Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ಕಂಗನಾ ಮಾತಿನ ಸಿಂಚನ

Wednesday, 13.09.2017, 3:05 AM       No Comments

ಈಗಾಗಲೇ ನಟಿ ಕಂಗನಾ ರಣಾವತ್ ಮೂರು ಬಾರಿ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡಿದ್ದರೂ ಅವರು ಒಂದೊಳ್ಳೆಯ ಬಾಕ್ಸ್​ಆಫೀಸ್ ಗೆಲುವು ಕಾಣದೆ ಎರಡು ವರ್ಷಗಳಾಗಿವೆ. ಈ ಹಿಂದೆ ‘ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರದಲ್ಲಿ ಗೆಲುವಿನ ನಗು ಚೆೆಲ್ಲಿದ್ದು ಬಿಟ್ಟರೆ ಆ ಬಳಿಕ ಬಂದ ‘ಐ ಲವ್ ನ್ಯೂ ಇಯರ್’, ‘ಕಟ್ಟಿ ಬಟ್ಟಿ’ ಮತ್ತು ‘ರಂಗೂನ್’ ಚಿತ್ರಗಳಿಗೆ ಸೋಲಾಯಿತು. ಈಗ ‘ಸಿಮ್ರನ್’ ಮೂಲಕ ಮತ್ತೆ ಮಹಿಳಾಪ್ರಧಾನ ಸಿನಿಮಾಗಳ ಟ್ರ್ಯಾಕ್​ಗೆ ಅವರು ಮರಳಿದ್ದು, ಸೆ. 15ರಂದು ಈ ಚಿತ್ರ ತೆರೆಕಾಣಲಿದೆ. ಪ್ರಚಾರದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಅವರು ಒಂದಷ್ಟು ಮಾಹಿತಿ ಹಂಚಿಕೊಂಡರು.

| ಮದನ್ ಬೆಂಗಳೂರು

‘ಸಿಮ್ರನ್’ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರಲಿದೆ?

ಪ್ರಫುಲ್ ಎಂಬ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಎಲ್ಲರಂತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬುದು ಅವಳ ಗುರಿ. ಈ ನಡುವೆ ಕೆಲವು ಅಪರಾಧ ಕೃತ್ಯದಲ್ಲೂ ಭಾಗಿಯಾಗುತ್ತಾಳೆ. ಆದರೆ ನಾವಿಲ್ಲಿ ಅಪರಾಧವನ್ನು ವೈಭವೀಕರಿಸುವ ಪ್ರಯತ್ನ ಮಾಡಿಲ್ಲ. ಬದಲಿಗೆ, ಅಪರಾಧಿಯೊಬ್ಬಳ ಬದುಕಿನ ಬಗ್ಗೆ ಹೇಳಲಾಗಿದೆ. ಒಂದು ಘಟನೆ ಪ್ರಫುಲ್ಲಳ ಬದುಕನ್ನು ಹೇಗೆ ಬದಲಾಯಿಸುತ್ತದೆ ಎಂಬುದೇ ಕಥೆಯ ತಿರುಳು.

ಇಂಥ ಕಥೆ ಬಾಕ್ಸ್​ಆಫೀಸ್​ನಲ್ಲಿ ಗೆಲ್ಲುತ್ತೆ ಎಂದು ನಿಮಗನಿಸುತ್ತಿರುವುದು ಯಾಕೆ?

ಹುಡುಗಿಯೊಬ್ಬಳು ಏಕಾಏಕಿ ಕ್ರಿಮಿನಲ್ ಆಗುತ್ತಾಳೆ ಎಂದಾಗ ಅವಳ ಮನಸ್ಥಿತಿ ಹೇಗಿರುತ್ತದೆ? ನಿಜಕ್ಕೂ ಅವಳಿಗೆ ಅಂಥ ಪರಿಸ್ಥಿತಿ ಯಾಕೆ ಬರುತ್ತದೆ? ಅದರಿಂದಾಗಿ ಎದುರಾಗುವ ಕಷ್ಟಗಳೇನು? ಕಡೆಗೂ ಅವಳು ಅವುಗಳನ್ನು ಎದುರಿಸಿ, ಯಶಸ್ವಿ ಮಹಿಳೆ ಎನಿಸಿಕೊಳ್ಳುತ್ತಾಳೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವ ರೀತಿ ಭಿನ್ನವಾಗಿದೆ. ಹಾಗಾಗಿ ಪ್ರೇಕ್ಷಕರಿಗೆ ಹೊಸತನದ ಫೀಲ್ ನೀಡುವುದರ ಜತೆಗೆ ಸಿನಿಮಾ ಗೆಲ್ಲುತ್ತೆ ಎಂಬ ಭರವಸೆ ನನಗಿದೆ.

ಚಿತ್ರಕ್ಕಾಗಿ ನೀವು ಮಾಡಿಕೊಂಡ ತಯಾರಿ?

ವಿಶೇಷವಾಗಿ ಭಾಷೆಯ ಬಳಕೆ ಬಗ್ಗೆ ತಿಳಿದುಕೊಳ್ಳಲು ತರಬೇತಿ ಪಡೆದಿದ್ದೇನೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬಂದು ನೆಲೆಸುವ ವಲಸಿಗರ ಬಗ್ಗೆ ಸಿನಿಮಾ ಮಾಡುವಲ್ಲಿ ನಿರ್ದೇಶಕ ಹನ್ಸಲ್ ಮೆಹ್ತಾ ಪರಿಣತರು. ಈ ಬಾರಿ ಒಬ್ಬ ಎನ್​ಆರ್​ಐ ಮಹಿಳೆಯ ಕುರಿತು ಸಿನಿಮಾ ಮಾಡಿದ್ದಾರೆ. ಇಲ್ಲಿಯವರೆಗೂ ಬಾಲಿವುಡ್ ಚಿತ್ರಗಳಲ್ಲಿ ಎನ್​ಆರ್​ಐಗಳನ್ನು ತಪ್ಪಾಗಿ ಬಿಂಬಿಸಲಾಗಿದೆ. ಅವರ ಬಳಿ ದುಡ್ಡಿರುತ್ತದೆ, ಸದಾ ಮೋಜು ಮಸ್ತಿ ಮಾಡುತ್ತಿರುತ್ತಾರೆ ಎಂಬಿತ್ಯಾದಿ ಅಂಶಗಳನ್ನೇ ಹೈಲೈಟ್ ಮಾಡಲಾಗಿರುತ್ತದೆ. ಆದರೆ ಅದು ನಿಜವಲ್ಲ. ‘ಸಿಮ್ರನ್’ ಚಿತ್ರದಲ್ಲಿ ಎನ್​ಆರ್​ಐ ಬದುಕನ್ನು ನೈಜವಾಗಿ ಬಿಂಬಿಸಿದ್ದೇನೆ.

ಅಮೆರಿಕದಲ್ಲಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂದೀಪ್ ಕೌರ್ ಎಂಬ ಮಹಿಳೆಗೂ ‘ಸಿಮ್ರನ್’ ಚಿತ್ರಕ್ಕೂ ಸಂಬಂಧ ಇದೆ ಎಂಬ ಮಾತಿದೆಯಲ್ಲ?

ಅವರಿಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಯಾರ ಬಯೋಪಿಕ್ ಕೂಡ ಅಲ್ಲ. ವಿದೇಶದಲ್ಲಿ ನಡೆದ ಕೆಲವು ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಅಷ್ಟೇ.

ಮಹಿಳಾ ಪ್ರಧಾನ ಸಿನಿಮಾಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದೀರೋ ಅಥವಾ ಅಂಥ ಸಿನಿಮಾಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತಿವೆಯೋ?

ಒಂದರ್ಥದಲ್ಲಿ ಉದ್ದೇಶಪೂರ್ವಕವಾಗಿಯೇ ಮಾಡುತ್ತಿದ್ದೇನೆ ಎನ್ನಬಹುದು. ಇಂಥ ಸಿನಿಮಾಗಳಿಂದ ನನಗೂ ಅನುಕೂಲ ಆಗಿದೆ. ಮಹಿಳಾ ಪ್ರಧಾನ ಸಿನಿಮಾಗಳ ಬರುತ್ತಿವೆ ಎಂದಾಗ ನಾನೇಕೆ ಬೇರೆ ನಾಯಕರ ಚಿತ್ರಗಳಲ್ಲಿ ಚಿಕ್ಕ ಪಾತ್ರ ಮಾಡಲಿ ಎನಿಸುತ್ತದೆ.

ಹೊಸದೊಂದು ಮಕ್ಕಳ ಸಿನಿಮಾ ನಿರ್ದೇಶಿಸುವ ಯೋಜನೆ ಕೂಡ ಹಾಕಿಕೊಂಡಿದ್ದೀರಿ..?

ಹೌದು, ಮೊದಲಿನಿಂದಲೂ ಒಂದು ಸಿನಿಮಾ ನಿರ್ದೇಶಿಸುವ ಆಸೆ ನನ್ನೊಳಗಿತ್ತು. ತುಂಬ ಫನ್ ಆಗಿ ಆ ಚಿತ್ರ ಮೂಡಿಬರಲಿದೆ ಎಂಬುದನ್ನು ಬಿಟ್ಟರೆ ಆ ಬಗ್ಗೆ ಹೆಚ್ಚಿನದನ್ನು ಮಾತನಾಡಲು ಈಗ ಸೂಕ್ತ ಸಮಯ ಅಲ್ಲ ಎನಿಸುತ್ತದೆ.

ಚಿತ್ರದ ನಿರೂಪಣೆ ಹೇಗಿರಲಿದೆ?

ಪ್ರೇಮಿಗಳು, ಒಂಟಿ ಜೀವಿಗಳು, ಸ್ನೇಹಿತರು ಮತ್ತು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬರುವವರು.. ಹೀಗೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಗಮನದಲ್ಲಿಟ್ಟುಕೊಂಡು ಮಾಡಿದ ಚಿತ್ರವಿದು. ಇಡೀ ಚಿತ್ರ ಫನ್ ಆಗಿ ಸಾಗುತ್ತದೆ. ಇದು ಕೇವಲ ಒಂದು ಹೆಣ್ಣಿನ ಕಥೆಯಲ್ಲ. ಕನಸು ಮತ್ತು ಮಹತ್ವಾಕಾಂಕ್ಷೆಗಳ ಕಥೆ.

Leave a Reply

Your email address will not be published. Required fields are marked *

Back To Top