Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಒಳಾಂಗಣಕ್ಕೆ ಸಸ್ಯ ಸಂಕುಲ

Saturday, 11.08.2018, 3:03 AM       No Comments

ನಗರ ಬೆಳೆಯುತ್ತಿದ್ದಂತೆ ಅರಣ್ಯ, ಸಸ್ಯಸಂಕುಲ ನಾಶವಾಗುತ್ತಿದೆ. ಜತೆಗೆ, ವಾಹನದಟ್ಟಣೆಯಿಂದ ವಾಯುಮಾಲಿನ್ಯ ಹೆಚ್ಚಾಗಿದೆ. ಮನೆ ಹೊರಭಾಗದಲ್ಲಿ ಗಿಡಗಳನ್ನು ಬೆಳೆಸುವುದು ಈ ಅಪಾರ್ಟ್​ವೆುಂಟ್ ನಗರಿಯಲ್ಲಿ ಕಷ್ಟಸಾಧ್ಯ. ಅದಕ್ಕೆ ಪರಿಹಾರವಾಗಿ ಗೋಚರಿಸುತ್ತಿರುವುದು ಒಳಾಂಗಣ ಕೈತೋಟ. ವಿಶೇಷವೆಂದರೆ ರಿಯಾಲ್ಟಿ ಕ್ಷೇತ್ರದಲ್ಲೂ ಇದು ಟ್ರೆಂಡ್ ಆಗುತ್ತಿದೆ.

| ಹೊಸಹಟ್ಟಿ ಕುಮಾರ

ಬೆಂಗಳೂರು: ಮನೆಯ ಒಳಾಂಗಣಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ಬೆಳೆಸುವುದು ಹೊಸತೇನಲ್ಲ. ಆದರೆ, ಇದೀಗ ರಿಯಾಲ್ಟಿ ಕ್ಷೇತ್ರದಲ್ಲೂ ಈ ವಿಧಾನಕ್ಕೆ ಆದ್ಯತೆ ದೊರೆಯುತ್ತಿದೆ. ಶುದ್ಧ ಗಾಳಿಗಾಗಿ ಮನೆ ಒಳಗಡೆಯೇ ಗಿಡ ಬೆಳೆಸುವ ಪರಿಪಾಠ ಹೆಚ್ಚಾಗತೊಡಗಿದೆ.

ಇದು ಪರಿಸರ ಸಂರಕ್ಷಣೆ ಕ್ರಮ ಮಾತ್ರವಲ್ಲದೆ, ಇಂಥ ಗಿಡಗಳಿಂದ ಮನೆಯ ಸೌಂದರ್ಯವೂ ಇಮ್ಮಡಿಸುವುದು ಈ ಟ್ರೆಂಡ್ ಹೆಚ್ಚಳಕ್ಕೆ ಕಾರಣವಾಗಿದೆ.

ಮನೆ ಒಳಾಂಗಣದಲ್ಲಿ ವಿವಿಧ ಕಲಾಕೃತಿಗಳು, ಪೀಠೋಪಕರಣಗಳು, ವರ್ಣಚಿತ್ರಗಳು ಜಾಗ ಪಡೆಯುತ್ತಿದ್ದವು. ಇವುಗಳಷ್ಟೇ ಮನೆಯ ಅಂದ ಹೆಚ್ಚಿಸುತ್ತವೆ ಎಂಬ ಕಲ್ಪನೆ ಇತ್ತು. ಇದೀಗ ಈ ಪೀಠೋಪಕರಣಗಳ ಮೇಲೆ ವೈವಿಧ್ಯಮಯ ಗಿಡ-ಬಳ್ಳಿಗಳು ಜಾಗ ಪಡೆದುಕೊಳ್ಳುವ ಜತೆಗೆ ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿವೆ.

ಸಂಶೋಧನೆಯಿಂದ ಸಾಬೀತು: ಮನುಷ್ಯರ ಉಸಿರಾಟದಿಂದ ಇಂಗಾಲ ಉತ್ಪತ್ತಿಯಾಗುತ್ತದೆ. ಇದರಿಂದ ಮನೆ ಗಾಳಿ ಕೂಡ ಮಲಿನವಾಗುತ್ತದೆ. ಮನೆಯಲ್ಲಿಯೇ ಗಿಡಗಳಿದ್ದರೆ ರಾತ್ರಿ ವೇಳೆ ಇಂಗಾಲವನ್ನು ಹೀರಿಕೊಂಡು ಆಮ್ಲಜನಕ ಬಿಡುವುದರಿಂದ ಶುದ್ಧಗಾಳಿ ದೊರೆಯುತ್ತದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಆರ್ಕಿಡ್, ನೀರಿನಲ್ಲಿ ಬೆಳೆಯುವ ವಿವಿಧ ಗಿಡಗಳು ಹಾಗೂ ಬ್ರೊಮೀಲಿಡಾ ಬೆಳೆದರೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತದೆ ಸಂಶೋಧನೆ.

ಒತ್ತಡ ನಿವಾರಣೆ

ಮನೆಯ ಒಳಾಂಗಣದಲ್ಲಿ ಬೆಳೆಯುವ ಗಿಡಗಳು ಸೌಂದರ್ಯ ಹೆಚ್ಚಿಸಿ ಗಾಳಿಯನ್ನು ಶುದ್ಧೀಕರಿಸುವ ಜತೆಗೆ ನಿತ್ಯ ಜಂಜಾಟದ ಒತ್ತಡ ನಿವಾರಣೆಗೂ ಸಹಾಯ ಮಾಡುತ್ತವೆ. ಮನೆಯಲ್ಲಿರುವ ಗಿಡಗಳ ಬಳಿ ಕುಳಿತುಕೊಂಡರೆ ಒತ್ತಡ ನಿವಾರಣೆಯಾಗಿ ಉತ್ತಮ ಗಾಳಿ ದೊರೆಯುತ್ತದೆ. ಕಡಿಮೆ ರಕ್ತದೊತ್ತಡ, ಸ್ನಾಯು ಸೆಳೆತ, ಮಾಂಸಖಂಡಗಳ ನೋವು, ಪಾರ್ಶ್ವ ತಲೆನೋವು, ನೆಗಡಿ, ಕೆಮ್ಮು ಸೇರಿ ವಿವಿಧ ಸಾಮಾನ್ಯ ಆರೋಗ್ಯ ತೊಂದರೆ ನಿವಾರಣೆಗೂ ಗಿಡಗಳು ಸಹಕಾರಿ. ಗಿಡಗಳು ಹೊರಸೂಸುವ ತೇವಾಂಶದ ಗಾಳಿಯಿಂದ ಮನೆಯಲ್ಲಿರುವ ಹಾರುವ ಧೂಳು ನಿವಾರಣೆಯಾಗುತ್ತದೆ. ಮನೆ, ಕಚೇರಿ, ಕೆಲಸ ಮಾಡುವ ಸ್ಥಳಗಳಲ್ಲಿ ಗಿಡ ನೆಟ್ಟರೆ ಕೆಲಸದ ಕಾರ್ಯದಕ್ಷತೆ ಹೆಚ್ಚುತ್ತದೆ ಎಂಬುದು ಕೂಡ ಸಂಶೋಧನೆಯಿಂದ ಪತ್ತೆಯಾಗಿದೆ. ಮನೆ ಒಳಾಂಗಣದಲ್ಲಿ ಗಿಡ ಬೆಳೆಸಿದರೆ ಮನೆಯ ಸೌಂದರ್ಯ ಹೆಚ್ಚುವುದರ ಜತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ ಎಂಬುದು ಸಂಶೋಧನೆಯಿಂದ ಪತ್ತೆಯಾಗಿದೆ. ಈ ಎಲ್ಲ ಕಾರಣಗಳಿಂದ ಹೊಸದಾಗಿ ನಿರ್ವಣವಾಗುತ್ತಿರುವ ಮನೆಗಳಲ್ಲಿ ಈಗ ಗಿಡಗಳಿಗೂ ಜಾಗ ಬಿಡುವುದು ಹೊಸ ಟ್ರೆಂಡ್ ಆಗಿದೆ.

ವಿಷಾನಿಲ ನಿವಾರಣೆ

ಮನೆಯಲ್ಲಿ ಬೆಳೆಸುವ ಗಿಡಗಳಿಂದ ಮನೆ ಸ್ವಚ್ಛವಾಗಿರುವುದರ ಜೊತೆಗೆ ಮಲಿನ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ಮನೆ ವಾತಾವರಣದ ಗಾಳಿಯಲ್ಲಿರುವ ಶೇ.80 ವಿಷಾನಿಲವನ್ನು ಈ ಗಿಡಗಳು ನಿವಾರಿಸುತ್ತವೆ. ಅಲ್ಲದೆ ಸಿಗರೇಟು, ಬೀಡಿ ಹೊಗೆ ಹಾಗೂ ಸೊಳ್ಳೆ ನಿವಾರಣೆಗಾಗಿ ಬಳಸುವ ಕಾಯಿಲ್ ಮೊದಲಾದವುಗಳಿಂದ ಹೊರಬರುವ ವಿಷ ಕಡಿಮೆ ಮಾಡುತ್ತವೆ.

Leave a Reply

Your email address will not be published. Required fields are marked *

Back To Top