Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಕಂಗನಾ ವಿರುದ್ಧ ಕಾನೂನು ಸಮರ

Thursday, 07.09.2017, 3:00 AM       No Comments

ಕಂಗನಾ ರಣೌತ್ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಗಳೆಲ್ಲವೂ ಇದೀಗ ಬಾಲಿವುಡ್​ನ ಕೆಲವು ಘಟಾನುಘಟಿ ನಟರನ್ನು ಮುಜುಗರಕ್ಕೀಡು ಮಾಡುತ್ತಿವೆ. ‘16 ವರ್ಷದವಳಿದ್ದಾಗ ಮನೆಯ ಕೋಣೆಯಲ್ಲಿ ಆದಿತ್ಯ ಪಾಂಚೋಲಿ ನನ್ನನ್ನು ಕೂಡಿಹಾಕಿ, ಬೇರೆ ರೀತಿ ನಡೆಸಿಕೊಂಡಿದ್ದರು‘ ಎಂಬ ಕಂಗನಾ ಆರೋಪವನ್ನು ಆದಿತ್ಯ ಅಲ್ಲಗೆಳೆದಿದ್ದಾರೆ. ಸುಳ್ಳು ಆರೋಪ ಮಾಡುತ್ತಿರುವ ಕಂಗನಾ ವಿರುದ್ಧ ಕಾನೂನು ರೀತಿ ಕ್ರಮಕ್ಕೆ ಮುಂದಾಗುವುದಾಗಿ ಆದಿತ್ಯ ಹೇಳಿಕೊಂಡಿದ್ದಾರೆ. ‘ಕಂಗನಾ ಈ ರೀತಿಯ ಆರೋಪಗಳನ್ನು ಯಾಕೆ ಮಾಡುತ್ತಿದ್ದಾರೆಂದು ಗೊತ್ತಿಲ್ಲ. ಅವಳೊಬ್ಬ ಹುಚ್ಚು ಹುಡುಗಿ. ಅವಳು ಸರಿಯಾಗಿದ್ದಿದ್ದರೆ, ಸಂದರ್ಶನದಲ್ಲಿ ಹಾಗೆಲ್ಲ ಮಾತನಾಡುತ್ತಿರಲಿಲ್ಲ. ಕಳೆದ ಹಲವು ವರ್ಷದಿಂದ ನಾನು ಚಿತ್ರರಂಗದಲ್ಲಿದ್ದೇನೆ. ಈವರೆಗೂ ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. ನಾನು ಹೆಚ್ಚೇನೂ ಹೇಳುವುದಿಲ್ಲ, ಅವಳಿಗೆ ಹುಚ್ಚು ಹಿಡಿದಿದೆ ಅಷ್ಟೇ. ಕೆಸರಲ್ಲಿ ಕಲ್ಲೆಸೆದರೆ ಅದು ಅವರಿಗೆ ರಾಚುತ್ತದೆ’ ಎಂದಿದ್ದಾರೆ. ‘ಸುಖಾಸುಮ್ಮನೆ ನನ್ನ ಮೇಲೆ ಇಲ್ಲದ ಅಪವಾದ ಹೊರಿಸುತ್ತಿರುವ ಕಂಗನಾ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ. ಬೇರೆಯವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಬಗ್ಗೆ ಹೇಳಿದ ಮಾತುಗಳೆಲ್ಲವೂ ಸುಳ್ಳು ಎಂದು ಅವಳ ಬಾಯಿಂದ ಬರುವವರೆಗೂ ನಾನು ಬಿಡುವುದಿಲ್ಲ’ ಎಂಬುದು ಆದಿತ್ಯ ಪಾಂಚೋಲಿ ವಾದ. ಮತ್ತೊಂದೆಡೆ ಸೆಪ್ಟಂಬರ್ 15ರಂದು ಕಂಗನಾ ನಟನೆಯ ‘ಸಿಮ್ರನ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕೆ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ನಾಟಕಗಳನ್ನು ಕಂಗನಾ ಮಾಡುತ್ತಿದ್ದಾರೆ ಎಂಬ ಮಾತುಗಳು ಬಿ-ಟೌನ್ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿವೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top