Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಒಲ್ಲದವರಿಗೆ ಬಲ್ಲವರ ಹಿತೋಕ್ತಿ

Tuesday, 17.10.2017, 3:05 AM       No Comments

| ಡಾ. ಕೆ.ಎಸ್​ ನಾರಾಯಣಾಚಾರ್ಯ

ಬಕಪಕ್ಷಿ ಕೊಳದಲ್ಲಿ ಒಂಟಿಗಾಲಲ್ಲಿ ನಿಂತು, ತಾನು ಕೊಳದಲ್ಲಿ ಬೆಳೆದ ಒಂದು ಬಿಳೀ ಹೂವೆಂಬ ಭ್ರಾಂತಿಯನ್ನು ಮೀನುಗಳಿಗೆ ಉಂಟುಮಾಡಲು ಚಲಿಸದೆ ನಿಲ್ಲುತ್ತದೆ. ಮೀನು ಇದನ್ನು ನಂಬಿ ಹತ್ತಿರ ಬಂದರೆ, ಫಕ್ಕನೆ ಹಿಡಿದು ತಿಂದೇಬಿಡುತ್ತದೆ! ಈಗ ಮಠಮಾನ್ಯಗಳವರು, ರಾಜಕಾರಣಿಗಳೂ ಹೀಗೆ ಮಾಡಿದರೆ ಶಿಕ್ಷಿಸುವವರಾರು?

ಬುದ್ಧಿ ಹೇಳುವವರು ಇಲ್ಲದೆಯೇ ಸಾಯುವವರ ಕತೆಯಲ್ಲ ಇದು. ಬುದ್ಧಿ ಹೇಳಿಯೂ ಸಾಯುವರೇ ವಿಚಿತ್ರ. ಇವರು ತಾವು ಮಾತ್ರವಲ್ಲ, ತಮ್ಮ ಸಮಾಜವನ್ನೂ ಸಾಯಿಸಿಯೇ ಸಾಯುತ್ತಾರೆ. ಇಂದಿನ ಪಾಕ್ (ಖಛ್ಟಿ್ಟ್ಟಠಠಿಚ್ಞ ಆದ) ಕತೆ ಕೇಳಿ. ಉತ್ತರ ಕೊರಿಯಾದ ಕತೆ ನೋಡುತ್ತಿದ್ದೀರಿ. ಹಿಂದಣ ಹಿಟ್ಲರ್, ಸ್ಟಾಲಿನ್, ಮಾವೋ, ಇಂದಿನ ನಕ್ಸಲೈಟ್, ಮಾವೋವಾದಿಗಳು, ದಾರಿಕೆಟ್ಟ ಇವರ ರಕ್ಷಣೆಯ, ಇವರದೇ ದಾರಿಯ ಎಲ್ಲ ರಾಜಕೀಯ ಪಕ್ಷಗಳ ಕತೆಯೂ ಇದೇ. ದುರ್ಯೋಧನನಿಗೆ ಎಷ್ಟು ಜನ ಬುದ್ಧಿ ಹೇಳಿದರು? ರಾವಣನಿಗೋ? ಇಂದಿನ ಬುದ್ಧಿಜೀವಿಗಳಿಗೋ? ಒಂದೆರಡು ಸುಭಾಷಿತ ಶ್ಲೋಕಗಳು ಇಲ್ಲಿ ನೆನಪಾಗುತ್ತವೆ: ಅರ್ಥನೋಡಿ- ‘ಆಗಸದ ಬಹು ಎತ್ತರದಲ್ಲಿ ಕೆಲವು ಪಕ್ಷಿಗಳು ಹಾರುತ್ತವೆ. ಅಲ್ಲಿ ಯಾರೂ ಕೊಲ್ಲುವವರಿಲ್ಲ ಎಂಬ ನಂಬಿಕೆ ಅವಕ್ಕೆ. ಆದರೆ ನಿಪುಣರಾದ ಬೇಟೆಗಾರರು ಎಲ್ಲಿಯೋ ಇರುತ್ತ ಅವನ್ನು ಕೊಲ್ಲುವುದಿಲ್ಲವೇ? ಅತ್ಯಂತ ಆಳದ ಸಮುದ್ರದಲ್ಲಿ ಹುದುಗಿ ಅಡಗಿದ್ದರೂ ಮೀನುಗಳನ್ನು ಕುಶಲರಾದ ಮೀನುಗಾರರು ಹಿಡಿದು ಭಕ್ಷಿಸುವುದಿಲ್ಲವೇ? ಇದಕ್ಕೆ ಆಳಸಮುದ್ರ ಮೀನುಗಾರಿಕೆ ಎಂದೇ ಕರೆಯುತ್ತಾರೆ. ಎಂತೆಂಥ ಯಂತ್ರಗಳಿವೆ ಗೊತ್ತೆ? ದುರ್ನಡತೆಯಲ್ಲಿರುವ ಒಬ್ಬನು ಯಾವ ಉನ್ನತಸ್ಥಾನದಲ್ಲಿದ್ದರೇನು? ಎಷ್ಟೊಂದು ಅಂಗರಕ್ಷಕರಿದ್ದರೇನು? ಸ್ಥಾನಲಾಭದಿಂದ ರಕ್ಷಿಸಿಕೊಳ್ಳುವುದಾಗುತ್ತದೆಯೇ? ಅಲ್ಲಿ ಮೃತ್ಯುವು ಪ್ರವೇಶಿಸುವಾಗ ನಿನ್ನ ಸುಕೃತವನ್ನು ವಿಚಾರಿಸುವುದಿಲ್ಲ! ‘ಐ ಚಞ ಖಟ್ಟ್ಟ’ ಎಂದರೆ ಅದು ಕೇಳುವುದಿಲ್ಲ. ಕಾಲವು ಕೈಯನ್ನು ಚಾಚಿಯೇ ಇರುತ್ತದೆಯಪ್ಪ! ಎಷ್ಟು ದೂರದಲ್ಲಿ, ಎತ್ತರದಲ್ಲಿ ಅಡಗಿದ್ದರೂ ಹಿಡಿದು ಸಾಯಿಸುತ್ತದೆ‘.

ವ್ಯೋಮೈಕಾಂತ ವಿಹಾರಿಣೋ ಅವ ವಿಹಗಾಃ ಸಂಪ್ರಾಪ್ನುವಂತಿ ಆಪದಂ

ಬಧ್ಯಂತೇ ನಿಪುಣೈಃ ಅಗಾಧ ಸಲಿಲಾತ್ ಮತ್ಸಾ್ಯಃ ಸಮುದ್ರಾದಪಿ |

ದುರ್ನೀತಂ ಕಿಮಾಸ್ತಿ ಕಿಂ ಸುಚರಿತಂ ಕಃ ಸ್ಥಾನಲಾಭೇ ಗುಣಃ

ಕಾಲೋ ಹಿ ವ್ಯಸನಪ್ರಸಾಂತಕರಃ ಗೃಹ್ಣಾತಿ ದೂರಾದಪಿ ||

ಸದ್ದಾಂ ಹುಸೇನನನ್ನು ಅವನು ಅಡಗಿಕೊಂಡಿದ್ದ ಯಾವ ಬಂಕರ್, ಅಡಗುತಾಣವೂ ಕಾಪಾಡಲಿಲ್ಲ. ಈ ಹಿಂದೆ ಹಿಟ್ಲರನ ಗತಿಯೂ ಅದೇ ಆಗಲಿಲ್ಲವೇ? ಎಲ್​ಇಟಿ, ಜೆಡಬ್ಲ್ಯುಡಿ, ಹಿಜ್​ಬುಲ್ ಮುಖಂಡರ ಗತಿಯೂ ಇದೇ ಆಗುತ್ತದೆ. ನಮ್ಮಲ್ಲಿಯೂ ಅನೇಕ ಉದಾಹರಣೆಗಳಿವೆಯಲ್ಲ? ಭಯವೇ? ಒಂದೇ ಎರಡೇ? ಯೋಚಿಸಿ.

‘ಇದೆಲ್ಲ ಗೊತ್ತಿದ್ದದ್ದೇ, ಪದೇಪದೆ ಏಕೆ ನೆನಪಿಸುತ್ತೀರಿ?’ ಎನ್ನುವಿರಾದರೆ, ‘ನೀವು ಪದೇಪದೆ ಮರೆಯುವುದರಿಂದ’ ಎನ್ನಬೇಕಾಗುತ್ತದೆ. ‘ನೀವು’ ಎಂದರೆ ಯಾರು? ಯಾರೂ ಆದೀತು. ಅಯ್ಯಪ್ಪಗಳಿರಾ? ನಿಮ್ಮ ಅಧಿಕಾರ, ದರ್ಪ, ಮೆರೆತದ ದಿನಗಳು ಮುಗಿಯುತ್ತಾ ಬಂದವು. ಗಾಣಿಗನೂ ಎಣ್ಣೆಯೂ ಇಲ್ಲದ ಊರಿನಲ್ಲಿ ಉರಿಯುವ ದೀಪವು, ಎಣ್ಣೆಯಿಲ್ಲದೆ ಬತ್ತಿಯ ಸಹಾಯದಿಂದ ಎಷ್ಟು ಹೊತ್ತು ಉರಿಯಬಲ್ಲದು? ಹಣತೆಯನ್ನು ನೀವು ಎಷ್ಟು ಬೆಳಗಿದರೇನು? ಈ ಯಾವ ‘ಭಾಗ್ಯ’ವೂ ಹತಭಾಗ್ಯರನ್ನು ಕಾಪಾಡಲಾರವು. ಅದಕ್ಕೆ ಈಗ ಬುದ್ಧಿಜೀವಿಗಳ ‘ಛೂ’ ಬಿಡುವುದು, ಇಂದ್ರಜಿತ ನಿಕುಂಭಯಾಗಕ್ಕೆ ಕೂತಂತೆ ಇದೆ. ನಿಮಗೆ ರಾಮಾಯಣದಲ್ಲಿ ನಂಬಿಕೆ ಇಲ್ಲ, ಬಿಡಿ. ನಿಮ್ಮ ನಂಬಿಕೆ ಏನಿದ್ದರೂ ರಾವಣನಲ್ಲಿ, ಅವನ ಮಾಯಾವಿದ್ಯೆಯಲ್ಲಿ, ಮಾರೀಚನ ಮೋಸದಲ್ಲಿ! ರಾಮನನ್ನು ಎಷ್ಟು ಸಲ ಬೈಯುತ್ತೀರಿ? ಬೈಯಿಸುತ್ತೀರಿ? ರಾಜಬಲವಿಲ್ಲದೆ ದುಷ್ಟರು ಕೊಬ್ಬುವುದಿಲ್ಲ. ರಾವಣ ಇಲ್ಲದೆ ಮಾರೀಚ ಅಷ್ಟು ಬಲಿತಿದ್ದನೇ? ದುರ್ಯೋಧನ ಇಲ್ಲದೆ ಕರ್ಣ, ಶಕುನಿಯರು ಹಾಗೆ ಕೊಬ್ಬುತ್ತಿದ್ದರೇ? ಕಲ್ಬುರ್ಗಿ, ಗೌರಿ ಲಂಕೇಶರನ್ನು ನೋಡಿ. ಅವರ ಬೆಂಬಲಿಗರ ಒತ್ತಾಸೆಯಿಲ್ಲದೆ ಹಾಗೆಲ್ಲ ಬರೆಯುತ್ತಿದ್ದರೇ? ಹೇಳುತ್ತಿದ್ದರೇ? ನಾನು ಸಾಕ್ಷ್ಯ ಒದಗಿಸಲಾರೆ. ನಾನು ಸಿಬಿಐ ಅಲ್ಲ. ನನ್ನದು ಬರೀ ತರ್ಕ. 2+2 ಎಂದರೆ= 4 ಎಂಬುವ ನ್ಯಾಯರೀತಿ. ‘ರಾಜಾ ರಾಷ್ಟ್ರಕೃತಂ ಪಾಪಂ’ ಎನ್ನುತ್ತದೆ ಆರ್ಯೋಕ್ತಿ. ರಾಜ್ಯದ ಪ್ರಜೆಗಳು ಮಾಡುವ ಪಾಪಗಳ ಫಲ ರಾಜನದೇ ಆದರೆ, ಪ್ರಜಾಪಾಪಕ್ಕೆ ರಾಜಕೃತ್ಯ, ರಾಜಪ್ರೋತ್ಸಾಹವೂ ಇರಲೇಬೇಕಲ್ಲ? ಕಾಳ್ಗಿಚ್ಚು ಉರಿಯುವಾಗ ಒಣಗಿದ ಮರಗಳಲ್ಲದೆ, ಹಸಿಯವೂ, ಗಂಧದ ಮರವೂ, ಸಾಧುಪ್ರಾಣಿಗಳೂ ಬೆಂದು ಬೂದಿಯಾಗುತ್ತವೆ. ನನ್ನ ಪತ್ನಿಯ ಮಾಂಗಲ್ಯಸರ ಅಪಹೃತವಾಗಿ ಮುಂದಿನ ಮೇ ತಿಂಗಳಿಗೆ ಮೂರುವರ್ಷ ಆಗುತ್ತದೆ. ಕಳ್ಳರನ್ನು ಹಿಡಿದು ನನಗೆ ನ್ಯಾಯ ಕೊಡಿಸುವ ಶಕ್ತಿ, ಧರ್ಮಬುದ್ಧಿ ಇಲ್ಲದವರು, ಬೇರಾರ ಕೊರಳಿಗೆ ಮಾಂಗಲ್ಯ ಕಟ್ಟಿದರೇನಯ್ಯ? ನನ್ನೊಬ್ಬನ ಕತೆಯಲ್ಲ! ಎಷ್ಟು ಕೊಲೆಗಳಾದವು? ಎಷ್ಟು ಕಳ್ಳತನ ಆಯಿತು? ಕಾನೂನು ಸುವ್ಯವಸ್ಥೆ ಜವಾಬ್ದಾರಿ ನಿಮ್ಮದೇ ಆಗಿರುವಾಗ, ‘ದೊರೆಯ ತನಕ ದೂರು’ ಎಂಬ ಗಾದೆಯೂ ಇರುವಾಗ, ನನ್ನಂಥವರು ಶಾಪ ಹಾಕದಿದ್ದರೂ, ತಾಪ ಆಳುಗರನ್ನು ತಟ್ಟುತ್ತದೆ. ಮಾಡಬೇಕಾದುದನ್ನು ಬಿಟ್ಟು ಈಗ ‘ಮೂಢನಂಬಿಕೆಯ ನಿಷೇಧ ಕಾಯ್ದೆ’ಗೆ ಕೈಹಾಕಿದ್ದೀರಿ! ಲಕ್ಷಾಂತರ ಕುರಿಗಳನ್ನು ಕಡಿಯುವುದನ್ನು ನಿಲ್ಲಿಸಬಲ್ಲಿರಾ? ಗೋವಧೆ ನಿಲ್ಲಿಸಬಲ್ಲಿರಾ? ಸ್ತ್ರೀಯರ ಮಾನ ರಕ್ಷಿಸಬಲ್ಲಿರಾ? ನಿರಪರಾಧಿ ಹೆಂಗಸರ ಮೇಲಿನ ಅತ್ಯಾಚಾರ ತಪ್ಪಿಸಬಲ್ಲಿರಾ? ಲಂಚ ನಿಮೂಲನೆ ಮಾಡಬಲ್ಲಿರಾ? ನಿಧನರಾದವರಿಗೆ ಸರ್ಕಾರಿ ಗೌರವದಲ್ಲಿ ನೀಡುವಾಗ ಗೌರವ ಯಾರಿಗೆ? ಎಂಥವರಿಗೆ? ಎಷ್ಟು? ಯಾವಾಗ? ಕ್ಟಟಟಟ್ಟಠಿಜಿಟ್ಞ ಬೇಡವೇನಿರಯ್ಯ? ಶೇಖ್ ಅಬ್ದುಲ್ಲಾ ಸತ್ತಾಗ, ಆಗಣ ಮುಖ್ಯಮಂತ್ರಿ ಗುಂಡೂರಾಯರು ಇಲ್ಲಿ 7 ದಿನ ಶೋಕಾಚರಣೆಗೆ ಆರ್ಡರು ಮಾಡಿದರು! ಕಾಶ್ಮೀರದಲ್ಲೇ ಹಾಗಾಗಲಿಲ್ಲ! ಏಟಟ್ಚಜ ಎಂಬ ಕೀಳುಮಟ್ಟದ ಹೆಂಡ ಕುಡಿದು ಸತ್ತವನ ಕುಟುಂಬಕ್ಕೆ ಪರಿಹಾರಧನ ಕೊಡುವುದು ಆಗ ರೂಢಿಯಾಯ್ತು! ಬಡರೈತ ದಿಕ್ಕಿಲ್ಲದೆ, ರಾಷ್ಟ್ರಕ್ಕೆ ದುಡಿದು ಸತ್ತರೆ? ಉದಾಸೀನವಯ್ಯ!

ಜಾನ್ ಗಾಲ್ಸ್​ವರ್ದಿ ಎಂಬ ಆಂಗ್ಲ ಕಾದಂಬರಿಕಾರ ‘Forsyte Saga’  ಎಂಬ ಆರು ಕಾದಂಬರಿಗಳ ಒಂದು ಶ್ರೇಣಿಯನ್ನೇ ಬರೆದ. ಅದು ನನಗೆ ಎಂ.ಎ. ತರಗತಿಯಲ್ಲಿ ಪಠ್ಯವಾಗಿತ್ತು. ಅದರ ಕೊನೆಯ ಕೃತಿ ಖಜಛಿ ಗಜಜಿಠಿಛಿ Mಟ್ಞkಛಿಢ ಎಂಬುದು. ಮೂರು ತಲೆಮಾರುಗಳ ವೈಚಿತ್ರ್ಯವನ್ನು, ಇಂದಿನ ಜೀವನದ ವಿಗಡತೆಯನ್ನು ಇದು ವಿಡಂಬಿಸುತ್ತದೆ. ಒಂದು ತಲೆಮಾರಿನಲ್ಲಿ ಒಬ್ಬ, ಊಳಿಗಮಾನ್ಯ ಪದ್ಧತಿಯ ಕಾಲದಲ್ಲಿ, ‘ಗಣ್ಯ’ ಎನಿಸಿದ್ದವನು ಸತ್ತರೆ ಅವನ ಗಣ್ಯತೆಯನ್ನು ಅವನ ಶವದ ಹಿಂದೆ ಎಷ್ಟು ಕಾರುಗಳು, ಎಷ್ಟು ಜನ ಅವನಿಗೆ ಪ್ರಿಯರೋ, ಬೇಕಾದವರೋ ಅನುಸರಿಸುತ್ತಾರೆ ಎಂಬ ಲೆಕ್ಕದಿಂದ ಹೇಳಬರುತ್ತಿತ್ತು. ಆ ಕಾಲ ಮುಗಿದಾಗ ಎಷ್ಟೇ ಯೋಗ್ಯನು ಸತ್ತರೂ ನಾಯಿಯೂ ಹಿಂಬಾಲಿಸುವುದಿಲ್ಲ- ಏಕೆ? ಇದುRealistic, Rationalistic Period! ಇಲ್ಲದ ಜನರನ್ನು ಟಿ.ವಿ.ಯವರು ‘ಲಕ್ಷಾಂತರ’ ಮಾಡಿ ತೋರಿಸಿಯಾರು. ಆದರೆ ನೀವು ಸರ್ಕಾರಿ ಮರ್ಯಾದೆ ಕೊಟ್ಟರೆ ಒಬ್ಬರು ಸಭ್ಯರೂ, ಕೊಡದೇ ಪಾಪರ್ ಆಗಿ ಸುಟ್ಟವರು ಅಯೋಗ್ಯರೂ ಆಗುವುದಿಲ್ಲ. ಕೈಯಲ್ಲಿ ಅಧಿಕಾರವಿದೆ! ಏನು ಬೇಕಾದರೂ ಮಾಡುತ್ತೀರಿ; ಇಲ್ಲಿ ಬೇಕಾದುದು ನ್ಯಾಯ, ಧರ್ಮ, ಯೋಗ್ಯತೆಗೆ ಗೌರವ ಸಂದಾಯ! ಬೇರೆ ಏನೂ ಅಲ್ಲ. ಕರ್ನಾಟಕದಲ್ಲಿ, ಬೇರೆಲ್ಲಿ, ಯಾರೂ ನಿರ್ದಯವಾಗಿ ಸಾಯಬಾರದು! ಆದರೆ ದುರ್ದೈವದ ಸಾವು ಸಂಭವಿಸುತ್ತಲೇ ಇದೆಯಲ್ಲ? ಇನ್ನೊಂದು ಸೂಕ್ತಿ ಬರೆದು, ನೋವನ್ನು ನುಂಗಿಕೊಳ್ಳುತ್ತೇನೆ.

ನಾಲೇನೇವ ಸ್ಥಿತ್ವಾ ಪಾದೇನೈಕೇನ ಕುಂಚಿತಗ್ರೀವಂ |

ಜನಯತಿ ಕುಮುದಭ್ರಾಂತಿಂ ವೃದ್ಧಬಕೋ ಬಾಲಮತ್ಸಾ್ಯನಾಂ ||

ಸ್ಥಿತ್ವಾ ಧೈರ್ಯಾತ್ ಉಪಾಂಭಃ ಸಮಜಡಶಿರಾಃ ಚಕ್ರಮೂರ್ತಿಃ ಮುಹೂರ್ತಂ

ಧೂರ್ತಃ ಸಂತ್ಯಕ್ರತೀರಃ ಕ್ವಚಿದಪಿ ಪದಾನ್ ಉಚ್ಜಕೈ ಕುಂಚಿತಾಂಘ್ರಿಃ |

ಪಶ್ಚಾತ್ ಗ್ರೀವಾಂ ಪ್ರಸಾರ್ಯ ತ್ವರಿತಗತಿರಪಾಂ ಮಧ್ಯಂ ಆವಿಶ್ಯ ಚಲಚ್ವಾ

ಚಂಚಲೇಂ ಊರ್ಧ್ವಕಂಠಃ ಕಥಮಪಿ ಶಫರೀಂ ಸ್ಥಾರಿತಾಕ್ಷೋ ಬಕೋ ಅಪಿ ||

ಒಂದು ಬಕಪಕ್ಷಿ. ಮೀನುಗಳನ್ನು ವಂಚಿಸಲು, ಒಂದು ಕೊಳದಲ್ಲಿ ಒಂಟಿಗಾಲಲ್ಲಿ ನಿಂತು, ತಲೆಬಗ್ಗಿಸಿ, ತಾನು ಕೊಳದಲ್ಲಿ ಬೆಳೆದ ಒಂದು ಬಿಳೀ ಹೂವೆಂಬ ಭ್ರಾಂತಿಯನ್ನು ಮೀನುಗಳಿಗೆ ಉಂಟುಮಾಡಲು, ಅತ್ತಿತ್ತ ನೋಡದೆ, ಚಲಿಸದೆ, ಹೊಟ್ಟೆ, ಗಂಟಲು, ತಲೆಗಳನ್ನು ತಪಸ್ವಿಯಂತೆ ಏಕಮಾಡಿ, ಸ್ವಲ್ಪಕಾಲ ನಿಲ್ಲುತ್ತದೆ. ಅದು ಧೂರ್ತಪಕ್ಷಿ! ಒಂದು ಮೀನು ಇದನ್ನು ನಂಬಿ, ಹತ್ತಿರ ಬಂದರೆ, ಫಕ್ಕನೆ ಕೊಕ್ಕಿನಿಂದ ಹಿಡಿದು ತಿಂದೇಬಿಡುತ್ತದೆ! ಅದು ಕೆಲವರ ರೀತಿ! ಈಗ ಸಾಧುಸಂತರು, ಮಠಮಾನ್ಯಗಳ ಧುರೀಣರು ಸೇರಿದಂತೆ ರಾಜಕಾರಣಿಗಳೂ ಈ ವಂಚಕ ವೃತ್ತಿಗೆ ಇಳಿಯುವರಾದರೆ, ಶಿಕ್ಷಿಸುವವರಾರು? ಅಯ್ಯಾ! ನಿಮ್ಮ ಮೂಢನಂಬಿಕೆಯನ್ನು ನೀವು ಮೊದಲು ಬಿಡಿ.

‘ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಎಂದರಲ್ಲ ಒಬ್ಬರು? ತಿದ್ದಲು ಹೊರಟು ‘ಅದಾಗದು’ ಎಂದು ಕ್ರಾಂತಿವೈಫಲ್ಯದ ದಾರಿಯಲ್ಲೇ ಅಲ್ಲವೇ ಈ ಮಾತು ಬಂದದ್ದು? ಬುದ್ಧನೂ ‘Workout your salvation individually’  ಎಂದನಲ್ಲ? ನನ್ನ ಮಾತು ನೀವು ಕೇಳುವುದಿಲ್ಲ, ಬಿಡಿ. ಆಗುವುದಾಗಲಿ!

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top