯುಕೆಆರ್​ಟಿಸಿ) ಉಳಿದೆಲ್ಲ ವಿಭಾಗಗಳಿಗಿಂತಲೂ ಮೊದಲು ಈ ವ್ಯವಸ್ಥೆ ಜಾರಿಗೆ ತಂದಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಸೆ. 1ರಿಂದ ನಿಗಮದ 8 ವಿಭಾಗಗಳ 49 ಘಟಕಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಏನಿದು ವ್ಯವಸ್ಥೆ?: ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ, ಶಿರಸಿ ಹಾಗೂ ಹುಬ್ಬಳ್ಳಿ ವಿಭಾಗಗಳಲ್ಲಿ 24 ಸಾವಿರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ 18 ಸಾವಿರ ಚಾಲಕ ಮತ್ತು ನಿರ್ವಾಹಕರಿದ್ದಾರೆ. ತುರ್ತು ಸಂದರ್ಭ ಅಧಿಕಾರಿಗಳು ರಜೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ. ಅಲ್ಲದೆ, ಏಕಕಾಲಕ್ಕೆ ಬಹಳಷ್ಟು ನೌಕರರು ರಜೆ ಪಡೆಯುತ್ತಿರುವುದರಿಂದ ವಿವಿಧೆಡೆ ಕಾರ್ಯಾಚರಣೆ ನಡೆಸಬೇಕಿದ್ದ ಬಸ್​ಗಳು ದಿನಗಟ್ಟಲೇ ಘಟಕಗಳಲ್ಲೇ ನಿಲ್ಲುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಜತೆಗೆ, ರಜೆ ಮಂಜೂರಾತಿ ವಿಷಯದಲ್ಲೂ ಪಾರದರ್ಶಕತೆ ತರಲು ಸಂಸ್ಥೆಯು ಆನ್​ಲೈನ್ ವ್ಯವಸ್ಥೆ ಜಾರಿಗೊಳಿಸುತ್ತಿದೆ.

ವಾಯವ್ಯ ಸಾರಿಗೆ ಸಂಸ್ಥೆಯ ವೆಬ್​ಸೈಟ್​ನಲ್ಲೇ ಎಲ್​ಪಿಎಸ್ (ಲೀವ್ ಮ್ಯಾನೇಜಮೆಂಟ್ ಸಿಸ್ಟಂ) ಎಂಬ ಅಪ್ಲಿಕೇಷನ್ ಆರಂಭಿಸಲಾಗಿದೆ. ಪ್ರತಿಯೊಬ್ಬ ಚಾಲಕ-ನಿರ್ವಾಹಕರಿಗೆ ಅವರ ಪಿಎಫ್ ಸಂಖ್ಯೆಯದ್ದೇ ಲಾಗಿನ್ ಐಡಿ ಮತ್ತು ಪಾಸ್​ವರ್ಡ್ ನೀಡಲಾಗಿದೆ. ಚಾಲಕ-ನಿರ್ವಾಹಕರು ತುರ್ತು ರಜೆ ಬೇಕಿದ್ದಾಗ ತಾವಿದ್ದಲಿಂದಲೇ ಈ ಅಪ್ಲಿಕೇಷನ್ ಪುಟ ತೆರೆದು ಒಂದು ಅಥವಾ ಎರಡು ದಿನ ರಜೆ ಪಡೆಯಬಹುದು.

ಹೆಚ್ಚಿನ ರಜೆ ಬೇಕಿದ್ದರೆ ನೌಕರರು ಸಲ್ಲಿಸಿದ ಬೇಡಿಕೆಯು ಆಯಾ ಘಟಕ ವ್ಯವಸ್ಥಾಪಕರಿಗೆ ರವಾನೆಯಾಗುತ್ತದೆ. ಆಗ ವ್ಯವಸ್ಥಾಪಕರು ಅಗತ್ಯತೆ ಗಮನಿಸಿ ರಜೆ ಮಂಜೂರುಗೊಳಿಸುತ್ತಾರೆ. ಹಿಂದಿನ ತಿಂಗಳಲ್ಲಿ ಕಡ್ಡಾಯವಾಗಿ 22 ದಿನಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಮಾತ್ರ ಆನ್​ಲೈನ್​ನಲ್ಲಿ ರಜೆ ಮಂಜೂರಾಗುತ್ತದೆ. ನೌಕರರು 48 ಗಂಟೆ ಮುನ್ನವೇ ರಜೆಗೆ ಪ್ರಸ್ತಾವನೆ ಸಲ್ಲಿಸಬೇಕಿದ್ದು, ಆಯಾ ದಿನದ ರಜೆ ಕೋಟಾ ಮುಗಿದ ನಂತರ ಸಲ್ಲಿಸಿದ ಅರ್ಜಿಗಳೆಲ್ಲ ಅವಾಗಿಯೇ ತಿರಸ್ಕೃತವಾಗುತ್ತವೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿ ವಿಭಾಗೀಯ ಸಾರಿಗೆ ಅಧಿಕಾರಿ ಕೆ.ಎಲ್.ಗುಡೆನ್ನವರ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಆನ್​ಲೈನ್ ವ್ಯವಸ್ಥೆಯಿಂದ ಅಗತ್ಯವಿರುವ ಚಾಲಕ- ನಿರ್ವಾಹಕರಿಗೆ ಪಾರದರ್ಶಕವಾಗಿ ರಜೆ ಮಂಜೂರಾಗುತ್ತದೆ. ರಜೆ ಕೊಡಲು ಅಧಿಕಾರಿಗಳು ಅಡ್ಡಗಾಲು ಹಾಕುತ್ತಾರೆ ಎಂಬೆಲ್ಲ ಆರೋಪಗಳು ಕಡಿಮೆಯಾಗುತ್ತವೆ. ಈ ವಿನೂತನ ಆನ್​ಲೈನ್ ವ್ಯವಸ್ಥೆಯನ್ನು ಕಂಪ್ಯೂಟರ್ ಅಥವಾ ಮೊಬೈಲ್​ನಲ್ಲೂ ಬಳಕೆ ಮಾಡಬಹುದು. ಈ ಬಗ್ಗೆ ನೌಕರರಿಗೆ ತರಬೇತಿ ನೀಡುತ್ತಿದ್ದೇವೆ.

| ಗಣೇಶ, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್​ಡಬ್ಲ್ಯುಕೆಆರ್​ಟಿಸಿ, ಬೆಳಗಾವಿ

Leave a Reply

Your email address will not be published. Required fields are marked *

Back To Top